Advertisement

ಕೋವಿಡ್-19 ಗೆ ಬಲಿಯಾದ ದಾಖಲೆಗಳ ಸರದಾರ, ಫುಟ್ ಬಾಲ್ ತಾರೆ ಟಾಮ್ ಡೆಂಮ್ಸೆ

10:09 AM Apr 07, 2020 | keerthan |

ನ್ಯೂಯಾರ್ಕ್; ಅಮೆರಿಕದ ಖ್ಯಾತ ಫುಟ್ ಬಾಲ್ ಆಟಗಾರ ಮತ್ತು 1970ರಿಂದ 2013ರವರೆಗೆ ಎನ್ ಎಫ್ ಎಲ್ ಇತಿಹಾಸದಲ್ಲಿ ಅತೀ ದೂರದಿಂದ ಫಿಲ್ಡ್ ಗೋಲ್ ಹೊಡೆದ ದಾಖಲೆ ಹೊಂದಿದ್ದ ಟಾಮ್ ಡೆಂಮ್ಸೆ ಅವರು ಕೋವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ.

Advertisement

ಬುದ್ದಿಮಾಂದ್ಯ ಮತ್ತು ಅಲ್ ಜೈಮರ್ ನಿಂದ ಬಳಲುತ್ತಿದ್ದ 73ರ ಹರೆಯದ ನ್ಐ ಓರ್ಲೆಯನ್ಸ್ ಸೈಂಟ್ಸ್ ಕಿಕರ್ ಖ್ಯಾತಿಯ ಡೆಂಮ್ಸೆ ಅವರಿಗೆ ಕೋವಿಡ್ ಸೋಂಕು ದೃಢಪಟ್ಟ ಬಳಿಕ ಹೋಮ್ ಕ್ಯಾರಂಟೈನ್ ನಲ್ಲಿದ್ದರೂ ನಿಧನರಾಗಿದ್ದಾರೆ.

1970ರ ನವೆಂಬರ್ 8ರಂದು ನಡೆದ ಪಂದ್ಯದಲ್ಲಿ 63 ಯಾರ್ಡ್ ದೂರದಿಂದ ಅದ್ಭುತವಾಗಿ ಫೀಲ್ಡ್ ಗೋಲ್ ಹೊಡೆದಿರುವುದು ಅವರ ಎನ್ ಎಫ್ ಎಲ್ ಬಾಳ್ವೆಯ ಅತ್ಯಂತ ಶ್ರೇಷ್ಠ ಕ್ಷಣವಾಗಿದೆ. ಈ ಗೋಲಿನಿಂದಾಗಿ ಡೆಂಮ್ಸೆ ಅವರ ತಂಡವು ಗೆಲುವನ್ನು ದಾಖಲಿಸಿತ್ತು.

ತನ್ನ ಬಲ ಪಾದ ಮತ್ತು ಬಲ ಕೈಯಲ್ಲಿ ಬೆರಳುಗಳಿಲ್ಲದೆ ಜನಿಸಿದ್ದ ಡೆಂಮ್ಸೆ ಅವರು ವಿಶೇಷವಾಗಿ ಮಾರ್ಪಡಿಸಿದ್ದ ಬೂಟ್ ನೊಂದಿಗೆ ಫುಟ್ ಬಾಲ್ ಕ್ರೀಡೆಯಲ್ಲಿ ಅಮೋಘ ಸಾಧನೆ ಮಾಡಲು ಹೊರಟರು. ಈ ವಿಶೇಷ ಬೂಟ್ ಅವರಿಗೆ ಗೋಲು ಹೊಡೆಯಲು ಒಳ್ಳೆಯ ಅವಕಾಶ ಕಲ್ಪಿಸಿದೆ ಎಂದು ಕೆಲವರು ಟೀಕೆ ಮಾಡಿದ್ದರು.

ಡೆಂಮ್ಸೆ ಅವರು 1969ರಿಂದ 1979ವರೆಗೆ ನ್ಯಶನಲ್ ಫುಟ್ ಬಾಲ್ ಲೀಗ್ ಪರ ಶ್ರೇಷ್ಠ ನಿರ್ವಹಣೆ ನೀಡಿದ್ದರು. ಈ ದಶಕದ ಅವಧಿಯಲ್ಲಿ ಅವರು ನ್ಯೂ ಓರ್ಲಿಯನ್ಸ್ , ಫಿಲಾಡೆಲ್ಫಿಯ, ಲಾಸ್ ಎಂಜಲೀಸ್, ಹಾಸ್ಟನ್ ಮತ್ತು ಬಫಾಲೋ ಪರ ಆಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next