Advertisement

Shivashakti: ಚಂದ್ರನ ಶಿವಶಕ್ತಿ ಪಾಯಿಂಟ್‌ನಲ್ಲಿ ಪ್ರಜ್ಞಾನ್‌ನಿಂದ ಶಿಲೆಗಳ ತುಣುಕು ಪತ್ತೆ!

11:58 PM Jul 02, 2024 | Team Udayavani |

ನವದೆಹಲಿ: ಚಂದ್ರನ ಕುರಿತ ಅನ್ವೇಷಣೆಯಲ್ಲಿ ಮಹತ್ವದ ಹೆಜ್ಜೆಯೆಂಬಂತೆ, ಭಾರತದ ಚಂದ್ರಯಾನ-3ರ ಪ್ರಜ್ಞಾನ್‌ ರೋವರ್‌ ಪತ್ತೆ ಹಚ್ಚಿದ್ದ ಕೆಲವು ಪ್ರಮುಖ ಅಂಶಗಳು ಇತ್ತೀಚೆಗೆ ಬಹಿರಂಗಗೊಂಡಿವೆ.

Advertisement

ಚಂದಿರನ ಒಂದು ದಿನ (ಭೂಮಿಯ 29.5 ದಿನ)ದಲ್ಲಿ ರೋವರ್‌ ಶಶಾಂಕನ ದಕ್ಷಿಣ ಮೇಲ್ಮೈನಲ್ಲಿ ಸುಮಾರು 103 ಮೀಟರ್‌ನಷ್ಟು ಸುತ್ತಾಡಿದೆ. ವಿಕ್ರಂ ಲ್ಯಾಂಡರ್‌ ಇಳಿದಿದ್ದಂತಹ ಸ್ಥಳದಲ್ಲಿರುವ ಸಣ್ಣ ಕುಳಿಯಲ್ಲಿ ಹಾಗೂ ಆ ಕುಳಿಯ ಗೋಡೆಗಳಲ್ಲಿ ಮತ್ತು ಅಂಚಿನ ಸುತ್ತಲೂ ಸಣ್ಣದಾದ ಶಿಲೆಗಳ ತುಣುಕು (1ರಿಂದ 11.5 ಸೆ.ಮೀ. ಗಾತ್ರದವು) ಗಳನ್ನು ರೋವರ್‌ ಪತ್ತೆಹಚ್ಚಿತ್ತು. ಗ್ರಹದ ತಳಪಾಯವನ್ನು ಆವರಿಸಿರುವ ಘನ ಪದರದಲ್ಲಿನ ಶಿಲೆಗಳು ಕ್ರಮೇಣ ಒರಟಾಗುತ್ತವೆ ಎಂಬ ಈ ಹಿಂದಿನ ಅಧ್ಯಯನಗಳಿಗೆ ಇದು ಪೂರಕವಾಗಿದೆ.

ಶಿವಶಕ್ತಿ ಪಾಯಿಂಟ್‌ನ ಸುಮಾರು 30 ಮೀಟರ್‌ನಷ್ಟು ಪಶ್ಚಿಮಕ್ಕೆ ಹೋದಂತೆ ಶಿಲೆಗಳ ತುಣುಕುಗಳ ಪ್ರಮಾಣ ಹಾಗೂ ಗಾತ್ರವೂ ಹೆಚ್ಚಿರುವುದನ್ನು ರೋವರ್‌ ಗುರುತಿಸಿತ್ತು. ಇವುಗಳ ಪೈಕಿ 2 ಶಿಲೆಗಳು ಅವನತಿಯ ಕುರುಹನ್ನು ಪ್ರದರ್ಶಿಸಿದೆ. ಅಂದರೆ, ಕಾಲಗಳು ಉರುಳಿದಂತೆ ಚಂದಿರನ ಮೇಲ್ಮೈನಲ್ಲಿರುವ ವಸ್ತುಗಳ ಮೇಲೆ ವಾತಾವರಣವು ಹೇಗೆ ಪ್ರಭಾವ ಬೀರುತ್ತವೆ ಎನ್ನುವುದರ ಮಾಹಿತಿಯನ್ನು ಇದು ನೀಡುತ್ತದೆ. ಶಿಲೆಗಳ ತುಣುಕುಗಳ ಹಂಚಿಕೆ ಮತ್ತು ಮೂಲವನ್ನು ತಿಳಿಯಲು ಇದು ಸಹಾಯಕವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next