Advertisement

LIC ಆರೋಗ್ಯ ವಿಮೆಗೆ : ಖಾಸಗಿ ಕಂಪೆನಿ ಖರೀದಿ?

01:11 AM Jun 15, 2024 | |

ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಎಲ್‌ಐಸಿ ಆರೋಗ್ಯ ವಿಮಾ ಕ್ಷೇತ್ರ ಪ್ರವೇಶಿ ಸುವ ಅಂಶ ಬಹುತೇಕ ಖಚಿತವಾಗಿದೆ. ಅದಕ್ಕಾಗಿ ದೇಶದಲ್ಲಿ ಕಾರ್ಯ ನಿರ್ವ ಹಿಸುತ್ತಿರುವ ಆರೋಗ್ಯ ವಿಮಾ ಕ್ಷೇತ್ರದ ಲ್ಲಿನ 5 ಅಗ್ರ ಕಂಪೆನಿಗಳ ಪೈಕಿ ಒಂದನ್ನು ಖರೀದಿಸಿ ಹೊಸ ಕ್ಷೇತ್ರಕ್ಕೆ ಕಾಲಿಡುವ ಸಾಧ್ಯತೆ ಇದೆ ಎಂದು ಆಂಗ್ಲ ವಾಣಿಜ್ಯ ಪತ್ರಿಕೆಯೊಂದು ವರದಿ ಮಾಡಿದೆ. ಈ ಉದ್ದೇಶಕ್ಕಾಗಿ ಭಾರತೀಯ ವಿಮಾ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ)ಕ್ಕೆ ತಾನು ಜಾರಿಗೊಳಿಸ ಲಿರುವ ಉದ್ದೇಶಿತ ಆರೋಗ್ಯ ವಿಮೆಯ ಯೋಜನೆಯ ವಿವರಗಳನ್ನು ಸಲ್ಲಿಕೆ ಮಾಡಿದೆ ಎಂದು ತಿಳಿದು ಬಂದಿದೆ.

Advertisement

ಪರವಾನಿಗೆ ಪಡೆಯಲು ಇನ್ನೂ 2-3 ತಿಂಗಳು ಬೇಕಾಗಬಹುದು. ಆ ಅವಧಿ ಯಲ್ಲಿ ದೇಶದಲ್ಲಿ ಸದ್ಯ ಕಾರ್ಯ ವೆಸಗುತ್ತಿರುವ ಖಾಸಗಿ ಕ್ಷೇತ್ರದ ಅಗ್ರ ಆರೋಗ್ಯ ವಿಮೆ ನೀಡುವ ಕಂಪೆನಿಗಳ ಪೈಕಿ ಒಂದನ್ನು ಖರೀದಿ ಮಾಡುವ ಬಗ್ಗೆ ಎಲ್‌ಐಸಿ ಚಿಂತನೆ ನಡೆಸಲಿದೆ ಎನ್ನಲಾ ಗಿದೆ. ಈ ನಿಟ್ಟಿನಲ್ಲಿ ಆಂತರಿಕವಾಗಿ ಹಲವು ಕೆಲಸಗಳು ನಡೆದಿವೆ ಎಂದು ಹೇಳಲಾಗಿದೆ. ದೇಶದಲ್ಲಿ ಸದ್ಯ 29 ಕಂಪೆ ನಿಗಳು ಆರೋಗ್ಯ ವಿಮೆ ನೀಡುವ ಕಂಪೆನಿಗಳು ಇವೆ. ಎಲ್‌ಐಸಿಯ ಒಟ್ಟು 52,000 ಕೋ. ರೂ. ಮೌಲ್ಯದ ಆಸ್ತಿ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next