Advertisement

ಬೆನಕನಹಳ್ಳಿಯಲ್ಲಿ ಕಾಲು ಬಾಯಿ ಲಸಿಕೆ ಕಾರ್ಯಕ್ರಮ

12:06 PM Nov 17, 2017 | Team Udayavani |

ತಿ.ನರಸೀಪುರ: ತಾಲೂಕಿನ ಬೆನಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಜಾನುವಾರುಗಳಿಗೆ ಕಾಲು ಬಾಯಿ ಜ್ವರ ರೋಗ ನಿಯಂತ್ರಣಕ್ಕೆ ಲಸಿಕೆಗಳನ್ನು ಹಾಕಲಾಯಿತು.

Advertisement

ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾಲುಬಾಯಿ ಜ್ವರ ಲಸಿಕೆ ಶಿಬಿರದಲ್ಲಿ ಗ್ರಾಮದ 460 ಹೈನುಗಾರಿಕೆ ಜಾನುವಾರುಗಳಿಗೆ ಲಸಿಕೆ ಹಾಕಲಾಯಿತು. ಅಲ್ಲದೆ ರೈತರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದರಿಂದ 13ನೇ ಸುತ್ತಿನ ಕಾಲು ಬಾಯಿ ಜ್ವರ ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಹೊರಳಹಳ್ಳಿ ಪಶು ವೈದ್ಯಕೀಯ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸೌಮ್ಯಾ, ಜಾನುವಾರುಗಳಿಗೆ ಮಾರಕವಾಗಿರುವ ಕಾಲುಬಾಯಿ ಜ್ವರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು 13ನೇ ಸುತ್ತಿನಲ್ಲಿ ಲಸಿಕೆಗಳನ್ನು ಜಾನುವಾರುಗಳಿಗೆ ಹಾಕಲಾಗುತ್ತಿದೆ. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ನಡೆದ ಶಿಬಿರಗಳನ್ನು ರೈತರು ನೇರವಾಗಿ ಜಾನುವಾರುಗಳನ್ನು ಕರೆತಂದು ಲಸಿಕೆಗಳನ್ನು ಹಾಕಿಸಿಕೊಳ್ಳಬೇಕೆಂದು ಕರೆ ನೀಡಿದರು.

ಹಿರಿಯ ಪಶುವೈದ್ಯ ಪರೀಕ್ಷಕ ಡಿ.ಪ್ರಕಾಶ್‌, ಆರ್‌.ಉದಯರವಿ, ಪಶು ಪರೀಕ್ಷಕರಾದ ಬಿ.ಪಿ.ಪಾಪಣ್ಣ, ಆನಂದ್‌, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಎಂ.ಮಹದೇವಸ್ವಾಮಿ, ಕಾರ್ಯದರ್ಶಿ ಜಿ.ಮಾದಪ್ಪ, ಹಾಲು ಪರೀಕ್ಷಕ ಬಿ.ಜಿ.ಶಿವಶಂಕರ್‌, ಸಹಾಯಕರಾದ ಬಿ.ಪಿ.ಮಹೇಶ, ಬಿ.ಎನ್‌.ಮಹೇಶ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next