ಕೋವಿಡ್ ಲಾಕ್‌ಡೌನ್ ಸಂಕಷ್ಟದಲ್ಲಿ ಸಿಲುಕಿರುವವರಿಗೆ ಸಹಾಯಹಸ್ತ ಚಾಚುತ್ತಿರುವ ವಿಶಾಲ ಹೃದಯಿಗಳ ಕಥೆಗಳನ್ನು ಕೇಳುತ್ತಲೇ ಇದ್ದೇವೆ. ಅದಕ್ಕೆ ಹೊಸ ಸೇರ್ಪಡೆಯೆಂದರೆ ಸಿಂಗಾಪುರದಲ್ಲಿನ ವಿದ್ಯಾರ್ಥಿಗಳು. ಇಲ್ಲಿ ವ್ಯಾಸಂಗ ಮಾಡುತ್ತಿರುವ ಚೀನ ಮೂಲದ ಕೆನಡಾ ಹಾಗೂ ಸ್ಪೇನ್ ವಿದ್ಯಾರ್ಥಿಗಳಿಬ್ಬರು ಸುಮಾರು 100 ಕಿ.ಮೀ. ದೂರದವರೆಗೆ ತಮ್ಮ ಸೈಕಲ್‌ನಲ್ಲೇ ಸಾಗಿ ಮುಂಬಯಿಯ ಗೋವಂಡಿ ಉಪನಗರದ ವಲಸಿಗರಿಗಾಗಿ ನಿಧಿ ಸಂಗ್ರಹ ಮಾಡಿದ್ದಾರೆ. ಇನ್ಸಿಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಡೇರೆನ್ ಕ್ಸಿಯೋ ಮತ್ತು ಕೆ ಕ್ಸು ಎಂಬ ವಿದ್ಯಾರ್ಥಿಗಳು 100 ಕಿ.ಮೀ. ಸೈಕ್ಲಥಾನ್ ಪೂರ್ಣಗೊಳಿಸಿದ್ದು, ಮೇ 15ರೊಳಗೆ 5.28 ಲಕ್ಷ ರೂ.(7 ಸಾವಿರ ಡಾಲರ್) ಸಂಗ್ರಹಿಸುವ ಗುರಿ ಹಾಕಿಕೊಂಡಿದ್ದಾರೆ. ಈ ಮೊತ್ತವನ್ನು ಅವರು ಫೀಡಿಂಗ್ ಫ್ರಂ ಫಾರ್‌ಎಂಬ ಸಂಸ್ಥೆಗೆ ನೀಡಲಿದ್ದಾರೆ. ಈ ಸಂಸ್ಥೆಯು ಮುಂಬೈನ ಗೋವಂಡಿಯ ಬೈಗನ್ವಾಡಿ ಕೊಳೆಗೇರಿ ಪ್ರದೇಶದಲ್ಲಿ ಈಗಾಗಲೇ ಸಮುದಾಯ ಅಡುಗೆ ಮನೆ ಆರಂಭಿಸಿದ್ದು, ಬಡವರು ಮತ್ತು ನಿರುದ್ಯೋಗಿ ವಲಸಿಗರಿಗೆ ಸುಮಾರು 4 ಲಕ್ಷಕ್ಕೂ ಹೆಚ್ಚು ಆಹಾರದ ಪ್ಯಾಕೆಟ್‌ಗಳನ್ನು ಒದಗಿಸಿದೆ.