ಬ್ರಿಸ್ಬೇನ್: ಆಸ್ಟ್ರೇಲಿಯದ ಮಾಜಿ ಸ್ಪಿನ್ನರ್ ಪೀಟರ್ ಫಿಲ್‌ಪಾಟ್ ರವಿವಾರ ನಿಧನ ಹೊಂದಿದರು.
86 ವರ್ಷದ ಅವರು ವಯೋಸಹಜ ಅನಾರೋಗ್ಯದಿಂದ ನರಳುತ್ತಿದ್ದರು.
1965ರ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಟೆಸ್ಟ್‌ಕ್ಯಾಪ್ ಧರಿಸಿದ ಫಿಲ್‌ಪಾಟ್ ಆ ಸರಣಿಯಲ್ಲಿ 18 ವಿಕೆಟ್ ಉರುಳಿಸಿ ಮೆರೆದಿದ್ದರು. ಬಳಿಕ ಅದೇ ವರ್ಷ ತವರಲ್ಲಿ ನಡೆದ ಆ್ಯಶಸ್ ಸರಣಿಯಲ್ಲೂ ಮಿಂಚಿದರು.
ಒಟ್ಟು 8 ಟೆಸ್ಟ್‌ಗಳನ್ನಾಡಿದ ಫಿಲ್‌ಪಾಟ್ 26 ವಿಕೆಟ್ ಕೆಡವಿದ್ದರು. 76 ಪ್ರಥಮ ದರ್ಜೆ ಪಂದ್ಯಗಳಿಂದ 245 ವಿಕೆಟ್ ಉರುಳಿಸಿದ ಸಾಧನೆ ಇವರದಾಗಿದೆ. ನಿವೃತ್ತಿ ಬಳಿಕ ನ್ಯೂ ಸೌತ್ ವೇಲ್ಸ್, ಸೌತ್ ಆಸ್ಟ್ರೇಲಿಯ, ಯಾರ್ಕಶೈರ್, ಸರ್ರೆ ಮೊದಲಾದ ತಂಡಗಳ ಕೋಚ್ ಆಗಿಯೂ ದುಡಿದಿದ್ದರು.
ಇದನ್ನೂ ಓದಿ:ನ. 5ಕ್ಕೆ ಪ್ರಧಾನಿ ಉತ್ತರಾಖಂಡ ಭೇಟಿ : ಕಾರ್ಯಕ್ರಮ ರಂಗು ಹೆಚ್ಚಿಸಲಿರುವ ಸಾಧು-ಸಂತರು