Advertisement

“52 ಬೌಂಡರಿ’ಗಳ ದಾಖಲೆ ಸರದಾರ ಜಾನ್‌ ಎಡ್ರಿಚ್‌ ನಿಧನ

10:52 PM Dec 25, 2020 | mahesh |

ಲಂಡನ್‌: ಇಂಗ್ಲೆಂಡಿನ ಮಾಜಿ ಆರಂಭಕಾರ, ಇನ್ನಿಂಗ್ಸ್‌ ಒಂದರಲ್ಲಿ ಸರ್ವಾಧಿಕ ಬೌಂಡರಿ ಬಾರಿಸಿದ ವಿಶ್ವದಾಖಲೆಯ ಸರದಾರ ಜಾನ್‌ ಎಡ್ರಿಚ್‌ ಇನ್ನಿಲ್ಲ. ಕ್ಯಾನ್ಸರ್‌ನಿಂದ ನರಳುತ್ತಿದ್ದ 83 ವರ್ಷದ ಎಡ್ರಿಚ್‌ ನಾರ್ತ್‌ ಸ್ಕಾಟ್ಲೆಂಡ್‌ನ‌ ನಿವಾಸದಲ್ಲಿ ಡಿ. 23ರಂದು ನಿಧನ ಹೊಂದಿದರು ಎಂದು ಸರ್ರೆ ಕ್ರಿಕೆಟ್‌ ಮಂಡಳಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

Advertisement

ಟೆಸ್ಟ್‌ ಇತಿಹಾಸದ ಯಶಸ್ವಿ ಓಪನರ್‌ಗಳಲ್ಲಿ ಒಬ್ಬರಾಗಿದ್ದ ಜಾನ್‌ ಎಡ್ರಿಚ್‌ ಒಂದು ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ನಾಯಕತ್ವವನ್ನೂ ವಹಿಸಿದ್ದರು. 1963-1976ರ ಅವಧಿಯಲ್ಲಿ 77 ಟೆಸ್ಟ್‌ ಆಡಿದ್ದ ಎಡ್ರಿಚ್‌, 12 ಶತಕ ಒಳಗೊಂಡ 5,138 ರನ್‌ ಪೇರಿಸಿದ್ದಾರೆ.

ಅಜೇಯ 312 ರನ್‌ ಅವರ ಜೀವನಶ್ರೇಷ್ಠ ಗಳಿಕೆಯಾಗಿದೆ. ಇದನ್ನು 1965ರಲ್ಲಿ ಪ್ರವಾಸಿ ನ್ಯೂಜಿಲ್ಯಾಂಡ್‌ ವಿರುದ್ಧ ಲೀಡ್ಸ್‌ನಲ್ಲಿ ದಾಖಲಿಸಿದ್ದರು. ಈ ಇನ್ನಿಂಗ್ಸ್‌ ವೇಳೆ ಸರ್ವಾಧಿಕ 52 ಬೌಂಡರಿ ಬಾರಿಸಿದ್ದು ವಿಶ್ವದಾಖಲೆ ಆಗಿ ಉಳಿದಿದೆ. ಮೊದಲ ಏಕದಿನ ಪಂದ್ಯ ಏಕದಿನ ಇತಿಹಾಸದ ಪ್ರಥಮ ಪಂದ್ಯದಲ್ಲಿ ಆಡಿದ ಹೆಗ್ಗಳಿಕೆಯೂ ಎಡ್ರಿಚ್‌ ಅವರದಾಗಿದೆ. ಏಕದಿನ ಕ್ರಿಕೆಟಿನ ಮೊದಲ ಬೌಂಡರಿ ಹಾಗೂ ಮೊದಲ ಅರ್ಧ ಶತಕ ಬಾರಿಸಿದ ಬ್ಯಾಟ್ಸ್‌ಮನ್‌ ಎಂಬುದು ಇವರ ಪಾಲಿನ ಮತ್ತೂಂದು ಗರಿಮೆ.

ಕೌಂಟಿ ಕ್ರಿಕೆಟ್‌ನಲ್ಲಿ ಜಾನ್‌ ಎಡ್ರಿಚ್‌ ಸರ್ರೆ ತಂಡದ ಆಟಗಾರನಾಗಿ, ಬಳಿಕ ಈ ಕೌಂಟಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಇಂಗ್ಲೆಂಡ್‌ ಆಯ್ಕೆ ಸಮಿತಿಯ ಸದಸ್ಯನಾಗಿ, ತರಬೇತಿದಾರನಾಗಿಯೂ ಕರ್ತವ್ಯ ನಿಭಾಯಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next