Advertisement

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

01:24 AM Apr 25, 2024 | Team Udayavani |

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕುರಿತು ಬಿಜೆಪಿ ಅಭ್ಯರ್ಥಿ ಹೊಂದಿರುವ ದೂರದೃಷ್ಟಿ, ಸಮಸ್ಯೆಗಳ ಪರಿಹಾರಕ್ಕೆ ಅವರಲ್ಲಿರುವ ಯೋಚನೆ, ಯೋಜನೆಗಳನ್ನು “ಉದಯವಾಣಿ’ಯೊಂದಿಗೆ ತೆರೆದಿಟ್ಟಿದ್ದಾರೆ.

Advertisement

ಕ್ಷೇತ್ರದ ಅಭಿವೃದ್ಧಿಗೆ ಬಗ್ಗೆ ನಿಮ್ಮ ಕನಸು ಹೇಗಿದೆ?
ಕರಾವಳಿಯಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡುವ ಜತೆಗೆ ಸಣ್ಣ ಕೈಗಾರಿಕೆ ಗಳಿಗೆ ಆದ್ಯತೆ ಕೊಟ್ಟಾಗ ನಿರೋದ್ಯೋಗ ಸಮಸ್ಯೆಗೆ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಚಿಕ್ಕಮಗಳೂರು ಜಿಲ್ಲೆಯ ಅಡಿಕೆ, ಕಾಪಿ, ಮೆಣಸು ಮತ್ತು ತೆಂಗು ಬೆಳಗಾರರ ಸಮಸ್ಯೆಯೂ ಸೇರಿದಂತೆ ಜನ ಜೀವನ ಅನೇಕ ಸಮಸ್ಯೆ
ಗಳಿಂದ ತುಂಬಿಕೊಂಡಿದೆ. ಅದರ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು.

ಕ್ಷೇತ್ರದಲ್ಲಿ ಆದ್ಯತೆ ಮೇರೆಗೆ ಆಗಬೇಕಿರುವುದು ಏನೇನು?
ಚಿಕ್ಕಮಗಳೂರು ಭಾಗದಲ್ಲಿ ಅರಣ್ಯ ಒತ್ತುವರಿ ಹಾಗೂ ಒಕ್ಕಲೆಬ್ಬಿಸುವುದನ್ನು ತಪ್ಪಿಸುವುದು, ಸಣ್ಣ ನೀರಾವರಿ ಯೋಜನೆಗಳು, ರೈಲ್ವೇ ವಿಸ್ತರಣೆ ಇದು ಮಲೆನಾಡು ಭಾಗದಲ್ಲಿ ಆದ್ಯತೆಯ ಮೇರೆಗೆ ಆಗಬೇಕು. ಅರಣ್ಯ ಒತ್ತುವರಿ ಹೆಸರಿನಲ್ಲಿ ಜನ ಸಾಮಾನ್ಯರನ್ನು ಒಕ್ಕಲೆಬ್ಬಿಸುವುದು ನಿಲ್ಲಿಸಬೇಕು. ಹಾಗೆಯೇ ಅರಣ್ಯ ಕಾಯ್ದೆಗಳ ಉಲ್ಲಂಘನೆಯೂ ಆಗದಂತೆ ನೋಡಿಕೊಳ್ಳುವುದು. ಎರಡೂ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ಯೋಜನೆಗೆ ಯಾವ ರೀತಿ ಜೀವ ತುಂಬಬಹುದು ಎಂಬುದನ್ನು ಯೋಚಿಸಲಾಗುವುದು. ಪ್ರತಿಭಾ ಪಲಾಯನ ತಪ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳ ಜತೆಗೆ ಒಂದಿಷ್ಟು ಐಟಿ ಕಂಪೆನಿಗಳು ಈ ಭಾಗಕ್ಕೆ ಬರುವಂತೆ ಮಾಡುವುದು. ಸಚಿವನಾಗಿದ್ದ ಸಂದರ್ಭ ದಲ್ಲಿ ಸಂಬಂಧಪಟ್ಟ ಇಲಾಖೆಯ ಸಚಿವ ರೊಂದಿಗೂ ಈ ಬಗ್ಗೆ ಮಾತುಕತೆ ನಡೆಸಿದ್ದೆ. ಕೈಗಾರಿಕೆಗಳಿಗೆ ಬೇಕಾದ ಮೂಲ ಸೌಕರ್ಯ ಒದಗಿಸಲಾಗುವುದು.

ಭೌಗೋಳಿಕವಾಗಿ ಭಿನ್ನವಾಗಿರುವ ಕ್ಷೇತ್ರವಿದು ಹೇಗೆ ನಿಭಾಯಿಸುವಿರಿ?
– ಮೀನುಗಾರಿಕೆಗೆ ಉತ್ತೇಜನೆ ನೀಡಲು ಅಥವಾ ಮೀನುಗಾರರ ಸಮಸ್ಯೆಗಳನ್ನು ಕೇಂದ್ರ ಮತ್ತು ರಾಜ್ಯದ ಮೀನುಗಾರಿಕೆ ಇಲಾಖೆಯ ಸಮನ್ವಯದೊಂದಿಗೆ ಪರಿಹಾರ ಮಾಡಬೇಕಾಗುತ್ತದೆ. ಕಾಪಿ ಬೆಳೆಗಾರರ ಸಮಸ್ಯೆಗೆ ಕಾಪಿಬೋರ್ಡ್‌ ಅಥವಾ ಸಂಬಂಧಪಟ್ಟ ಇಲಾಖೆ ಮೂಲಕ ಬಗೆಹರಿಸಬೇಕಾಗುತ್ತದೆ. ಅರಣ್ಯ ಒತ್ತುವರಿ/ ಒಕ್ಕಲೆಬ್ಬಿಸುವುದನ್ನು ತಪ್ಪಿಸುವುದು ಇತ್ಯಾದಿ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಎಲ್ಲ ಇಲಾಖೆಯೊಂದಿಗೆ ಪ್ರತ್ಯೇಕವಾಗಿ ಸಂಪರ್ಕ ಸಾಧಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು. ಜನರೊಂದಿಗೆ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಹುಡುವುದನ್ನು ಮಾಡಲಾಗುವುದು. ಕ್ಷೇತ್ರ ಭೌಗೋಳಿಕವಾಗಿ ಭಿನ್ನವಾಗಿದ್ದರೂ ಅಭಿವೃದ್ಧಿಗೆ ಸಮಸ್ಯೆಯಾಗುವುದಿಲ್ಲ.

 ಸಂಸದರಾದರೆ ಕ್ಷೇತ್ರವನ್ನು ಹೇಗೆ ಅಭಿವೃದ್ಧಿಪಡಿಸುವಿರಿ?
– ಕ್ಷೇತ್ರ ಹಾಗೂ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರ ಸರಕಾರದಿಂದ ಯಾವೆಲ್ಲ ಯೋಜನೆಗಳನ್ನು ಕ್ಷೇತ್ರಕ್ಕೆ ತರಲು ಸಾಧ್ಯವೋ ಅದಕ್ಕೆ ಶಕ್ತಿಮೀರಿ ಶ್ರಮ ವಹಿಸಲಾಗುವುದು. ಕೇಂದ್ರದ ಯೋಜನೆಗಳು ಹೆಚ್ಚೆಚ್ಚು ಸ್ಥಳೀಯವಾಗಿ ಅನುಷ್ಠಾನ ವಾದಷ್ಟು ಕ್ಷೇತ್ರದ ಜನೆತೆಗೆ ಅನುಕೂಲ ವಾಗಲಿದೆ. ಮುಜರಾಯಿ ಸಚಿವ ನಾಗಿದ್ದ ಸಂದರ್ಭದಲ್ಲಿ ಸಣ್ಣ ಸಣ್ಣ ದೇವಸ್ಥಾನ ಗಳಿಗೂ ಅನುದಾನ ಕೊಡಿಸುವ ಕ್ರಾಂತಿಕಾರಕ ಕೆಲಸ ಆಗಿತ್ತು. ಕೇಂದಿದಲೂ ಆ ರೀತಿ ಯಾವುದಾದರೂ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಕ್ಷೇತ್ರದ ಜನತೆಗಾಗಿ ಸದುಪಯೋಗ ಮಾಡಲಾಗುವುದು.

Advertisement

ಚುನಾವಣೆಯಲ್ಲಿ ಯಾವ ವಿಷಯ ಮುಂದಿಟ್ಟುಕೊಂಡು ಮತ ಕೇಳಿದಿರಿ?
– ಕಳೆದ 10 ವರ್ಷದಲ್ಲಿ ದೇಶದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯ, ದೇಶದ ಭದ್ರತೆ, ಸುರಕ್ಷತೆ, ಆರ್ಥಿಕ ಶಕ್ತಿ, ಚೈತನ್ಯ ತುಂಬಿರುವ ನಾಯಕತ್ವದ ಆಧಾರದಲ್ಲಿ ಮತ ಕೇಳಿದ್ದೇವೆ.

 

Advertisement

Udayavani is now on Telegram. Click here to join our channel and stay updated with the latest news.

Next