Advertisement
ಪ್ರೀತಿ, ಪ್ರೇಮ, ಲವ್, ಕಾಜಲ್, ಇಷ್R, ಪ್ಯಾರ್… ಪ್ರಪಂಚದ ಯಾವುದೇ ಭಾಷೆಯಲ್ಲಿ ಇದಕ್ಕೆ ಏನೇ ಸಮಾನಾರ್ಥಕ ಪದ ಇದ್ದರೂ ಅದು ಅತ್ಯಂತ ಮಧುರ. ಕೇಳಲು ಕಿವಿಗೂ ಇಂಪು ಮತ್ತು ಅದು ಜಗತ್ತಿನ ಅತಿ ಶಕ್ತಿಯುತ ಪದ. ಈ ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ಪ್ರೀತಿಯೆನ್ನುವ ಮೋಹದ ಬಲೆಗೆ ಸಿಲುಕಿರುತ್ತಾನೆ. ಕೆಲವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು, ಮತ್ತೆ ಕೆಲವರು ತಮ್ಮ ಭಾವನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರಷ್ಟೇ.
Related Articles
Advertisement
ಹೀಗೆಲ್ಲ ಆದಾಗ ಕೊರಗಿ ಕೂರುವುದರಲ್ಲಿ ಅರ್ಥವೇ ಇಲ್ಲ. ಮೊದಲು ಆ ಹುಡುಗಿಗೆ ಥ್ಯಾಂಕ್ಸ್ ಹೇಳಬೇಕು. ಏಕೆಂದರೆ, ಆಕೆ ನಿಮ್ಮ ಬದುಕನ್ನು ಮತ್ತೂಮ್ಮೆ ಆರಂಭಿಸಲು ಕಾರಣ ಆದವಳು. ಮುಂದೆ ಹೀಗೆಲ್ಲ ಎಡವಬೇಡ, ನಿನ್ನ ದಾರಿ ಬೇರೆಯೇ ಇದೆ, ಸಾಧನೆಯ ಹಾದಿಯಲ್ಲಿ ನೀನು ಸಾಗಬೇಕು ಎನ್ನುವ ಸಣ್ಣ ಸೂಚನೆಯನ್ನೂ ಅವಳು ಕೊಟ್ಟಿದ್ದಾಳೆಂದೇ ಭಾವಿಸಬೇಕು. ಇದನ್ನು ನೀವು ಅರ್ಥಮಾಡಿಕೊಳ್ಳದೇ ಹೋದರೆ, ದುಃಖಪಡುತ್ತಲೇ ಇರಬೇಕಾಗುತ್ತದೆ. ನೀವು ಒಂದು ಗೌರವಿತ ಸ್ಥಾನಕ್ಕೆ ಹೋಗಿದ್ದೇ ಆದಲ್ಲಿ, ಮೊದಲ ಪ್ರೇಯಸಿಗಿಂತ ಸೌಂದರ್ಯವತಿ, ಗುಣವಂತೆ, ಪ್ರವೀಣೆ ನಿಮ್ಮ ಜತೆಯಾಗುವುದು ನಿಶ್ಚಿತ.ನಿಮ್ಮ ಬದುಕಿನ ಹಾದಿಯಲ್ಲಿ ಮೊದಲ ಪ್ರೇಯಸಿ ಚೆಲ್ಲಿದ ನೆನಪುಗಳನ್ನು ಒಗೆಯಲು ಹಲವು ಗುಟ್ಟುಗಳಿವೆ. ಮೊದಲು ನಿಮ್ಮ ಪ್ರೇಯಸಿ ನೀಡಿದ ಉಡುಗೊರೆಗಳನ್ನು ಯಾರಿಗಾದರೂ ಕೊಟ್ಟು ಬಿಡಿ. ನಿಮ್ಮ ಪ್ರೇಮ ಪತ್ರಗಳನ್ನು ಯಾವುದಾದರೂ ಟ್ರಂಕಿಗೆ ಹಾಕಿ, ಮನೆಯ ಯಾವುದಾದರೂ ಮೂಲೆಯಲ್ಲಿ ಇಟ್ಟುಬಿಡಿ. ಸಾಧ್ಯವಾದಷ್ಟು ನಿಮ್ಮ ಜೀವನದ ಗುರಿಯತ್ತ ಚಿತ್ತ ಹರಿಸಿ. ವಿದ್ಯಾರ್ಥಿಗಳಾದರೆ ಓದಿನ ಕಡೆಗೆ, ಉದ್ಯೋಗಿಯಾಗಿದ್ದರೆ ಕೆಲಸದ ಕಡೆಗೆ ಗಮನ ಕೊಡಿ. ನೀವು ಮಾಡುತ್ತಿರುವ ಕಾರ್ಯವನ್ನು ಆಕೆಗಿಂತ ಹೆಚ್ಚು ಪ್ರೀತಿಸಿ. ಅಲ್ಲಿ ನಿಮಗೆ ಯಶಸ್ಸು ಕಾದಿರುತ್ತದೆ. ಪ್ರತಿ ಹುಡುಗರ ತಂದೆ- ತಾಯಿಯಂದಿರು, “ಹುಡುಗಿಯರನ್ನು ಚುಡಾಯಿಸಬೇಡಿ, ನೊಯಿಸಬೇಡಿ’ ಎಂದು ಹೇಳುವರು. ಅದೇ ರೀತಿ ಹುಡುಗಿಯರ ತಂದೆ ತಾಯಿಯರು, “ಹುಡುಗರ ಜೀವನದಲ್ಲಿ ಆಟವಾಡಬೇಡಿ’ ಎಂದು ಹೇಳಿದರೆ ಎಷ್ಟೋ ಹುಡುಗರ ಜೀವನ ಸುಖಕರವಾಗಿರುತ್ತದೆ. ನನ್ನ ಮಾತುಗಳು ನಿಮಗೆ ಕಹಿಯಾದರೆ ಕ್ಷಮಿಸಿ. – ಅನಿಲ್ ಕುಮಾರ್ ಬಿ.