Advertisement

NZvsENG: 147 ವರ್ಷಗಳಲ್ಲೇ ಮೊದಲ ಬಾರಿ..; ಹೊಸ ದಾಖಲೆ ಬರೆದ ಕೇನ್‌ ವಿಲಿಯಮ್ಸನ್‌

03:21 PM Dec 16, 2024 | Team Udayavani |

ಹ್ಯಾಮಿಲ್ಟನ್:‌ ನ್ಯೂಜಿಲ್ಯಾಂಡ್‌ ತಂಡದ ಅನುಭವಿ ಆಟಗಾರ ಕೇನ್‌ ವಿಲಿಯಮ್ಸನ್‌ (Kane Williamson) ಅವರು ಇದೀಗ ಐತಿಹಾಸಿಕ ದಾಖಲೆಯೊಂದನ್ನು ಮಾಡಿದ್ದಾರೆ. ಇಂಗ್ಲೆಂಡ್‌ ವಿರುದ್ದದ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿದ ಕೇನ್‌ ವಿಲಿಯಮ್ಸನ್‌ 147 ವರ್ಷಗಳ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಯಾರೂ ಮಾಡಿರದ ಸಾಧನೆಯೊಂದನ್ನು ಮಾಡಿದ್ದಾರೆ.

Advertisement

ಕೇವಲ 137 ಎಸೆತಗಳಲ್ಲಿ ಶತಕ ಪೂರೈಸಿದ ಕೇನ್‌ ವಿಲಿಯಮ್ಸನ್ ಒಟ್ಟು 204 ಎಸೆತಗಳಲ್ಲಿ 156 ರನ್‌ ಮಾಡಿದರು. ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿರುವ ನ್ಯೂಜಿಲ್ಯಾಂಡ್ ಸರಣಿ ವೈಟ್‌ವಾಶ್ ತಪ್ಪಿಸಲು ಹೋರಾಡುತ್ತಿದೆ.

ವಿಲಿಯಮ್ಸನ್ ಅವರ ಶತಕವು ಕೇವಲ ವೈಯಕ್ತಿಕ ಮೈಲಿಗಲ್ಲಾಗಿರದೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದು ಅಪ್ರತಿಮ ಸಾಧನೆಯನ್ನಾಗಿ ಗುರುತಿಸಿದೆ. ಟೆಸ್ಟ್ ಕ್ರಿಕೆಟ್‌ನ 147 ವರ್ಷಗಳ ಇತಿಹಾಸದಲ್ಲಿ ಒಂದೇ ಮೈದಾನದಲ್ಲಿ ಸತತ ಐದು ಪಂದ್ಯಗಳಲ್ಲಿ ಶತಕಗಳನ್ನು ಗಳಿಸಿದ ಮೊದಲ ಬ್ಯಾಟರ್ ಆಗಿ ಕೇನ್‌ ವಿಲಿಯಮ್ಸನ್ ‌ ಮೂಡಿಬಂದರು.

ಹ್ಯಾಮಿಲ್ಟನ್‌ ನ ಸೆಡ್ಡಾನ್‌ ಪಾರ್ಕ್‌ ಮೈದಾನದಲ್ಲಿ ಕೇನ್‌ ವಿಲಿಯಮ್ಸನ್‌ ಭರ್ಜರಿ ಬ್ಯಾಟಿಂಗ್‌ ನಡೆಸುತ್ತಾರೆ. ಹ್ಯಾಮಿಲ್ಟನ್‌ ನಲ್ಲಿ ಕೇನ್‌ ವಿಲಿಯಮ್ಸನ್‌ ನ ಅವರ ಕಳೆದ ಐದು ಪಂದ್ಯಗಳ ರನ್‌ ಗಳು ಇಲ್ಲಿದೆ.

200 ಬಾಂಗ್ಲಾದೇಶ ವಿರುದ್ಧ (2019)

Advertisement

104 ಇಂಗ್ಲೆಂಡ್ ವಿರುದ್ಧ (2019)

251 ವೆಸ್ಟ್ ಇಂಡೀಸ್ ವಿರುದ್ಧ (2020)

133 ದಕ್ಷಿಣ ಆಫ್ರಿಕಾ ವಿರುದ್ಧ (2024)

156 ಇಂಗ್ಲೆಂಡ್ ವಿರುದ್ಧ (2024)

ಈ ಅದ್ಭುತ ಸಾಧನೆಯು ವಿಲಿಯಮ್ಸನ್‌ ರ ಸೆಡನ್ ಪಾರ್ಕ್‌ನೊಂದಿಗಿನ ಪ್ರೇಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಅಲ್ಲಿ ಅವರು ಈಗ ಒಟ್ಟು ಏಳು ಟೆಸ್ಟ್ ಶತಕಗಳನ್ನು ಹೊಂದಿದ್ದಾರೆ.

ಗಣ್ಯರ ಪಟ್ಟಿ ಸೇರಿದ ಕೇನ್

ವಿಲಿಯಮ್ಸನ್ ಒಂದು ನಿರ್ದಿಷ್ಟ ಸ್ಥಳದಲ್ಲಿ (ಕನಿಷ್ಠ 15 ಇನ್ನಿಂಗ್ಸ್) 100 ಕ್ಕಿಂತ ಹೆಚ್ಚು ಸರಾಸರಿ ಹೊಂದಿರುವ ಆಟಗಾರರ ವಿಶೇಷ ಕ್ಲಬ್‌ಗೆ ಸೇರುವ ಅಂಚಿನಲ್ಲಿದ್ದಾರೆ. ಮಹೇಲಾ ಜಯವರ್ಧನೆ (ಕೊಲಂಬೊ ಎಸ್‌ಎಸ್‌ಸಿ), ಡಾನ್ ಬ್ರಾಡ್‌ಮನ್ (ಮೆಲ್ಬೋರ್ನ್), ಜಾಕ್ ಕಾಲಿಸ್ (ಕೇಪ್ ಟೌನ್), ಮತ್ತು ಕುಮಾರ್ ಸಂಗಕ್ಕರ (ಕೊಲಂಬೊ ಎಸ್‌ಎಸ್‌ಸಿ) ಅವರಂತಹ ದಿಗ್ಗಜರು ಈ ಸಾಲಿನಲ್ಲಿದ್ದಾರೆ.

ಹ್ಯಾಮಿಲ್ಟನ್‌ನಲ್ಲಿ ಅವರ ಏಳು ಶತಕಗಳು ಅವರನ್ನು ಮೈಕೆಲ್ ಕ್ಲಾರ್ಕ್ (ಅಡಿಲೇಡ್), ಜೋ ರೂಟ್ (ಲಾರ್ಡ್ಸ್), ಮತ್ತು ಜಯವರ್ಧನೆ (ಗಾಲೆ) ರಂತಹ ಐಕಾನಿಕ್ ಆಟಗಾರರ ಸಾಲಿಗೆ ಸೇರಿಸಿದೆ. ಕೆಲವೇ ಆಟಗಾರರು-ಜಯವರ್ಧನೆ (11, ಕೊಲಂಬೊ ಎಸ್‌ಎಸ್‌ಸಿ), ಬ್ರಾಡ್ಮನ್ (9, ಮೆಲ್ಬೋರ್ನ್), ಕಾಲಿಸ್ (9, ಕೇಪ್ ಟೌನ್), ಮತ್ತು ಸಂಗಕ್ಕಾರ (8, ಕೊಲಂಬೊ ಎಸ್‌ಎಸ್‌ಸಿ) ಒಂದೇ ಸ್ಥಳದಲ್ಲಿ ಹೆಚ್ಚು ಶತಕಗಳನ್ನು ಸಾಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next