Advertisement
2018ರಲ್ಲಿ ಕೊಹ್ಲಿ ವಿವಿಧ ಕಂಪೆನಿಗಳ ಜಾಹೀರಾತು, ಬಿಸಿಸಿಐನಿಂದ ಸ್ವೀಕರಿಸಿದ ಹಣ ಸೇರಿದಂತೆ ಪಡೆದ ಒಟ್ಟಾರೆ 160 ಕೋಟಿ ರೂ. ಪಡೆದಿದ್ದಾರೆ. ಪ್ರಸ್ತುತ ಕೊಹ್ಲಿ ಪುಮಾ, ಪೆಪ್ಸಿ, ಆಡಿ ಮತ್ತು ಒಕ್ಲೆ ಸಂಸ್ಥೆ ಪರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. 29 ವರ್ಷದ ಕೊಹ್ಲಿ ಟ್ವಿಟರ್‌ನಲ್ಲಿ 25 ಮಿಲಿಯನ್ ಪ್ಲಸ್ ಅಭಿಮಾನಿಗಳನ್ನು ಕೂಡ ಹೊಂದಿದ್ದಾರೆ. ಜತೆಗೆ ಬಿಸಿಸಿಐ ಕೇಂದ್ರೀಯ ಗುತ್ತಿಗೆಯಲ್ಲಿ ಎ ಪ್ಲಸ್ ಒಪ್ಪಂದ ಪಡೆದಿದ್ದಾರೆ. ಈ ಎಲ್ಲ ಜನಪ್ರಿಯತೆಯಿಂದಾಗಿ ಫೋರ್ಬ್ಸ್ ಪಟ್ಟಿಯಲ್ಲಿ ಕೊಹ್ಲಿಗೆ ವಿಶ್ವದಲ್ಲಿ 83ನೇ ಸ್ಥಾನ ಸಿಕ್ಕಿದೆ.
2018ರಲ್ಲಿ ಒಟ್ಟು 190 ಕೋಟಿ ರೂ. ಸಂಪಾದಿಸಿರುವ ಖ್ಯಾತ ಬಾಕ್ಸರ್ ಫ್ಲಾಯ್ಡ ಮೇವೆದರ್ ಫೋರ್ಬ್ಸ್ ಯಾದಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ವಿಶೇಷವೆಂದರೆ, ಫೋರ್ಬ್ಸ್ ಪಟ್ಟಿಯ ಅಗ್ರ 100ರೊಳಗೆ ವಿಶ್ವದ ಯಾವ ಮಹಿಳಾ ಕ್ರೀಡಾಪಟುಗಳೂ ಸ್ಥಾನ ಪಡೆದುಕೊಂಡಿಲ್ಲ. ಪ್ರತಿ ಸಲ ಫೋರ್ಬ್ಸ್ ಪಟ್ಟಿ ಪ್ರಕಟವಾದಾಗ ಖ್ಯಾತ ಟೆನಿಸ್ ಆಟಗಾರ್ತಿಯರಾದ ಸೆರೆನಾ ವಿಲಿಯಮ್ಸ್, ಮರಿಯಾ ಶರಪೋವಾ ಹೆಸರು ಕೇಳಿಬರುತ್ತಿತ್ತು. ಆದರೆ ಈ ಸಲ ಸೆರೆನಾ ಫಾರ್ಮ್ನಲ್ಲಿಲ್ಲ. ಶರಪೋವಾ ಡ್ರಗ್ಸ್ ಪ್ರಕರಣ ಪರಿಣಾಮ ಮಾರುಕಟ್ಟೆ ಕುಸಿದಿದೆ.
Related Articles
ಆಟಗಾರ ಸಂಪಾದನೆ (ಮಿ.ಡಾಲರ್)
1. ಫ್ಲಾಯ್ಡ ಮೇವೆದರ್ (ಬಾಕ್ಸಿಂಗ್) 285
2. ಲಿಯೋನೆಲ್ ಮೆಸ್ಸಿ (ಫುಟ್‌ಬಾಲ್) 111
3. ಕ್ರಿಸ್ಟಿಯಾನೊ ರೊನಾಲ್ಡೊ (ಫುಟ್‌ಬಾಲ್) 108
4. ಕಾನರ್ ಮೆಕ್‌ಗೆಗರ್ (ಮಾರ್ಷಲ್ ಆರ್ಟ್ಸ್) 99
5. ನೇಯ್ಮರ್ (ಫುಟ್‌ಬಾಲ್) 90
6. ಲೆಬ್ರಾನ್ ಜೇಮ್ಸ್ (ಬಾಸ್ಕೆಟ್‌ಬಾಲ್) 85.5
7. ರೋಜರ್ ಫೆಡರರ್ (ಟೆನಿಸ್) 77.2
8. ಸ್ಟೀಫನ್ ಕರ್ರಿ (ಬಾಸ್ಕೆಟ್‌ಬಾಲ್) 76.9
9. ಮ್ಯಾಟ್ ರಿಯಾನ್ (ಫುಟ್‌ಬಾಲ್) 67.3
10. ಮ್ಯಾಥ್ಯೂ ಸ್ಟಫೋರ್ಡ್ (ಫುಟ್‌ಬಾಲ್) 59.5
83. ವಿರಾಟ್ ಕೊಹ್ಲಿ (ಕ್ರಿಕೆಟ್) 24
Advertisement