Advertisement
ಗ್ರಾ.ಪಂ.ಗಳಲ್ಲಿ ಒಂದು ತಿಂಗಳಿನಿಂದ ಕಾಡುತ್ತಿರುವ “ಇ ಸ್ವತ್ತು’ವಿನ ತಾಂತ್ರಿಕ ತಾಪತ್ರಯಗಳ ಬಗ್ಗೆ ಆಡಳಿತ ವ್ಯವಸ್ಥೆ ಗಂಭೀರವಾಗಿ ಪರಿಗಣಿಸಿದಂತಿಲ್ಲ.ಇ -ಸ್ವತ್ತು 4.8 ತಂತ್ರಾಂಶ ನಿಧಾನ ವಾಗಿ ಕಾರ್ಯನಿರ್ವಹಿಸುತ್ತಿದೆ.
ಪಂಚಾಯತ್‌ಗಳಲ್ಲಿ ಹೊಸದಾಗಿ 9/11 ಅರ್ಜಿ ಸ್ವೀಕಾರ ಮಾಡಿ ಅಪ್‌ಲೋಡ್ ಮಾಡಿದರೆ ಕೆಲವು ಪಂಚಾ ಯತ್‌ಗಳ ಸಿಸ್ಟಮ್‌ನಲ್ಲಿ ಅಪ್‌ಲೋಡ್ ಆಗುತ್ತಿಲ್ಲ. ಅಪ್ರೂವ್ ಮಾಡಬೇಕಾದರೆ ಪಿಡಿಒ “ಥಂಬ್’ ಕೊಡಬೇಕು. ಆಗ ಕೆಲವರಿಗೆ “ಎರರ್’ ಬರುತ್ತಿದೆ. ಇ ಸ್ವತ್ತು ಸಾಫ್ಟ್ವೇರ್ ಇತ್ತೀಚೆಗೆ ಅಪ್‌ಡೇಟ್ ಮಾಡಲಾಗಿದೆ. ಬಳಿಕ ಇಂತಹ ಸಮಸ್ಯೆಗಳು ಎದುರಾಗುತ್ತಿವೆ. ಕೆಲವು ಕಡೆ ಲಾಗಿನ್ ಆಗುತ್ತದೆ, ಫೀಡ್ ಮಾಡಲು ಆಗುತ್ತದೆ, ಅನುಮೋದನೆ ಮಾಡುವಾಗ ಆಗುತ್ತಿಲ್ಲ. ಹೀಗೆ ಎದುರಾದ ತಾಂತ್ರಿಕ ಸಮಸ್ಯೆಯಿಂದ ಗ್ರಾಮಾಂತರ ಭಾಗದಲ್ಲಿ ವಿವಿಧ ಅರ್ಜಿ ವ್ಯವಸ್ಥೆಗೆ ತೊಡಕಾಗಿದೆ. “ಇಂದು-ನಾಳೆ ಸರಿಯಾಗುತ್ತದೆ’ ಎಂದು ಹೇಳಿ ಈಗ ಹಲವು ದಿನಗಳೇ ಕಳೆದಿವೆ. ಒಂದೊಂದು ಪಂಚಾಯತ್‌ನ ಫೀಡ್ ಮಾಡುವ ಬ್ಯಾಕ್‌ಅಪ್ ಜಿಲ್ಲಾವಾರು ನಡೆಸಲಾಗುತ್ತಿದೆ ಎಂಬ ಉತ್ತರ ಅಧಿಕಾರಿಗಳಿಂದ ಬರುತ್ತಿದೆ ವಿನಾ ಪೂರ್ಣ ಪರಿಹಾರ ಸಿಕ್ಕಿಲ್ಲ ಎಂಬುದು ದೂರು.
ಎಲ್ಲ ಕಡೆ ಇದೆ!
Related Articles
Advertisement
ಜನರಿಗೆ ಸಂಕಷ್ಟ!ಸಾಮಾಜಿಕ ಹೋರಾಟಗಾರ ಹನುಮಂತ ಕಾಮತ್ ಅವರ ಪ್ರಕಾರ, “ಹೊಸ ಹೊಸ ವ್ಯವಸ್ಥೆಗಳನ್ನು ಜನರ ಅನುಕೂಲಕ್ಕಾಗಿ ಸರಕಾರ ಪರಿಚಯಿಸುತ್ತದೆ. ಆದರೆ ಅದೇ ವ್ಯವಸ್ಥೆಯಿಂದಾಗಿಯೇ ಜನರಿಗೆ ಪದೇ ಪದೆ ಸಮಸ್ಯೆ ಆಗುವುದು ಸರಿಯಲ್ಲ. ಸುದೀರ್ಘ ಕಾಲದಿಂದ ಸಾಫ್ಟ್ವೇರ್ ಸಮಸ್ಯೆಗಳು ಕಾಡುವುದು ಒಪ್ಪುವ ವಿಷಯವೂ ಅಲ್ಲ’ ತಾಪತ್ರಯ ಹಲವು!
ಇ ಸ್ವತ್ತು ತಂತ್ರಾಂಶದ ಹೊಸ ಅವತರಣಿಕೆಯ ಕಾರಣ ಜು. 27ರಿಂದ 29ರ ವರೆಗೆ ಇ-ಸ್ವತ್ತು ತಂತ್ರಾಂಶ ಕಾರ್ಯನಿರ್ವಹಿಸಿಲ್ಲ. ಬಳಿಕ ಎದುರಾದ ತಾಂತ್ರಿಕ ಸಮಸ್ಯೆಯಿಂದ ಈಗ ಹಲವಾರು ಪಂಚಾಯತ್‌ನಲ್ಲಿ ಸಾರ್ವಜನಿಕ ಸೇವೆಗೆ ತಾಪತ್ರಯ ಎದುರಾಗಿದೆ. ಅದರಲ್ಲಿಯೂ ಆಸ್ತಿ ಮಾರಾಟ, ಖರೀದಿ, ಬ್ಯಾಂಕ್ ಲೋನ್, ಡೋರ್ ಸಂಖ್ಯೆ ಪಡೆಯುವುದು, ವಾಸದ ಕಟ್ಟಡ ಸಹಿತ ವಿವಿಧ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯುವುದು ಇತ್ಯಾದಿ ಕೆಲಸ ಒಂದು ತಿಂಗಳಿನಿಂದ ಕುಂಠಿತಗೊಂಡಿದೆ. ಕೆಲವು ಪಂಚಾಯತ್‌ಗಳಲ್ಲಿ ಹಲವಾರು ಅರ್ಜಿಗಳು ಹೀಗೆ ಬಾಕಿಯಾಗಿವೆ ಎಂಬುದು ದೂರು. “9/11 ಖಾತೆ ಬದಲಾವಣೆಗಳು ಆಗುತ್ತಿಲ್ಲ. ಇದರಿಂದಾಗಿ ಏಕ ನಿವೇ ಶನ ಅರ್ಜಿಗಳು ಬಾಕಿಯಾಗಿ ಮನೆ ಕಟ್ಟಲು ಪರವಾನಿಗೆ ನೀಡಲು ಕಷ್ಟ ವಾಗು ತ್ತಿದೆ. ಭೂ ಪರಿವರ್ತನೆಯಾದ ಜಾಗ ಮಾರಾಟ ಮಾಡಲು ಕೆಲವ ರಿಗೆ ಕಷ್ಟವಾಗಿದೆ. ಕೆಲವರಿಗೆ 9/11 ಹಳೆಯ ಪ್ರತಿ ಪಡೆಯಲೂ ಆಗು ತ್ತಿಲ್ಲ. ಆಗಾಗ ಲಾಗ್ ಔಟ್ ಆಗುತ್ತಿದೆ’ ಎಂಬುದು ಪಿಡಿಒ ಒಬ್ಬರ ಅಭಿಪ್ರಾಯ. ಇ-ಸ್ವತ್ತು ಹೊಸ ವರ್ಶನ್‌ನಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಇದೆ ಎಂಬ ದೂರುಗಳಿವೆ. ಜತೆಗೆ ಕೆಲವು ದಿನದಿಂದ ಲಾಗಿನ್ ಸಮಸ್ಯೆಯೂ ಇದೆ. ಅದನ್ನು ಒಂದೆರಡು ದಿನಗಳಲ್ಲಿ ಸರಿಪಡಿಸುವ ನಿಟ್ಟಿನಲ್ಲಿ ಇಲಾಖೆ ಕ್ರಮ ಕೈಗೊಳ್ಳಲಿದೆ.
– ಡಾ| ಆನಂದ್ ಕೆ.
ಮುಖ್ಯಕಾರ್ಯನಿರ್ವಹಣಾಧಿಕಾರಿ, ದ.ಕ. ದಿನೇಶ್ ಇರಾ