ಸಿಡ್ನಿ: ಮೆಲ್ಬರ್ನ್ ಕ್ರಿಕೆಟ್ ಕ್ಲಬ್ನ ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಪಿಂಕ್ಬಾಲ್ ಟೆಸ್ಟ್ ಜನಕ ಕೀತ್ ಬ್ರಾಡ್ಶಾ (58) ಬುಧವಾರ ನಿಧನ ಹೊಂದಿದರು.
“ಕ್ರಿಕೆಟ್ ವಲಯದಲ್ಲಿ ಪ್ರೀತಿಪಾತ್ರರಾಗಿದ್ದ ಮತ್ತು ಗೌರವಾನ್ವಿತರಾಗಿದ್ದ ಕೀತ್ ಬ್ರಾಡ್ಶಾ ಇನ್ನಿಲ್ಲ’ ಎಂದು “ಕ್ರಿಕೆಟ್ ಆಸ್ಟ್ರೇಲಿಯ’ ತಿಳಿಸಿದೆ.
ಬ್ರಾಡ್ಶಾ 1980ರಲ್ಲಿ ಟಾ
ಸ್ಮೆನಿಯಾ ತಂಡದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರು. ಬಳಿಕ ಇಂಗ್ಲೆಂಡ್ಗೆ ತೆರಳಿದರು. 2006ರಲ್ಲಿ ಎಂಸಿಸಿಗೆ ಪ್ರಥಮ ಬ್ರಿಟಿಷೇತರ ಸಿಇಒ ಆಗಿ ನೇಮಕಗೊಂಡರು.
ಇದನ್ನೂ ಓದಿ:ಮಿಂಚಿದ ಮಿಚೆಲ್; ಕಿವೀಸ್ ಟಿ20 ವಿಶ್ವಕಪ್ ಫೈನಲ್ಗೆ ಲಗ್ಗೆ
2011ರಲ್ಲಿ ಆಸ್ಟ್ರೇಲಿಯಕ್ಕೆ ಮರಳಿದ್ದ ಅವರು ಸೌತ್ ಆಸ್ಟ್ರೇಲಿಯ ಕ್ರಿಕೆಟ್ ಸಂಸ್ಥೆಯ ಸಿಇಒ ಆಗಿ ನೇಮಕಗೊಂಡು ಹೊನಲು ಬೆಳಕಿನ ಟೆಸ್ಟ್ ಕ್ರಿಕೆಟ್ ಆರಂಭಕ್ಕೆ ಶ್ರಮಿಸಿ ಯಶಸ್ವಿಯಾದರು. ಅದರಂತೆ 2015ರಲ್ಲಿ ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್ ನಡುವೆ ಅಡಿಲೇಡ್ನಲ್ಲಿ ಮೊದಲ ಪಿಂಕ್ಬಾಲ್ ಟೆಸ್ಟ್ ನಡೆಯಿತು.