Advertisement

ಬಿಪಿಎಲ್‌ ಕುಟುಂಬಕ್ಕೆ ಉಚಿತ ಅಡುಗೆ ಅನಿಲ

06:25 AM Jul 23, 2017 | Team Udayavani |

ಬಾಗಲಕೋಟೆ: ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಬಿಪಿಎಲ್‌ ಕುಟುಂಬಗಳಿಗೆ ಉಚಿತವಾಗಿ ಅನಿಲ ಸಂಪರ್ಕ ಕಲ್ಪಿಸಲಾಗುವುದು. ಈ ಯೋಜನೆ ಜುಲೈ ಅಂತ್ಯದಲ್ಲಿ ಜಾರಿಗೊಳ್ಳಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಯು.ಟಿ.ಖಾದರ್  ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಈಗ ಬಿಪಿಎಲ್‌-ಎಪಿಎಲ್‌ ಆದ್ಯತೆ ಕುಟುಂಬ ಮತ್ತು ಆದ್ಯತೆ ರಹಿತ ಕುಟುಂಬ ಎಂಬ ಹೊಸ ಮಾದರಿ ಮಾಡಲಾಗಿದೆ. ಆದ್ಯತೆ ಕುಟುಂಬಗಳು ಅರ್ಜಿ ಕೊಟ್ಟ ತಕ್ಷಣ ಅವರಿಗೆ ಉಚಿತವಾಗಿ ಗ್ಯಾಸ್‌ ಮತ್ತು ಒಲೆ ನೀಡುವ ಯೋಜನೆ ಜಾರಿಗೊಳಿಸಿದ್ದು, ಅದನ್ನು ಈ ಮಾಸಾಂತ್ಯಕ್ಕೆ ಅನುಷ್ಠಾನಗೊಳಿಸಲಾಗುವುದು. ಇದಕ್ಕಾಗಿ ಗ್ರಾಪಂ ವ್ಯಾಪ್ತಿಯಲ್ಲೇ ಅರ್ಜಿ ಪಡೆಯುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಎಲ್‌ಇಡಿ ಬಲ್ಬ್: ಮನೆಯಲ್ಲಿ ಅಡುಗೆ ಅನಿಲ ಸಂಪರ್ಕ ಹೊಂದಿದವರು, ತಮಗೆ ಸೀಮೆಎಣ್ಣೆ ಬೇಡವೆಂದು ಘೋಷಿಸಿ
ದರೆ, ಅವರಿಗೆ ರೀಚಾರ್ಜ್‌ ಮಾಡುವ 2 ಎಲ್‌ಇಡಿ ಬಲ್ಬ್ಗಳನ್ನು ಬಹುಮಾನವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 14.70 ಲಕ್ಷ ಜನರು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದು, 2 ತಿಂಗಳಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next