Advertisement

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

01:45 PM Oct 18, 2024 | Team Udayavani |

ಬೆಂಗಳೂರು:‌ ಸ್ಯಾಂಡಲ್‌ ವುಡ್‌ ನ ಶುಗರ್‌ ಫ್ಯಾಕ್ಟರಿ, ಮನಸಾಲಜಿ ಚಿತ್ರಗಳ ನಿರ್ದೇಶಕ, ನಟಿ ಅಮೂಲ್ಯ ಅವರ ಸಹೋದರ ದೀಪಕ್‌ ಅರಸ್‌ (42ವರ್ಷ) ನಿಧನರಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

Advertisement

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ದೀಪಕ್‌ ಅರಸ್‌ ಅವರನ್ನು ಡಯಾಲಿಸಿಸ್‌ ಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ (ಅ.18) ರಾತ್ರಿ ಕೊನೆಯುಸಿರೆಳೆದಿರುವುದಾಗಿ ವರದಿ ತಿಳಿಸಿದೆ.

ರಾಕೇಶ್‌ ಅಭಿನಯದ “ಮನಸಾಲಜಿ” ಚಿತ್ರವನ್ನು ಅರಸ್‌ ನಿರ್ದೇಶನ ಮಾಡಿದ್ದು, 2011ರ ಸೆಪ್ಟೆಂಬರ್‌ ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡಿತ್ತು. ನಂತರ ಡಾರ್ಲಿಂಗ್‌ ಕೃಷ್ಣ, ಸೋನಲ್‌ ಮೊಂಥೆರೋ ನಟನೆಯ ಶುಗರ್‌ ಫ್ಯಾಕ್ಟರಿ ಸಿನಿಮಾವನ್ನು ನಿರ್ದೇಶಿಸಿದ್ದರು.

ದೀಪಕ್‌ ಅರಸ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಶೇಷಾದ್ರಿಪುಂ ಮನೆಯಲ್ಲಿ ವ್ಯವಸ್ಥೆ ಮಾಡಿದ್ದು, ಶುಕ್ರವಾರ ಪಾರ್ಥಿವ ಶರೀರವನ್ನು ಸ್ವಗ್ರಾಮ ನಾಗಮಂಗಲಕ್ಕೆ ಕೊಂಡೊಯ್ದು, ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ವರದಿ ತಿಳಿಸಿದೆ.  ದೀಪಕ್‌ ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next