Advertisement

ಅಪಾರ್ಟ್‌ಮೆಂಟ್‌ ವಶದಲ್ಲಿದ್ದ ರಸ್ತೆ ಸಾರ್ವಜನಿಕರ ಬಳಕೆಗೆ

11:00 AM Sep 08, 2017 | Team Udayavani |

ಮಹದೇವಪುರ: ವೈಟ್‌ಫೀಲ್ಡ್‌ ಸಮೀಪದ ಐಟಿಪಿಎಲ್‌ ಮುಖ್ಯರಸ್ತೆಯಲ್ಲಿರುವ ಪ್ರಸ್ಟೀಜ್‌ ಗ್ರೂಪ್‌ನ ಶಾಂತಿನೇಕತನ್‌ ಅಪಾರ್ಟ್‌ಮೆಂಟ್‌ನ ಸುಪರ್ದಿಯಲ್ಲಿದ್ದ ರಸ್ತೆಯನ್ನು ಹೈಕೋರ್ಟ್‌ ಆದೇಶದ ಮೇರೆಗೆ ಬಿಡಿಎ ಅಧಿಕಾರಿಗಳು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದರು.
 
ಐಟಿಪಿಎಲ್‌ ಬಳಿ ಸುಮಾರು 105 ಎಕರೆಯಲ್ಲಿ ಪ್ರತಿಷ್ಟಿತ ಪ್ರಸ್ಟೀಜ್‌ ಗ್ರೂಪ್‌ ವತಿಯಿಂದ “ಶಾಂತಿನಿಕೇತನ್‌’ ಹೆಸರಲ್ಲಿ ವಸತಿ ಸಮುಚ್ಚಗಳನ್ನು ನಿರ್ಮಿಸಲಾಗಿದೆ. ಈ ಕಟ್ಟಡಗಳ ನಡುವೆ 40 ಅಡಿ ಅಗಲದ 1ಕಿ.ಮೀ ಉದ್ದದ ಬಿಡಿಎ ಆರ್‌ಸಿಡಿಪಿ ರಸ್ತೆಯನ್ನು ಅಪಾರ್ಟ್‌ಮೆಂಟ್‌ ತನ್ನ ವಶಕ್ಕೆ ಪಡೆದುಕೊಂಡಿದ್ದೂ ಅಲ್ಲದೆ, ಸಾರ್ವಜನಿಕರ ಸಂಚಾರವನ್ನೇ ನಿರ್ಬಂಧಿಸಿತ್ತು.

Advertisement

ರಸ್ತೆಯನ್ನು ಅಪಾರ್ಟ್‌ಮೆಂಟ್‌ ನಿವಾಸಿಗಳ ಬಳಕೆಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಸಾರ್ವಜನಿಕರು ಬಂದರೆ ಸೆಕ್ಯೂರಿಟಿ ಗಾರ್ಡ್‌ಗಳು ತಡೆಯುತ್ತಿದ್ದರು. ಸಾರ್ವಜನಿಕ ರಸ್ತೆಯಲ್ಲಿ ಖಾಸಗಿ ಸಮುಚ್ಚಯವು ಸಂಚಾರ ನಿರ್ಬಂಧಿಸಿದ್ದರ ವಿರುದ್ಧ ಗಿರಿನಗರ ನಿವಾಸಿ ಗೋಪಿನಾಥ್‌ ಎಂಬುವವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್‌ ಸೆ.12ರ ಒಳಗೆ ರಸ್ತೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಮತ್ತು ಈ ವರದಿ ನೀಡಬೇಕು ಎಂದು ಬಿಡಿಎಗೆ ಆ.30ರಂದು ಆದೇಶಿಸಿತ್ತು. ಈ ಹಿನ್ನೆಲೆ ರಸ್ತೆಯ ಪ್ರವೇಶ ಧ್ವಾರದಲ್ಲಿ ನಿರ್ಮಿಸಲಾಗಿದ್ದ ಅಪಾರ್ಟ್‌ಮೆಂಟ್‌ನ ಭದ್ರತಾ ಗೃಹವನ್ನು ಬಿಡಿಎ ಗುರುವಾರ ತೆರವು ಮಾಡಿದೆ. ರಸ್ತೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next