Advertisement

ದೇಶ ಶ್ರೀಮಂತವಾಗಲು ನಮಗಾಗಿ ದುಡಿಯುವ ಹೊರಗಿನ ಕೈಗಳು ಒಳಗಿರ ಬೇಕು: ಹೊಸ ಆರ್ಥಿ ಕ ಚಿಂತನೆ

06:13 PM Aug 14, 2024 | Team Udayavani |

ಅಬುಧಾಬಿಯ ಫಲವತ್ತಾದ ಮರುಭೂಮಿಯ ಮೇಲೆ ವಾಯುವಿಹಾರ ಮಾಡುತ್ತಿರುವಾಗ ಹೊಸದೊಂದು ಆರ್ಥಿಕ ಚಿಂತನೆ ಇದ್ದಕ್ಕಿದ್ದ ಹಾಗೆ ತಲೆಗೆ ಹೊಳೆಯಿತು. ಏನು ಇಲ್ಲದ ದೇಶಗಳಿಂದು ಸುಖದ ಸುಪತ್ತಿಗೆಯಲ್ಲಿ ಮೆರೆಯುತ್ತಿದ್ದಾವೆ. ಅಮೇರಿಕಾ; ಸ್ವಿಟ್ಜರ್ಲ್ಯಾಂಡ್ ಯು.ಎ.ಇ. ಮುಂತಾದ ರಾಷ್ಟ್ರಗಳು.ಸರಿಯಾಗಿ ನೇೂಡಿದರೆ ಅವುಗಳಿಗೆ ಸರಿಯಾದ ಪರಿಸರವುಾ ಇಲ್ಲ ನೈಸರ್ಗಿಕ ಸಂಪತ್ತು ಇಲ್ಲ..ಒಳಹೊಕ್ಕು ನೇೂಡಿದರೆ ಸರಿಯಾದ ಮಾನವ ಸಂಪತ್ತು ಕೂಡ ಇಲ್ಲ..ಆದರೆ ಅದೇ ಸಕಲ ಸಂಪತ್ತು ಹೊಂದಿರುವ ನಮ್ಮ ದೇಶಕ್ಕೆ ಈ ಸಿರಿ ಸಂಪತ್ತಿನ ಭಾಗ್ಯ ಪಡೆಯ ಬೇಕಾದರೆ ಎಷ್ಟೊಂದು ಕಾಲ ಇಷ್ಟೊಂದು ಕಷ್ಟ ಪಡಬೇಕಾಗಿ ಬಂದಿದೆ ಅಂದರೆ ಇದಕ್ಕೆ ಕಾರಣವೇನು?.

Advertisement

ಹಾಗಾದರೆ ಈ ಅಮೇರಿಕಾ;ಈ ಸ್ವಿಟ್ಜರ್ಲ್ಯಾಂಡ್; ಈ ಯು ಎ ಇ.;ಮುಂತಾದ ದೇಶಗಳು ಈ ಶ್ರೀಮಂತಿಕೆಯನ್ನು ಸ್ವಂತ ದುಡಿದು ಗಳಿಸಿದ ಸಂಪತ್ತಾ?ಖಂಡಿತವಾಗಿಯೂ ಅಲ್ಲ. ಇದರೊಳಗೊಂದು ಸುಲಭವಾದ ಆಥಿ೯ಕತೆಯ ಚಿಂತನೆಯೂ ಅಡಗಿದೆ..ಆದರೆ ಈ ಉಪಾಯ ಇದುವರೆಗೂ ನಮ್ಮ ತಲೆಗೆ ಹೊಳೆಯಲೇ ಇಲ್ಲ.ಹಾಗಾದರೆ ಇದು ನಮ್ಮಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ..ಅನ್ನುವ ಹತ್ತಾರು ಪ್ರಶ್ನೆಗಳು ನನ್ನ ತಲೆಯಲ್ಲಿ ಸುಳಿದು ಹೋದವು.

ಕೊನೆಗೂ ಹೊಳೆದ ಒಂದು ಸುಲಭದ ಉಪಾಯವೆಂದರೆ ನಾವು ಶ್ರೀಮಂತರಾಗ ಬೇಕಾದರೆ ನಮಗಾಗಿ ದುಡಿಯುವ ಹೊರಗಿನ ಕೈಗಳು ದೇಶದ ಒಳಗಿರ ಬೇಕು ಅನ್ನುವ ಹೊಸದೊಂದು ಆರ್ಥಿಕ ಚಿಂತನೆ. ಇಂದಿನ ಕಾಲದಲ್ಲಿ ನಾವು ಆರ್ಥಿಕವಾಗಿ ಬಲಿಷ್ಠರಾಗಲು ನಮ್ಮ ದುಡಿಮೆಯೊಂದೇ ಸಾಕಾಗುವುದಿಲ್ಲ ಬೇರೆಯವರು ನಮ್ಮ ಪರವಾಗಿ ದುಡಿಯುವವರು ಬೇಕು.ಇದು ಹೇಗೆ ಸಾಧ್ಯ ಅನ್ನುವುದನ್ನು ಜಗತ್ತಿನ ಈ ಎಲ್ಲಾ ಶ್ರೀಮಂತ ರಾಷ್ಟ್ರಗಳು ಸಾಧಿಸಿತೇೂರಿಸಿದ್ದಾವೆ.. ಹಾಗಾಗಿ ಅವರು ಇಂದು ಶ್ರೀಮಂತರ ಪಟ್ಟಿಯಲ್ಲಿ ನಿಂತಿದ್ದಾರೆ..ಇದು ಹೇಗೆ ಅನ್ನುವುದೇ ಇಂದಿನ ಅರ್ಥಿಕ ಚಿಂತನೆ.

ಈ ಮೇಲಿನ ಎಲ್ಲಾ ದೇಶಗಳಿಗೆ ತಮ್ಮ ಜನರನ್ನು ಸಾಕುವ ಕೆಲಸ ತುಂಬಾ ಕಡಿಮೆ.ಆದರೆ ಆ ದೇಶಗಳಲ್ಲಿ ದುಡಿಯುವ ಹೊರಗಿನ ಕೈಗಳು ಆ ದೇಶದ ಜನರಿಗ್ಗಿಂತ ತುಂಬಾ ಜಾಸ್ತಿ ಇದ್ದಾರೆ.ಹೊರಗಿನಿಂದ ಬಂದು ದುಡಿಯುವ ಮಂದಿಗೆ ಆ ದೇಶದ ಖಜಾನೆಯಿಂದ ನಯಾಪೈಸೆ ಖಚ೯ ಮಾಡ ಬೇಕಾಗಿಲ್ಲ..ಬದಲಾಗಿ ಇವರಿಂದಾಗಿ ಅವರ ಖಜಾನೆ ತುಂಬಿಸಿ ಕೊಡುವ ಕೆಲಸ ನಾವು ಮಾಡುತ್ತಿದ್ದೇವೆ.ಇಲ್ಲಿ ಸರ್ಕಾರಕ್ಕೆ ಲಾಭವೇ ಜಾಸ್ತಿ ಹೊರತು ನಷ್ಟವೇ ಇಲ್ಲ.ನಮ್ಮ ವಿದ್ಯೆ, ನಮ್ಮ ಆರೇೂಗ್ಯ, ನಮ್ಮ ವಿಮೆ ಎಲ್ಲವನ್ನೂ ನಾವೇ ನೇೂಡಿಕೊಳ್ಳ ಬೇಕು.

Advertisement

ಉದಾ: ನಮ್ಮ ದೇಶದ ವಿದ್ಯಾವಂತರು ಬುದ್ಧಿವಂತರು ಅನ್ನಿಸಿಕೊಂಡವರು ಹೆಚ್ಚಿನ ವೇತನಕ್ಕಾಗಿಯೊ ಸೌಕರ್ಯಕ್ಕಾಗಿಯೊ ಐಷಾರಾಮಿ ಜೀವನಕ್ಕಾಗಿ ಇಂತಹ ದೇಶಗಳನ್ನೆ ಹುಡುಕಿಕೊಂಡು ನಾವೇ ಹೇೂಗುತ್ತೇವೆ..ನಾವು ಗಳಿಸಿದ ವೇತನದ ಮುಕ್ಕಾಲು ಭಾಗವಾದರೂ ಅಲ್ಲಿ ಖರ್ಚು ಮಾಡಿಯೇ ಮಾಡುತ್ತೇವೆ..ಇದು ನಾವು ಅವರ ದೇಶದಲ್ಲಿ ನಮ್ಮ ಪ್ರತಿಭೆಯನ್ನು ಅಡವಿಟ್ಟು ಕೆಲಸ ಮಾಡಿ ಪರೇೂಕ್ಷವಾಗಿ ಅವರಿಗೆ ಕೊಡುವ ಸಂಪತ್ತು ಹೌದು.ನಮ್ಮ ಸೇವೆಗಾಗಿ ಆ ದೇಶ ನಮಗಾಗಿ ಏನು ಕೊಡ ಬೇಕಾಗಿಲ್ಲ. ಎಲ್ಲಿಯವರೆಗೆ ಅಂದರೆ ಪೌರತ್ವ ಕೂಡಾ ಕೊಡುವುದಿಲ್ಲ.ಒಂದು ಅರ್ಥದಲ್ಲಿ ಪ್ರವಾಸೋದ್ಯಮ ಒಂದು ದೇಶಕ್ಕೆ ಯಾವ ರೀತಿಯಲ್ಲಿ ಲಾಭ ತರಬಹುದೊ ಅದೇ ತರದಲ್ಲಿ ನಮ್ಮ ಹಣದಿಂದಲೇ ಅವರ ಬೊಕ್ಕಸ ತುಂಬಿಸುವ ಕೆಲಸ ನಾವುಮಾಡುತ್ತೆವೆ ಅಷ್ಟೇ.!ಹಾಗಾಗಿ ಅವರ ಜನರನ್ನು ಸಾಕುವ ಜವಾಬ್ದಾರಿಯನ್ನು ನಾವು ಹೊತ್ತ ಹಾಗೆ.

ಆದುದರಿಂದಲೆಸ ಇಂತಹ ಪ್ರತಿಭಾವಂತರನ್ನು ತಮ್ಮ ದೇಶಗಳಿಗೆ ಸೆಳೆಯುವ ಕಾರಣಕ್ಕಾಗಿಯೇ ಅತ್ಯುತ್ತಮವಾದ ಪರಿಸರ ಪರಿಕರ ಸ್ವಾಫ್ಟ್ ವೇರ್ ಕಂಪನಿಗಳನ್ನು ಸ್ಥಾಪನೆಗೆ ಪೂರಕವಾದ ವ್ಯವಸ್ಥೆ..ಸ್ವಲ್ಪಮಟ್ಟಿಗೆ ಬೇರೆ ಬೇರೆ ತರದಲ್ಲಿ ಆಕಷಿ೯ಸುವ ತಂತ್ರಗಾರಿಕೆಗಳನ್ನು ಅಳವಡಿಸಿಕೊಳ್ಳುತ್ತವೆ..ಅದು ಕೂಡಾ ಅವರ ಲಾಭಕ್ಕಾಗಿಯೇ ನಮ್ಮ ಲಾಭಕ್ಕಾಗಿ ಅಲ್ಲ.‌

ಹಾಗಾದರೆ ನಮ್ಮಲ್ಲಿ ಅಂದರೆ ಭಾರತದಲ್ಲಿ ಈ ಆರ್ಥ ಚಿಂತನೆ ಯಾಕೆ ಹುಟ್ಟಿ ಕೊಳ್ಳಲಿಲ್ಲವೇಕೆ? .ನಮ್ಮಲ್ಲಿ ಇರುವ 145ಕೇೂಟಿ ಜನರನ್ನು ನಮ್ಮ ದುಡಿಮೆಯಲ್ಲಿಯೇ ನಮ್ಮ ಖರ್ಚಿನಲ್ಲಿಯೇ ಸಾಕ ಬೇಕಾದ ಪರಿಸ್ಥಿತಿ. ಅವರ ವಿದ್ಯಾಭ್ಯಾಸ ಆರೇೂಗ್ಯ ಉದ್ಯೋಗ..ಗ್ಯಾರಂಟಿ ಸಬ್ಸಿಡಿ ಒಂದೇ ಎರಡೇ.. ಎಲ್ಲದಕ್ಕೂ ನಮ್ಮ ದುಡಿಮೆಯಲ್ಲಿಯೇ ನೇೂಡಿ ಕೊಳ್ಳ ಬೇಕು.ನಮಗಾಗಿ ದುಡಿಯುವ ಹೊರಗಿನ ಕೈಗಳು ಇಲ್ಲಿ ಬರಲೇ ಇಲ್ಲ.ಹೊರಗಿನವರು ಬಂದು ನಮಗಾಗಿ ಕೆಲಸ ಮಾಡುವ ಆಥಿ೯ಕತೆಯ ಕಡೆಗೆ ನಾವು ಗಮನ ಹರಿಸಲೇ ಇಲ್ಲ..ಬದಲಾಗಿ ಬೇರೆಯವರಿಗಾಗಿ ದುಡಿಯಲು ನಾವು ಹೊರದೇಶಗಳಿಗೆ ಉದ್ಯೋಗ ಹುಡುಕಿಕೊಂಡು ಹೇೂಗುವ ಪರಿಸ್ಥಿತಿ ನಮ್ಮದು..ಹಾಗಾಗಿ ನಾವು ಸುಲಭ ದಾರಿಯಲ್ಲಿ ಶ್ರೀಮಂತರಾಗಲೂ ಸಾಧ್ಯವಿಲ್ಲ..ಏನಿದ್ದರೂ ಹಾಸಿಗೆ ಇದ್ದಷ್ಟೆ ಕಾಲು ಚಾಚಿ ಮಲಗುವ ಆರ್ಥಿ ಕ ಬದುಕು ನಮ್ಮದು.ಅಲ್ವೇ?.

*ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ಉಡುಪಿ 

Advertisement

Udayavani is now on Telegram. Click here to join our channel and stay updated with the latest news.

Next