Advertisement

ಮಹಾ ಕಾಡಿನಿಂದ ಸಂಕೇಶ್ವರಕ್ಕೆ ಕಾಡುಕೋಣ ಲಗ್ಗೆ

04:41 PM Apr 22, 2020 | Suhan S |

ಸಂಕೇಶ್ವರ: ನೆರೆಯ ಮಹಾರಾಷ್ಟ್ರದ ಕಾಡಿನಿಂದ ಸುಮಾರು 8 ರಿಂದ 10 ಕಾಡುಕೋಣಗಳ ದಂಡು ಸಿಪ್ಪೂರ ಮಾರ್ಗವಾಗಿ ನಗರದತ್ತ ಮಂಗಳವಾರ ಆಗಮಿಸಿದ್ದು, ಜನರಲ್ಲಿ ಭೀತಿಯನ್ನುಂಟು ಮಾಡಿವೆ.

Advertisement

3 ಕಾಡುಕೋಣಗಳು ಸಂಕೇಶ್ವರ ಹೊರ ವಲಯದ ಹರಗಾಪುರಗಡ ಹತ್ತಿರದ ರೈತರ ಜಮೀನಿಗಳಿಗೆ ಲಗ್ಗೆ ಇಟ್ಟಿದ್ದು ಬೆಳೆಗಳನ್ನು ನಾಶಪಡಿಸಿವೆ. ಅದರಲ್ಲಿ ಒಂದು ಕೋಣ ನಗರದ ಬಸ್‌ ನಿಲ್ದಾಣ ಬಳಿಯ ಸ್ಮಶಾನದ ಆವರಣ ಗೋಡೆ ಜಿಗಿದು ಹೊರ ಬರದಿರುವುದರಿಂದ ಜನರಲ್ಲಿ ಆತಂಕ ಸೃಷ್ಟಿಸಿತ್ತು. ನಂತರ ಅರಣ್ಯ ಅಧಿ ಕಾರಿಗಳು ಮತ್ತು ಪೊಲೀಸರು, ಪುರಸಭೆ ಅಧಿಕಾರಿಗಳು ಸಿಡಿ ಮದ್ದುಗಳನ್ನು ಹಾರಿಸಿ ಕಾಡುಕೋಣವನ್ನು ನಗರದಿಂದ ಹೊರ ಓಡಿಸುವಲ್ಲಿ ಯಶಸ್ವಿಯಾದರು.

ಸಮೀಪದ ಸೊಲ್ಲಾಪುರ ಗ್ರಾಮದ ಬಳಿ ರೈತರ ಜಮೀನಿನಲ್ಲಿ ಇದ್ದ ಬಾವಿಯೊಂದರಲ್ಲಿ ಕಾಡುಕೋಣವೊಂದು ಬಿದ್ದು ಹೊರ ಬರದೇ ಪರದಾಡಿದರೆ, ಇನ್ನೊಂದು ಕಡೆ ರೈತರ ಬೆಳೆಗಳಲ್ಲಿ ಓಡಾಡುತ್ತಿದ್ದ ಮತ್ತೂಂದು ಕಾಡುಕೋಣ ಆಕಸ್ಮಿಕವಾಗಿ ಮೃತಪಟ್ಟಿದೆ. ಜತೆಗೆ ಹಾವುಗಳ ಕಾಟ ಕೂಡ ಹೆಚ್ಚಾಗಿರುವುದು ಕಂಡು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next