ನವದೆಹಲಿ: ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂವರು ತಜಕಿಸ್ತಾನಿ ಪ್ರಜೆಗಳಿಂದ 10 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಇಸ್ತಾಂಬುಲ್‌ಗೆ ಪ್ರಯಾಣಿಸಲು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು ಈ ವೇಳೆ ತಪಾಸಣೆ ನಡೆಸಿದ ವೇಳೆ ಅವರ ಬಳಿ ವಿದೇಶಿ ಕರೆನ್ಸಿ (ಯುಎಸ್ $ 7,20,000 ಮತ್ತು ಯುರೋ 4,66,200) ಪತ್ತೆಯಾಗಿದೆ.
ಆರೋಪಿಗಳು ಲಗೇಜ್ ಬ್ಯಾಗ್ ನಲ್ಲಿ ಇರಿಸಲಾಗಿದ್ದ ಶೂಗಳ ಒಳಗೆ ವಿದೇಶಿ ಕರೆನ್ಸಿಯನ್ನು ಬಚ್ಚಿಟ್ಟು ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ. ಮೂವರ ಜೊತೆ ಓರ್ವ ಬಾಲಾಪರಾಧಿಯು ಇದ್ದ ಎಂದು ಹಿರಿಯ ಕಸ್ಟಮ್ಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಪತ್ತೆ ಹಚ್ಚಿದ ಅತೀ ದೊಡ್ಡ ಮೊತ್ತದ ಪ್ರಕರಣ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Manipura ಮಹಿಳೆಯರ ವಿವಸ್ತ್ರಗೊಳಿಸಿ ಮೆರವಣಿಗೆ ಪ್ರಕರಣ: ಇನ್ನೋರ್ವ ಆರೋಪಿ ಬಂಧನ