Advertisement

ಸತತ 21 ಮೇಡನ್‌ ಓವರ್‌ ಎಸೆದ ಖ್ಯಾತಿಯ ಬಾಪು ನಾಡಕರ್ಣಿ ನಿಧನ

04:38 PM Jan 18, 2020 | keerthan |

ಮುಂಬಯಿ: ಟೆಸ್ಟ್‌ ಇತಿಹಾಸದಲ್ಲಿ ಸತತ 21 ಮೇಡನ್‌ ಓವರ್‌ ಎಸೆದ ಖ್ಯಾತಿಯ ಮಾಜಿ ಆಲ್‌ರೌಂಡರ್‌ ಬಾಪು ನಾಡಕರ್ಣಿ (86) ಶುಕ್ರವಾರ ಮುಂಬಯಿಯಲ್ಲಿ ನಿಧನ ಹೊಂದಿದರು.

Advertisement

ನಾಶಿಕ್‌ನಲ್ಲಿ ಜನಿಸಿದ ನಾಡಕರ್ಣಿ ಎಡಗೈ ಬ್ಯಾಟ್ಸ್‌ಮನ್‌ ಹಾಗೂ ಸ್ಪಿನ್‌ ಬೌಲಿಂಗ್‌ ಮೂಲಕ ತಮ್ಮ ಛಾಪು ಮೂಡಿಸಿದ್ದರು. 1955-1968ರ ಅವಧಿಯಲ್ಲಿ ಭಾರತವನ್ನು 41 ಟೆಸ್ಟ್‌ಗಳಲ್ಲಿ ಪ್ರತಿನಿಧಿಸಿದ ಅವರು 1,414 ರನ್‌ ಜತೆಗೆ 88 ವಿಕೆಟ್‌ ಉರುಳಿಸಿದ್ದರು. 43ಕ್ಕೆ 6 ವಿಕೆಟ್‌ ಉರುಳಿಸಿದ್ದು ಅತ್ಯುತ್ತಮ ಸಾಧನೆ.

191 ಪ್ರಥಮ ದರ್ಜೆ ಪಂದ್ಯಗಳಿಂದ 500ಕ್ಕೂ ಹೆಚ್ಚು ವಿಕೆಟ್‌ ಹಾಗೂ 8,880 ರನ್‌ ಸಂಪಾದಿಸಿದ ಹೆಗ್ಗಳಿಕೆ ನಾಡಕರ್ಣಿ ಅವರದಾಗಿದೆ. ಸತತ 21 ಓವರ್‌ ಮೇಡನ್‌ ಎಸೆದ ಚೆನ್ನೈ ಟೆಸ್ಟ್‌ ನಲ್ಲಿ ಅವರ ಬೌಲಿಂಗ್‌ ಫಿಗರ್‌ ಹೀಗಿತ್ತು: 32-27-5-0.

Advertisement

Udayavani is now on Telegram. Click here to join our channel and stay updated with the latest news.

Next