Advertisement

ಬಲವಂತದ ಮತಾಂತರ ಜಾಮೀನು ರಹಿತ ಅಪರಾಧ

02:38 PM Mar 14, 2018 | Team Udayavani |

ಡೆಹ್ರಾಡೂನ್‌: ಉತ್ತರಾಖಂಡ ಸಂಪುಟವು “ಧರ್ಮ ಸ್ವತಂತ್ರ ಅಭಿಯಾನ’ ಎಂಬ ಕರಡು ವಿಧೇಯಕಕ್ಕೆ ಒಪ್ಪಿಗೆ ನೀಡಿದ್ದು, ಅದರಂತೆ ಇನ್ನು ಮುಂದೆ ಒತ್ತಾಯಪೂರ್ವಕ ಮತ್ತು ಅಕ್ರಮ ಮತಾಂತರ ಮಾಡುವುದು ಜಾಮೀನುರಹಿತ ಅಪರಾಧವಾಗಲಿದೆ.

Advertisement

ಬಲವಂತವಾಗಿ, ಲಂಚ ನೀಡಿ ಅಥವಾ ಆಮಿಷವೊಡ್ಡಿ ಮತಾಂತರ ಮಾಡುವಂಥ ಘಟನೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವಿಧೇಯಕದ ಅನ್ವಯ, ಯಾರಾದರೂ ಇಂಥ ತಪ್ಪು ಮಾಡಿರುವುದು ಸಾಬೀತಾದರೆ ಅಂಥವರಿಗೆ ಒಂದರಿಂದ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅದರಲ್ಲೂ, ಮತಾಂತರಗೊಂಡ ಸಂತ್ರಸ್ತರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗದವರಾಗಿದ್ದರೆ, ತಪ್ಪಿತಸ್ಥರಿಗೆ ಕನಿಷ್ಠ 2 ವರ್ಷ ಜೈಲು ಖಚಿತ. ಇದೇ ವೇಳೆ, ವ್ಯಕ್ತಿ ಸ್ವಇಚ್ಛೆಯಿಂದ ಮತಾಂತರವಾಗುವುದಿದ್ದರೆ, ಒಂದು ತಿಂಗಳ ಮೊದಲೇ ಜಿಲ್ಲಾಧಿಕಾರಿಗೆ ಅಫಿಡವಿಟ್‌ ಸಲ್ಲಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next