Advertisement

ಮೇ 24ರಿಂದ ಐದು ದಿನಗಳ ಅಮೆರಿಕ ಪ್ರವಾಸದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್

02:19 PM May 21, 2021 | Team Udayavani |

ನವ ದೆಹಲಿ  : ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಸೋಮವಾರ(ಮೇ. 24)ದಿಂದ ಐದು ದಿನಗಳ ಅಮೆರಿಕ ಪ್ರವಾಸವನ್ನು ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

Advertisement

ಅಮೆರಿಕದ ಕಂಪನಿಗಳಿಂದ ಕೋವಿಡ್ ಲಸಿಕೆಗಳನ್ನು ಖರೀದಿಸುವುದರ ಜೊತೆಗೆ ಅವುಗಳ ಜಂಟಿ ಉತ್ಪಾದನೆಯ ಸಾಧ್ಯತೆಯನ್ನು ಅನ್ವೇಷಿಸುವ ಉದ್ದೇಶದಿಂದ ಎಸ್. ಜೈಶಂಕರ್ ಅವರು ಮೇ 24 ರಿಂದ 28 ರವರೆಗೆ ಅಮೆರಿಕ ಭೇಟಿಯಲ್ಲಿ ಇದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ : ಕೋವಿಡ್ ಸಮಯದಲ್ಲಿ ಅಧಿಕಾರಿಗಳ ಮೋಜು-ಮಸ್ತಿ: ಕಾರು-ಜೀಪುಗಳನ್ನು ತಡೆದು ಗ್ರಾಮಸ್ಥರ ಆಕ್ರೋಶ

ಈ ಭೇಟಿಯ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಬೈಡನ್ ಆಡಳಿತದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡುವುದರ ಜೊತೆಗೆ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರೊಂದಿಗೆ ಕೋವಿಡ್ ಸಂಬಂಧಿತ ಹಾಗೂ ವಿದೇಶಾಂಗ ವ್ಯವಹಾರಗಳ ಬಗ್ಗೆ  ಚರ್ಚೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದೆ.

ಇನ್ನು, ನ್ಯೂಯಾರ್ಕ್ ನಲ್ಲಿ,  ಜೈಶಂಕರ್ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

Advertisement

“ವಾಷಿಂಗ್ಟನ್ ಡಿಸಿ ಯಲ್ಲಿ, ಜೈ ಶಂಕರ್, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ದ್ವಿಪಕ್ಷೀಯ ಸಂಬಂಧವನ್ನು ನಿಭಾಯಿಸುವ ಕ್ಯಾಬಿನೆಟ್ ಸದಸ್ಯರು ಮತ್ತು ಆಡಳಿತದ ಹಿರಿಯ ಅಧಿಕಾರಿಗಳನ್ನೂ ಅವರು ಭೇಟಿ ಮಾಡಲಿದ್ದಾರೆ” ಎಂದು ವಿದೇಶಾಂಗ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಉಭಯ ದೇಶಗಳ ನಡುವಿನ ಆರ್ಥಿಕ ಮತ್ತು ಕೋವಿಡ್ 19 ಸಂಬಂಧಿತ ಸಹಕಾರದ ಕುರಿತು ವ್ಯಾಪಾರ ವಹಿವಾಟುಗಳನ್ನೊಳಗೊಂಡು ಪ್ರಮುಖ ವಿಚಾರಗಳ ಬಗ್ಗೆ  ಸಂವಾದಗಳನ್ನು ನಡೆಸಲಿದ್ದಾರೆ ಎಂದು  ಮಾಹಿತಿ ನೀಡಿದೆ.

ಇದನ್ನೂ ಓದಿ : 10 ಆಕ್ಸಿಜನ್ ಸಿಲಿಂಡರ್ ಗಳನ್ನು ಕೊಡುಗೆಯಾಗಿ ನೀಡಿದ ಶಾಸಕ ಮಂಜುನಾಥ್ ಮತ್ತು ಸ್ನೇಹಜೀವಿ ಬಳಗ

Advertisement

Udayavani is now on Telegram. Click here to join our channel and stay updated with the latest news.

Next