Advertisement

ಪುತ್ರಿಯ ಅನಾರೋಗ್ಯ ನೆಪವೊಡ್ಡಿ ಮಹಿಳೆಯಿಂದ 19 ಲಕ್ಷ ದೋಚಿದ ಇನ್‌ಸ್ಟ್ರಾಗ್ರಾಂ ಸ್ನೇಹಿತ.!

01:12 PM Feb 28, 2022 | Team Udayavani |

ಬೆಂಗಳೂರು: ಸಾಮಾಜಿಕ ಜಾಲತಾಣ ಇನ್‌ಸ್ಟ್ರಾಗ್ರಾಂ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ತನ್ನ ಪುತ್ರಿಯ ಅನಾರೋಗ್ಯ ನೆಪವೊಡ್ಡಿ ಬಸವನಗುಡಿಯ ಸುಮಾ ಎಂಬುವರಿಂದ ಮೂರು ವರ್ಷಗಳಿಂದ ಬರೋಬರಿ 19 ಲಕ್ಷ ರೂ. ದೋಚಿದ್ದಾನೆ.

Advertisement

ಈ ಸಂಬಂಧ ದಕ್ಷಿಣ ವಿಭಾಗದ ಸೆನ್‌ ಠಾಣೆಯಲ್ಲಿ ಅಪರಿಚಿತನ ವಿರುದ್ಧ ಎಫ್ಐಆರ್‌ ದಾಖಲಾಗಿದೆ. ಸುಮಾ ಅವರನ್ನು ಇನ್‌ಸ್ಟ್ರಾಗ್ರಾಂನಲ್ಲಿ ಪರಿಚಯ ಮಾಡಿಕೊಂಡ ಯೂಸೂಫ್ ಮ್ಯಾಥ್ಯೂ ಎಂಬ ವ್ಯಕ್ತಿ ವಿಡಿಯೋ ಕಾಲ್‌ ಮಾಡಿ, ತನ್ನ ಪುತ್ರಿಗೆ ಅನಾರೋಗ್ಯ ಎಂದು ತೋರಿಸಿದ್ದಾನೆ. ಬಳಿಕ ಕಸ್ಟಮ್ಸ್‌ ಇಲಾಖೆ ನಕಲಿ ರಶೀದಿ ಕಳುಹಿಸಿ ಕೂಡಲೇ ಹಣ ಕಳುಹಿಸುವಂತೆ ಕೋರಿದ್ದಾನೆ. ಅದನ್ನು ನಂಬಿದ ಸುಮಾ ಅವರು ತಮ್ಮ ಖಾತೆ ಹಾಗೂ ಅವರ ಸ್ನೇಹಿತರ ಖಾತೆಯಿಂದ 2019ರ ಜನವರಿ 14ರಿಂದ ಇದುವರೆಗೆ 19,03,467 ರೂ. ವರ್ಗಾವಣೆ ಮಾಡಿದ್ದಾರೆ. ಹಣ ವಾಪಸ್‌ ಕೊಡುವುದಾಗಿ ಹೇಳಿದ್ದ ಮ್ಯಾಥ್ಯೂ ಇದುವರೆಗೂ ಹಣ ಕೊಟ್ಟಿಲ್ಲ.

ಆತನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸುಮಾ ದೂರು ನೀಡಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಸೆನ್‌ ಠಾಣೆ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next