Advertisement

6 ಗ್ರಾಮಗಳ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

02:52 PM Mar 19, 2022 | Team Udayavani |

ಬೀದರ: ಆರು ಗಡಿ ಗ್ರಾಮಗಳ ವಿದ್ಯಾರ್ಥಿಗಳಿಗೆ 2022-23ನೇ ಸಾಲಿನಲ್ಲಿ ಸಂಪೂರ್ಣ ಉಚಿತ ಪ್ರವೇಶ ಕಲ್ಪಿಸುವುದಾಗಿ ತಾಲೂಕಿನ ಹಮಿಲಾಪುರ ಗ್ರಾಮದ ವಿ.ಎಂ. ರಾಂಪುರೆ ಪಬ್ಲಿಕ್‌ ಶಾಲೆ ಘೋಷಿಸಿದೆ.

Advertisement

ಸುಲ್ತಾನಪುರ, ಜಾಂಪಾಡ, ಅಷ್ಟೂರು, ಇಮಾಮಬಾದ್‌ ಹಳ್ಳಿ, ಜಾಂಪಾಡ, ಚಿಲ್ಲರ್ಗಿ ಗ್ರಾಮಗಳ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಮಹೇಶ ಎಸ್‌. ರಾಂಪುರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಡಿ ಭಾಗದ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗುವುದು ಉಚಿತ ಪ್ರವೇಶದ ಉದ್ದೇಶವಾಗಿದೆ. ಗಡಿ ಗ್ರಾಮಗಳ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿರುವ ಅವರು, ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಾಲೆಯು ಕೋವಿಡ್‌ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಪಾಲಕರ ಭಾರ ಕಡಿಮೆ ಮಾಡಲು ಎರಡು ವರ್ಷಗಳಲ್ಲಿ ಒಟ್ಟು 65 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಿತ್ತು ಎಂದು ತಿಳಿಸಿದ್ದಾರೆ.

2020-21ರಲ್ಲಿ ಸಿಕಿಂದ್ರಾಪುರ, ಹಮಿಲಾಪುರ, ನೌಬಾದ್‌, ಮೀರಾಗಂಜ್‌, ಅಲ್ಲಾಪುರ, ಮರಕಲ್‌, ವಾಲ್ದೊಡ್ಡಿ, ಚಂದಾಪುರ, ಅಗ್ರಹಾರ ಗ್ರಾಮಗಳ ಒಟ್ಟು 40 ಹಾಗೂ 2021-22ನೇ ಸಾಲಿನಲ್ಲಿ ಚಿಕ್ಕಪೇಟೆ, ಗುಮ್ಮಾ, ಶ್ರೀಮಂಡಲ್‌, ಬೀದರನ ನಾವದಗೇರಿ, ಬರೀದ್‌ ಶಾಹಿ ಉದ್ಯಾನ ಪ್ರದೇಶ, ನಂದಗಾಂವ್‌, ಮಿರ್ಜಾಪುರ ಕೆ, ನ್ಯಾಮತಾಬಾದ್‌ ಹಾಗೂ ಅಗ್ರಹಾರ ಗ್ರಾಮಗಳ 25 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗಿತ್ತು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next