Advertisement
ಮೆಂತೆ ಸೊಪ್ಪಿನ ಬೋಂಡಾಬೇಕಾಗುವ ಸಾಮಗ್ರಿ: ಎಳೆ ಮೆಂತ್ಯೆ ಸೊಪ್ಪು, ಸಣ್ಣಗೆ ಹೆಚ್ಚಿದ ಈರುಳ್ಳಿ, ಕಡಲೆ ಹಿಟ್ಟು, ಖಾರದ ಪುಡಿ, ಉಪ್ಪು, ಅರಿಶಿನ, ಇಂಗು, ಓಮ ಕಾಳು, ಕರಿಯಲು ಎಣ್ಣೆ.
ಬೇಕಾಗುವ ಸಾಮಗ್ರಿ: ಮೂಲಂಗಿ ಎಲೆ, ನವಿಲುಕೋಸಿನ ಎಲೆ, ಪಾಲಕ್ ಸೊಪ್ಪು (ಸಮ ಪ್ರಮಾಣದಲ್ಲಿ), ಕಡಲೆ ಹಿಟ್ಟು, ಹುರಿದ ಎಳ್ಳು, ಉಪ್ಪು, ಖಾರ, ಅಡುಗೆ ಸೋಡಾ, ಹುರಿದ ಕೊಬ್ಬರಿ ತುರಿ, ಕಾಳು ಮೆಣಸು, ಹುಳಿ ಮಜ್ಜಿಗೆ, ಇಂಗು, ಕರಿಯಲು ಎಣ್ಣೆ. (ಮೇಲೆ ಬರೆದ ಸೊಪ್ಪನ್ನೆಲ್ಲ ಹಾಕಬೇಕೆಂದೇನೂ ಇಲ್ಲ. ಯಾವುದು ಸಿಗುತ್ತದೋ, ಅದನ್ನು ಬಳಸಿದರೆ ಆಯ್ತು.)
Related Articles
Advertisement
ಮೈದಾ ಗೋಲಿಬೇಕಾಗುವ ಸಾಮಗ್ರಿ: ಮೈದಾ ಹಿಟ್ಟು- ಎರಡು ಕಪ್, ತುಪ್ಪ- 2 ಚಮಚ, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ತುರಿದ ಕೊಬ್ಬರಿ, ಜೀರಿಗೆ, ಮೆಂತ್ಯೆ, ಉಪ್ಪು, ಸೋಡಾ, ಎಣ್ಣೆ. ಮಾಡುವ ವಿಧಾನ: ಮೈದಾ ಹಿಟ್ಟಿಗೆ ತುಪ್ಪ ಹಾಕಿ, ಹಸಿ ಮೆಣಸಿನ ಚೂರು, ಉಪ್ಪು, ಸೋಡಾ, ಜೀರಿಗೆ ಮತ್ತು ಮೆಂತ್ಯೆ ಪುಡಿ ಸ್ವಲ್ಪ, ಕೊತ್ತಂಬರಿ ಸೊಪ್ಪು, ಹುರಿದ ಕೊಬ್ಬರಿ ತುರಿ ಹಾಕಿ ಚೆನ್ನಾಗಿ ಕಲಸಿ 5-6 ಗಂಟೆ ಹಾಗೆಯೇ ಬಿಡಿ. ನಂತರ, ಸಣ್ಣ ಸಣ್ಣ ಗೋಲಿ ಮಾಡಿ ಕರಿಯಿರಿ. ಬನಾರಸಿ ಗೋಲಿ
ಬೇಕಾಗುವ ಸಾಮಗ್ರಿ: ಕಡಲೆಬೇಳೆ- 4 ಬಟ್ಟಲು, ಮೊಸರು- 1 ಬಟ್ಟಲು, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅಡುಗೆ ಸೋಡಾ, ಶುಂಠಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಇಂಗು, ಧನಿಯ, ಚಿಟಿಕೆ ಸಕ್ಕರೆ, ಕರಿಯಲು ಎಣ್ಣೆ. ಮಾಡುವ ವಿಧಾನ: ಕಡಲೆ ಬೆಳೆಯನ್ನು ತರಿತರಿಯಾಗಿ ಬೀಸಿಕೊಳ್ಳಿ. ಅದಕ್ಕೆ ಮೊಸರು ಮತ್ತು ನಾಲ್ಕೈದು ಚಮಚ ಕಾದ ಎಣ್ಣೆ ಸೇರಿಸಿ. ಜೊತೆಗೆ, ಉಪ್ಪು, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ, ಇಂಗು, ಧನಿಯಾ ಪುಡಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಶುಂಠಿ ಪೇಸ್ಟ್ ಹಾಕಿ ಚೆನ್ನಾಗಿ ಕಲೆಸಿ, ಎರಡು ಗಂಟೆ ನೆನೆಸಿ ಇಡಿ. ಕರಿಯುವ ಹೊತ್ತಿಗೆ ಕಾಲು ಚಮಚ ಅಡುಗೆ ಸೋಡಾ ಹಾಕಿ, ಉಂಡೆ ಕಟ್ಟಿ ಬೋಂಡಾದಂತೆ ಕರಿಯಿರಿ. * ಪರಿಮಳಾ