Advertisement

Bagalkote: ದ್ವಿಚಕ್ರ ವಾಹನಗಳ ಮುಖಾಮುಖಿ; ಸಾಪ್ಟ್ ವೇರ್ ಇಂಜಿನಿಯರ್ ಸೇರಿ ಮೂವರು ಸಾವು!

01:01 PM Sep 06, 2024 | Team Udayavani |

ಬಾಗಲಕೋಟೆ: ಗಣೇಶ ಉತ್ಸವದ ರಜೆಗೆಂದು ಊರಿಗೆ ಬಂದಿದ್ದ ಬೆಂಗಳೂರಿನ ಸಾಪ್ಟ್ ವೇರ್ ಇಂಜಿನಿಯರ್ ಸೇರಿ ಮೂವರು ಮೃತಪಟ್ಟ ಘಟನೆ ನಗರದ ಹೆಲಿಪ್ಯಾಡ್ ರಸ್ತೆಯಲ್ಲಿ ಸಂಭವಿಸಿದೆ.

Advertisement

ಮೃತಪಟ್ಟರನ್ನು ಬೆಂಗಳೂರಿನ ಸಾಪ್ಟವೇರ್ ಎಂಜಿನಿಯರ್ ರಜನಿ ಒಂದಕುದರಿ (34), ಬಾಗಲಕೋಟೆಯ ಬಿವಿವಿ ಸಂಘದ ದಂತ ವೈದ್ಯಕೀಯ ಕಾಲೇಜಿನ ಉಪನ್ಯಾಸಕಿ ಶೃತಿ ಒಂದಕುದರಿ (32) ಹಾಗೂ ಅಭಿಷೇಕ ದೋತ್ರೆ (20) ಎಂದು ಗುರುತಿಸಲಾಗಿದೆ.

ಬೈಕ್ ನಲ್ಲಿದ್ದ ಇನ್ನೋರ್ವ ತೀವ್ರವಾಗಿ ಗಾಯಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

content-img

ಇಬ್ಬರು ಮಹಿಳೆಯರು ಸ್ಕೂಟಿಯಲ್ಲಿ ಹೊರಟಿದ್ದು, ಹೆಲಿಪ್ಯಾಡ್ ರಸ್ತೆಯ ಬಳಿ ರಸ್ತೆಯ ತಿರುವು ಬದಲಿಸಿಕೊಂಡು ಹೊರಟಿದ್ದರು. ಈ ವೇಳೆ ವೇಗವಾಗಿ ಬಂದ ಬೈಕ್ ಗೆ ಮುಖಾಮುಖಿ ಡಿಕ್ಕಿಯಾಗಿವೆ. ಓರ್ವ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟರೆ, ಯುವಕ ಮತ್ತು ಇನ್ನೋರ್ವ ಮಹಿಳೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ.

Advertisement

ಬೆಂಗಳೂರಿನಲ್ಲಿ ಸಾಪ್ಟವೇರ್ ಎಂಜಿನಿಯರ್ ಆಗಿರುವ ರಜನಿ, ರಜೆಗೆಂದು ಬಾಗಲಕೋಟೆಗೆ ಬಂದಿದ್ದರು. ತನ್ನ ದೂರದ ಸಂಬಂಧಿ ಶೃತಿ ಜತೆಗೆ ಹೊರಗಡೆ ಊಟ ಮಾಡಿ, ಮರಳಿ ಅವರ ಮನೆಗೆ ಹೊರಟಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ.

ಬಾಗಲಕೋಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.