Advertisement

ಮನೆ ಬಾಡಿಗೆ ಬಗ್ಗೆ ಜಾಹೀರಾತು ಹಾಕಿದ ಮಹಿಳೆಗೆ 1.4 ಲಕ್ಷ  ಟೋಪಿ

02:37 PM Jul 29, 2023 | Team Udayavani |

ಬೆಂಗಳೂರು: ಸೇನಾ ಸಿಬ್ಬಂದಿ ಸೋಗಿನಲ್ಲಿ ಮನೆ ಬಾಡಿಗೆಗೆ ಪಡೆಯುವುದಾಗಿ ನಂಬಿಸಿದ ಸೈಬರ್‌ ಕಳ್ಳರು ಮಹಿಳೆಯೊಬ್ಬರಿಗೆ 1.4 ಲಕ್ಷ ರೂ. ವಂಚಿಸಿದ್ದಾರೆ.

Advertisement

ಬಸವನಪುರದ ನಿವಾಸಿ ಸುಷ್ಮಾ ಶ್ರೀರಾಮ್‌ (35) ವಂಚನೆಗೊಳಗಾದವರು.

ಸುಷ್ಮಾ ತಮ್ಮ ಸ್ವಂತ ಮನೆಯನ್ನು ಬಾಡಿಗೆಗೆ ನೀಡುವುದಾಗಿ ಜಾಹೀರಾತು ಹಾಕಿದ್ದರು. ಇತ್ತೀಚೆಗೆ ಪರಿಚಿತ ವ್ಯಕ್ತಿಯೊಬ್ಬರು ಸೇನಾ ಸೋಗಿನಲ್ಲಿ ಕರೆ ಮಾಡಿ ತಮಗೆ ಹೈದರಾಬಾದ್‌ನಿಂದ ಬೆಂಗಳೂರಿಗೆ ವರ್ಗಾವಣೆಯಾಗಿದ್ದು, ನಿಮ್ಮ ಮನೆ ಬಾಡಿಗೆಗೆ ಪಡೆಯುವುದಾಗಿ ನಂಬಿಸಿದ್ದರು. 2 ಲಕ್ಷ ರೂ. ಠೇವಣಿ ಮಾಡುವುದಾಗಿ ನಂಬಿಸಿದ್ದರು. ಮೊದಲು ನಮ್ಮ ಖಾತೆಗೆ 1 ರೂ. ಹಾಗೂ 5 ರೂ. ಜಮೆ ಮಾಡುವಂತೆ ಸೂಚಿಸಿದ್ದರು. ಜಮೆ ಮಾಡಿದ ಕೆಲ ಹೊತ್ತಿನಲ್ಲಿ ಸುಷ್ಮಾ ಬ್ಯಾಂಕ್‌ ಖಾತೆಗೆ 1 ರೂ. ಹಾಗೂ 5 ರೂ. ಜಮೆಯಾಗಿತ್ತು. ನಂತರ ಸುಷ್ಮಾ ಅವರಿಂದ ಹಂತ-ಹಂತವಾಗಿ 1.4 ಲಕ್ಷ ರೂ. ಹಾಕಿಸಿಕೊಂಡ ಸೈಬರ್‌ ಕಳ್ಳರು, ಅಸಲು ಹಣವನ್ನೂ ಹಿಂತಿರುಗಿಸದೆ, ಸಂಪರ್ಕಕ್ಕೂ ಸಿಗದೇ ವಂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next