Advertisement

Udupi ಗೀತಾರ್ಥ ಚಿಂತನೆ-32; ಮನುಷ್ಯ ಜನ್ಮ ಸಿಕ್ಕಿದ್ದೇ ದೊಡ್ಡ ಪುಣ್ಯ

12:09 AM Sep 11, 2024 | Team Udayavani |

ಬೇರೆಯವರಿಗೆ ಸಿಕ್ಕಿದ ಅವಕಾಶವೇ ನಿಜವಾದ ಸಂಪತ್ತು, ತಮಗೆ ಸಿಕ್ಕಿದ್ದು ಸಂಪತ್ತಲ್ಲ ಎಂಬ ಬುದ್ಧಿ ಬಹುತೇಕರಿಗೆ ಮೂಡುತ್ತದೆ. “ಎಲ್ಲ ಪುಣ್ಯಾವಕಾಶವೂ ಪುರುಷರಿಗೆ’ ಎಂದು ಮಹಿಳಾಪರವಾದಿಗಳು ಹೇಳುವುದಿದೆ. ಆದರೆ ಧರ್ಮಶಾಸ್ತ್ರಕಾರರು ಎಷ್ಟು ದೂರದೃಷ್ಟಿಯುಳ್ಳವರೆಂದರೆ “ಪುರುಷರು ಮಾಡುವ ಯಾವ ಕೆಲಸವನ್ನೂ ಮಾಡದೆಯೂ ಅಷ್ಟು ಪುಣ್ಯವನ್ನು ಸ್ತ್ರೀಯರಿಗೆ ಸಿಗುವಂತೆ’ ಶಾಸನವನ್ನೇ ಮಾಡಿಟ್ಟರು. ಇದನ್ನು ಯಾರೂ ಓದುವುದಿಲ್ಲ ಅಥವಾ ಓದಿದರೂ ಅವರಿಗದು ಬೇಡ. ನಮಗೆ ಸಿಕ್ಕಿದ್ದರಲ್ಲಿ ಸಂತೋಷಪಟ್ಟರೆ ದುಃಖಕ್ಕೆ ಕಾರಣವೇ ಇರುವುದಿಲ್ಲ. ತಮಗೇನೂ ಸಿಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವುದಿದೆ. ಇದು ಬಹಳ ದೊಡ್ಡ ತಪ್ಪು.

Advertisement

ಏಕೆಂದರೆ ಮನುಷ್ಯ ಜನ್ಮ ಸಿಕ್ಕಿದ್ದೇ ದೊಡ್ಡ ಪುಣ್ಯ. ದುಡಿದು ಸಂಪಾದನೆ ಮಾಡಲು ಎಲ್ಲ ಅವಕಾಶಗಳನ್ನೂ ದೇವರು ಕರುಣಿಸಿದ್ದಾನೆ. ಬೇರಾವ ಪ್ರಾಣಿಗೂ ಈ ಸೌಭಾಗ್ಯವಿಲ್ಲ. ಆದರೂ ತಾನು ನತದೃಷ್ಟ, ದೌರ್ಭಾಗ್ಯವಂತ ಎಂದು ಕೊರಗುತ್ತ ಕುಳಿತು ಆತ್ಮಹತ್ಯೆ ಮಾಡಿಕೊಂಡರೆ ಏನು ಮಾಡೂದು? ಕಷ್ಟದಲ್ಲಿದ್ದವರನ್ನು ನೋಡಿ, ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡಿ ತಾವೆಷ್ಟು ಸುಖೀಗಳು ಎಂದರಿಯಬೇಕು. ತಮಗೆ ಸಿಕ್ಕಿದ ಅವಕಾಶವೇ ಸ್ವಧರ್ಮ. ಭಗವದ್ಗೀತೆಯನ್ನು ಓದಿ ಮನಸ್ಸಮಾಧಾನಗೊಂಡವರನ್ನು ಕೇಳಿದರೆ ಬಹು ಮಂದಿಯ ಉತ್ತರವಿರುವುದು “ಸ್ವಧರ್ಮ’ ವಿಷಯದಲ್ಲಿ ಅಂದರೆ “ಸ್ವಧರ್ಮ’ ಚಿಂತನೆಯಿಂದಲೇ ಮನಸ್ಸಮಾಧಾನಗೊಂಡವರು ಬಹುಮಂದಿ.

ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

Advertisement

Udayavani is now on Telegram. Click here to join our channel and stay updated with the latest news.

Next