Advertisement
ಈಗ ಗೋವಾದ ಕಡಲತೀರದಲ್ಲಿ ಮದುವೆಯಾಗುವವರು ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಗೋವಾ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ (ಸಿಜೆಡ್‍ಎಂಎ) ಈ ನಿರ್ಧಾರ ಕೈಗೊಂಡಿದೆ. ಹಠಾತ್ ಮದುವೆ ಸಮಾರಂಭ ಕುರಿತಂತೆ ಈ ನಿರ್ಧಾರವನ್ನು ತೆಗೆದುಕೊಂಡ ನಂತರ, ವಧು ವರರು ಮದುವೆಗಾಗಿ ಈ ಆಸೆಯನ್ನು ಪೂರೈಸಲು ಹೆಚ್ಚು ಹಣವನ್ನು ಖರ್ಚು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಸಿಜೆಡ್‍ಎಂಎ ಕಡಲ ತೀರದಲ್ಲಿ ತಾತ್ಕಾಲಿಕ ಮದುವೆ ಸೆಟ್ ನಿರ್ಮಿಸಲು ಮತ್ತು ಪರವಾನಗಿಗಳಿಗೆ ಶುಲ್ಕವನ್ನು ದ್ವಿಗುಣಗೊಳಿಸಿದೆ. ಕಡಲತೀರದ ಮದುವೆಗಳು, ಕಡಲತೀರದ ಇತರ ಕಾರ್ಯಕ್ರಮಗಳಿಗೆ ದಿನಕ್ಕೆ 50,000 ರೂ. ದಿಂದ ಶುಲ್ಕ ಈಗ ದಿನಕ್ಕೆ 1 ಲಕ್ಷ ರೂ. ಗೆ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಗೋವಾ ಬೀಚ್‍ಗಳಲ್ಲಿ ಮದುವೆಯಾಗುವ ಹಲವರ ಕನಸು ನನಸಾಗಲು ಹೆಚ್ಚಿನ ಹಣ ವ್ಯಯಿಸಬೇಕಾಗಲಿದೆ.
Advertisement
ಗೋವಾ ಸಮುದ್ರ ತೀರದಲ್ಲಿ ಮದುವೆಯಾಗುವ ಕನಸು ಕಾಣುತ್ತಿದ್ದವರಿಗೆ ಇನ್ನು ಹೆಚ್ಚು ಖರ್ಚು
04:22 PM Mar 26, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.