Advertisement
ಮೊದಲ ಹಂತದಲ್ಲಿ ಮಂಗಳೂರು ವಿಭಾಗದಿಂದ ಹೊರಡುವ ಕೆಎಸ್‌ಆರ್‌ಟಿಸಿ ರಾಜಹಂಸ, ವೋಲ್ವೋ, ಸ್ಲಿàಪರ್ ಬಸ್‌ಗಳಿಗೆ ವೈ ಫೈ ಸಿಸ್ಟಂ ಅಳವಡಿಸುವ ಕಾರ್ಯ ಕೆಎಸ್‌ಆರ್‌ಟಿಸಿ ಮಂಗಳೂರಿನ ಕುಂಟಿಕಾನ ಘಟಕ ದಲ್ಲಿ ಸದ್ಯ ನಡೆಯುತ್ತಿದೆ. ಬೆಂಗಳೂರು ಹಾಗೂ ಮೈಸೂರು ಘಟಕ ವ್ಯಾಪ್ತಿಯ ಸರಕಾರಿ ಬಸ್‌ಗಳಿಗೂ ವೈ ಫೈ ಅಳವಡಿಕೆ ಕೆಲಸ ಆರಂಭ ವಾಗಿದೆ. ಬೆಂಗಳೂರಿನ ಬಿಎಂಟಿಸಿಯ ಕೆಲವು ಬಸ್‌ಗಳಲ್ಲಿ ವೈ ಫೈ ವ್ಯವಸ್ಥೆಯನ್ನು ಈಗಾಗಲೇ ಜಾರಿ ಗೊಳಿಸಲಾಗಿದೆ.
ಪ್ರಸ್ತುತ ಪ್ರಥಮ ದರ್ಜೆಯ ಕೆಎಸ್ ಆರ್‌ಟಿಸಿ ಬಸ್‌ಗಳಲ್ಲಿ ವೈ ಫೈ ಅಳವಡಿಸಲಾಗುತ್ತಿದ್ದು, ಎರಡನೇ ಹಂತದಲ್ಲಿ ಮಂಗಳೂರು ವಿಭಾಗ ದಿಂದ ಹೊರಡುವ ಎಲ್ಲ ಸರಕಾರಿ ಬಸ್ ಗಳಿಗೂ ವೈ ಫೈ ಅಳವಡಿಕೆ ನಡೆಯ ಲಿದೆ. ಹಳ್ಳಿಗಳಿಗೆ ಸಂಚರಿಸುವ ಬಸ್ ಗಳಲ್ಲೂ ಕೂಡ ಪ್ರಯಾಣಿಕರು ಉಚಿತವಾಗಿ ಇಂಟರ್‌ನೆಟ್ ಸೌಕರ್ಯ ಪಡೆದುಕೊಳ್ಳಬಹುದು.
Related Articles
Advertisement
ಖಾಸಗಿ ಬಸ್‌ನಲ್ಲೂ ಇದೆಕರಾವಳಿಯ ಕೆಲವೇ ಕೆಲವು ಖಾಸಗಿ ಬಸ್‌ಗಳಲ್ಲಿ ವೈ ಫೈ ಸೌಲಭ್ಯವಿದೆ. ವರ್ಷದ ಹಿಂದೆಯೇ ಕೆಲವು ಬಸ್‌ಗಳಲ್ಲಿ ಇದನ್ನು ಅಳವಡಿಸಲಾಗಿದೆ. ಕಂಡಕ್ಟರ್ ನೀಡುವ ಪಾಸ್‌ವರ್ಡ್!
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ವೈ ಫೈ ವ್ಯವಸ್ಥೆ ಅನುಷ್ಠಾನಕ್ಕೆ ಬಂದ ಮೇಲೆ ಆ ಬಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಬಯಸಿದಲ್ಲಿ ಉಚಿತವಾಗಿ ಇಂಟರ್ನೆಟ್ ಬಳಸಬಹುದು. ಬಸ್‌ನೊಳಗೆ ಕುಳಿತ ಬಳಿಕ ಪ್ರಯಾಣಿಕ ತನ್ನ ಮೊಬೈಲ್‌ನಲ್ಲಿ ವೈ ಫೈ ಅನ್ನು ಆನ್ ಮಾಡಿದಾಗ ಪಾಸ್‌ವಾರ್ಡ್ ನಿರೀಕ್ಷಿಸುತ್ತದೆ. ಆಗ ಬಸ್‌ನ ಕಂಡಕ್ಟರ್‌ರವರಲ್ಲಿ ಪಾಸ್‌ವರ್ಡ್ ಕೇಳಬಹುದು. ಅವರು ನೀಡುವ ಪಾಸ್‌ವರ್ಡ್ ಅನ್ನು ಮೊಬೈಲ್‌ನಲ್ಲಿ ಹಾಕಿದಾಗ ಮಾತ್ರ ಕೆಎಸ್‌ಆರ್‌ಟಿಸಿ ವೈ ಫೈ ಸೌಲಭ್ಯ ಪ್ರಯಾಣಿಕರಿಗೆ ಲಭ್ಯವಾಗುತ್ತದೆ. ದಿನೇಶ್ ಇರಾ