Advertisement

ಅರಣ್ಯ ಅತಿಕ್ರಮಣದಾರರಿಗೆ ಭಯ ಬೇಡ: ಸ್ಪೀಕರ್ ಕಾಗೇರಿ ಹೇಳಿದ್ದೇನು?

10:49 PM Apr 26, 2023 | Team Udayavani |

ಶಿರಸಿ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಕಾಗೇರಿ ಗ್ರಾಮವೂ ಒಳಗೊಂಡ ಕುಳವೆ ಪಂಚಾಯ್ತಿಯ ಕುಳವೆ, ಕೆಂಚಗದ್ದೆ ಭಾಗದಲ್ಲಿ ಮತಯಾಚನೆ ಮಾಡಿದರು.

Advertisement

ಈ ವೇಳೆ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ಮತ್ತು ಶಾಂತಿ ಸುವ್ಯವಸ್ಥೆಗೆ ಈ ವರೆಗೂ ಪ್ರಯತ್ನಿಸಿದ್ದೇನೆ. ಕುಳವೆ ಪಂಚಾಯತ ವ್ಯಾಪ್ತಿಗೆ ಸುಮಾರು 6 ಕೋಟಿ ರೂಪಾಯಿಗಳ ಅನುದಾನ ತಂದಿದ್ದೇನೆ. ಇಲ್ಲಿನ ರಸ್ತೆ, ಸೇತುವೆ, ಕಾಲುಸಂಕ, ನೀರಾವರಿ ಚೆಕ್ ಡ್ಯಾಂಗಳು ಇನ್ನೂ ಹಲವಾರು ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ. ಅದರೊಂದಿಗೆ ಜನರೂ ಸಹ ಶಾಂತಿಯುತವಾಗಿ ಬದುಕು ನಡೆಸಲು ಅಗತ್ಯ ವಾತಾವರಣವನ್ನು ನಾವೆಲ್ಲರೂ ನಿರ್ಮಿಸಿದ್ದೇವೆ. ಮುಂದೆಯೂ ಈ ಬಗ್ಗೆ ಶ್ರಮಿಸುವುದಾಗಿ ಹೇಳಿದರು.

ಅರಣ್ಯ ಅತಿಕ್ರಮಣ ಜಾಗದಲ್ಲಿ ವಾಸವಿರುವವರ ಹಿತ ರಕ್ಷಣೆಗೆ ನಾನೂ ಎಂದೂ ಬದ್ಧನಿದ್ದು, ಸಭಾಧ್ಯಕ್ಷನಾಗಿ ನಾನು ಈ ಭಾಗದ ಅರಣ್ಯ ಅತಿಕ್ರಮಣದಾರರಿಗೆ ತೊಂದರೆ ನೀಡದಂತೆ ಸರ್ಕಾರದ ಮೂಲಕ ಅಧಿಕಾರಿಗಳಿಗೆ ಆದೇಶಿಸಿದ್ದೇನೆ. ಸರ್ಕಾರದಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ಅರಣ್ಯ ಅತಿಕ್ರಮಣದಾರರ ಹಿತಕಾಯುವಂತೆ ಅಪಿಡವಿಟ್ ಕೊಟ್ಟಿದ್ದೇವೆ. ಇದರೊಂದಿಗೆ ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿದ್ದು, ಆಶ್ರಯ ಮನೆ ಯೋಜನೆಯಲ್ಲಿ ಅರಣ್ಯ ಅತಿಕ್ರಮಣ ಜಾಗದಲ್ಲಿ ವಾಸವಿರುವವರಿಗೆ ಮನೆ ನಂಬರ್ ಆಧಾರದ ಮೇಲೆ ಮನೆ ನೀಡುವಂತೆ ಆದೇಶ ನೀಡುವಂತೆ ಆಗ್ರಹಿಸಿದ್ದು, ಇಂದು ಅತಿಕ್ರಮಣದಲ್ಲಿ ವಾಸವಿರುವವರೂ ಆಶ್ರಯ ಮನೆ ಯೋಜನೆಯಡಿ ಮನೆ ಪಡೆಯುವಂತೆ ಮಾಡಿದ್ದೇನೆ ಎಂದರು.

ಅಭಿವೃದ್ಧಿಯನ್ನು ಸಹಿಸದ ಕಾಂಗ್ರೆಸ್ ನಾಯಕರು ನಾನು ಕ್ಷೇತ್ರಕ್ಕೆ ತಂದ 5000 ಮನೆಗಳು ವಾಪಸ್ಸಾಗಿದೆ ಎಂದು 2018ರಲ್ಲಿ ಸಿದ್ದರಾಮಯ್ಯನವರ ಸರ್ಕಾರ ಮಾಡಿದ ಆದೇಶವನ್ನು ಉಲ್ಲೇಖಿಸಿದ್ದ ಲೇಖನವನ್ನು ಈಗ ಅಪಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಜನತೆ ಈ ಎಲ್ಲ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದರು.

5000 ಮನೆಗಳೂ ಕ್ಷೇತ್ರದ ಜನತೆಗೆ ಸಿಗಲಿದೆ. ಪಂಚಾಯತಗಳಲ್ಲಿ ಚುನಾವಣೆ ಘೋಷಣೆಗೂ ಮುನ್ನ ಫಲಾನುಭವಿಹಳ ದಾಖಲೆಗಳನ್ನು ಅಪ್ಲೋಡ್ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು, ಈಗ ನೀತಿ ಸಂಹಿತೆ ಇರುವುದರಿಂದ ಈ ಎಲ್ಲ ಪ್ರಕ್ರಿಯೆಗಳು ಚುನಾವಣೆಯ ನಂತರ ಪೂರ್ಣಗೊಳ್ಳಲಿದೆ ಎಂದರು.

Advertisement

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಉಷಾ ಹೆಗಡೆ, ನಾಗರಾಜ ಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷ ವಿನಯ್ ಭಟ್, ವಸಂತ ಭಟ್ಟ, ಶಕ್ತಿಕೇಂದ್ರ ಅಧ್ಯಕ್ಷರು ಮತ್ತು ಪದಾಧಿಕಾರಿಗಳೂ ತ್ತು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next