Advertisement

ಬಡ ರೈತ ಮಕ್ಕಳಿಗೆ ವಸತಿ ನಿಲಯಕ್ಕೆ ಉಚಿತ ಪ್ರವೇಶ

06:38 AM Feb 24, 2019 | |

ಕಲಬುರಗಿ: ಪ್ರಸಕ್ತ 2018-19ನೇ ಸಾಲಿನ ಮುಂಗಾರು- ಹಿಂಗಾರು ಎರಡು ಹಂಗಾಮುಗಳು ಸಂಪೂರ್ಣ ಕೈ ಕೊಟ್ಟ ಪರಿಣಾಮ ವ್ಯಾಪಕ ಬರಗಾಲ ಬಿದ್ದು ನೇಗಿಲಯೋಗಿ ತುಂಬಾ ಸಂಕಷ್ಟದಲ್ಲಿರುವುದರಿಂದ ತಮ್ಮ ಶ್ರೀಗುರು ವಿದ್ಯಾಪೀಠದ ವಸತಿ ನಿಲಯಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗುವುದು ಎಂದು ಖಣದಾಳದ ಶರಣಮ್ಮ ಡಿಗ್ಗಾವಿ ಸ್ಮರಣಾರ್ಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ವ್ಹಿ. ಡಿಗ್ಗಾವಿ ಹೇಳಿದರು.

Advertisement

ಖಣದಾಳ ಶ್ರೀಗುರು ವಿದ್ಯಾಪೀಠದ ಪ್ರಾಥಮಿಕ ಹಾಗೂ ಪ್ರೌಢ ಶಾಲೆ 12ನೇ ವಾರ್ಷಿಕೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, 2015 -16ನೇ ಸಾಲಿನಲ್ಲಿ ಭೀಕರ ಬರಗಾಲ ಎದುರಾದಾಗ ಸಾವಿರಾರು ಎತ್ತುಗಳಿಗೆ, ಅನ್ನದಾತನಿಗೆ ಆಶ್ರಯ ಕಲ್ಪಿಸಿದ್ದನ್ನು ಈ ಭಾಗದ ಜನ ಈಗಲೂ ನೆನಪಿಸುತ್ತಾರೆ. ಈಗಲೂ ಕಷ್ಟದಲ್ಲಿರುವುದರಿಂದ ವಸತಿ ನಿಲಯದಲ್ಲಿ 150ಕ್ಕೂ ಹೆಚ್ಚು ಪ್ರಥಮ, ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ವಾಸ್ತವ್ಯ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ವಿವರಣೆ ನೀಡಿದರು.

ಮಹಾಪೌರರಾದ ಮಲ್ಲಮ್ಮ ವಳಕೇರಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಪಠ್ಯದ ಜತೆಗೆ ಬದುಕಿನ ಮೌಲ್ಯಗಳನ್ನು ಕಲಿಸಿ ಕೊಡುತ್ತಿರುವ ಶ್ರೀಗುರು ವಿದ್ಯಾಪೀಠದ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ. ವಿದ್ಯಾರ್ಥಿಗಳು ಪಾಠದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳಬೇಕೆಂದರು.

ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕಿ ಪ್ರೇಮಿಳಾಬಾಯಿ ಡಿಗ್ಗಾವಿ, ಸಂಸ್ಥೆ ಕಾರ್ಯದರ್ಶಿ ಶಿವರಾಜ ವಿ. ಡಿಗ್ಗಾವಿ, ಪೂಜಾ ಬಿ. ಡಿಗ್ಗಾವಿ, ಶಾಲೆಯ ಪ್ರಾಂಶುಪಾಲರಾದ ಪಾರ್ವತಿ ಪಾಟೀಲ ಹಾಗೂ ಶಿಕ್ಷಕ ವರ್ಗ, ಸಿಬ್ಬಂದಿ ಹಾಜರಿದ್ದರು. ಇದೇ ವೇಳೆ ಉತ್ತಮ ಅಂಕ ಪಡೆದ ಶಾಲೆಗೆ ಪ್ರಥಮ ಸ್ಥಾನ ಪಡೆದ ಮಧು ಜಮಾದಾರ, ಅಮೀತ, ಮೇಘನಾ ಅವರಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸಹ ಶಿಕ್ಷಕಿ ನಾಗರಾಣಿ, ಜೆಸಿಂತಾ ನಿರೂಪಿಸಿದರು. ಬಸವರಾಜ ಬಿರಾದಾರ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಹಲವು ಯೋಜನೆ ಬಡ ಹಾಗೂ ರೈತರ ಮಕ್ಕಳಿಗೆ ವಸತಿ ನಿಲಯಕ್ಕೆ ಉಚಿತ ಪ್ರವೇಶದ ಜತೆಗೆ ಪರಿಣಾಮಕಾರಿ ಬೋಧನೆ ಸೇರಿದಂತೆ ಇತರ ಕಾರ್ಯಗಳ ಮೂಲಕ ವಿದ್ಯಾರ್ಥಿ ಪ್ರತಿಭೆ ಹೊರ ಹೊಮ್ಮಿಸಲು ಹಾಗೂ ಶೈಕ್ಷಣಿಕ ಗುಣಮಟ್ಟತೆ ಹೆಚ್ಚಿಸಲು ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.  ಬಸವರಾಜ ವಿ. ಡಿಗ್ಗಾವಿ, ಅಧ್ಯಕ್ಷರು, ಶರಣಮ್ಮ ಡಿಗ್ಗಾವಿ ಸ್ಮರಣಾರ್ಥ ಶಿಕ್ಷಣ ಸಂಸ್ಥೆ

Advertisement
Advertisement

Udayavani is now on Telegram. Click here to join our channel and stay updated with the latest news.

Next