Advertisement

ಎನ್‌ಡಿಎ ಅಭ್ಯರ್ಥಿಗೆ ಪಟ್ಟ? ಆ. 16ಕ್ಕೆ ಉಪರಾಷ್ಟ್ರಪತಿ ಚುನಾವಣೆ; ಬಿಜೆಪಿ ಬಳಿ 395 ಮತ

01:25 AM Jul 04, 2022 | Team Udayavani |

ಹೊಸದಿಲ್ಲಿ: ಮುಂದಿನ ತಿಂಗಳ 16ರಂದು ನಡೆಯಲಿರುವ ಉಪ-ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ಹಾಗೂ ವಿಪಕ್ಷಗಳಿಂದ ಯಾವುದೇ ಅಭ್ಯರ್ಥಿಗಳು ಕಣಕ್ಕಿಳಿದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯು ಈ ಚುನಾವಣೆಯಲ್ಲೂ ಗೆಲ್ಲುವುದು ಬಹುತೇಕ ಸ್ಪಷ್ಟ. ಉಪ- ರಾಷ್ಟ್ರಪತಿ ಚುನಾವಣೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಸಂಸದರು ಮಾತ್ರ ಮತಚಲಾಯಿಸಬೇಕು.

Advertisement

ಹಾಗಾಗಿ ಈ ಚುನಾವಣೆಯಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಗಳು ಉಭಯ ಸದನಗಳಲ್ಲಿರುವ ಒಟ್ಟು ಸಂಸದರ ಬಹುಮತ ಬೇಕು.

ರಾಜ್ಯಸಭೆ ಚುನಾವಣೆ, ಇತ್ತೀಚೆಗೆ ಮುಕ್ತಾಯ ವಾಗಿದೆ. ಅದರಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ. ಹಾಗಾಗಿ ರಾಜ್ಯಸಭೆಯಲ್ಲಿ ಬಿಜೆಪಿ 92 ಸ್ಥಾನಗಳನ್ನು ಹೊಂದಿದೆ. ಆದರೆ, ಲೋಕ ಸಭೆಯಲ್ಲಿ ಬಿಜೆಪಿಗೆ 300ಕ್ಕೂ ಹೆಚ್ಚು ಸಂಸದರ ಬೆಂಬಲವಿದೆ.

ಇತ್ತೀಚೆಗೆ, ಉತ್ತರ ಪ್ರದೇಶದಲ್ಲಿ ನಡೆದ ಎರಡು ಲೋಕಸಭಾ ಕ್ಷೇತ್ರಗಳ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಜಯ ಸಾಧಿಸಿದ್ದು, ಲೋಕಸಭೆಯಲ್ಲಿ ಆ ಪಕ್ಷದ ಸಂಸದರ ಸಂಖ್ಯೆ 303ಕ್ಕೇರಿದೆ.

ರಾಜ್ಯಸಭೆಯಲ್ಲಿ 92 ಸ್ಥಾನ ಹಾಗೂ ಲೋಕಸಭೆಯಲ್ಲಿ 303 ಸ್ಥಾನ ಹೊಂದಿರುವ ಬಿಜೆಪಿಗೆ ಒಟ್ಟು 395 ಸಂಸದರ ಅಥವಾ ಮತಗಳಿವೆ. ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಯಾವುದೇ ಅಭ್ಯರ್ಥಿಗೆ 388 ಮತಗಳು ಬೇಕಿರುವುದರಿಂದ ಬಿಜೆಪಿಗೆ ಅಗತ್ಯ ಕ್ಕಿಂತ 7 ಮತಗಳು ಹೆಚ್ಚೇ ಇವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next