Advertisement

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

08:32 PM Jan 08, 2025 | Team Udayavani |

ಉಡುಪಿ: ಕೊರೊನಾ ಕಾಲಘಟ್ಟದಲ್ಲಿ ಸಾಂಕ್ರಾಮಿಕ ರೋಗ ಹಾವಳಿ ಬಗ್ಗೆ ಜ್ಯೋತಿಷ್ಯಾಧಾರಿತವಾಗಿ ಖಚಿತವಾಗಿ ಪರಿಹಾರ ನೀಡಿ ಯೂಟ್ಯೂಬ್ ಮುಂತಾದ ಸಾಮಾಜಿಕ ಜಾಲ ತಾಣಗಳ ಮೂಲಕ ಲಕ್ಷಾಂತರ ಸದಸ್ಯರನ್ನು ಹೊಂದಿ ತನ್ನ ಕಿರು ವಯಸ್ಸಿನಲ್ಲಿಯೇ ಅತ್ಯಂತ ಪ್ರಸಿದ್ದಿಯನ್ನು ಪಡೆದಿರುವ ಅಭಿಘ್ಯಾ ಆನಂದ್ ಇವರು ಪೂಜ್ಯ ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದರು.

Advertisement

ಇದಕ್ಕಾಗಿಯೇ ಅರುಣಾಚಲದ ತನ್ನ ಊರಿನಿಂದ ಉಡುಪಿಗೆ ಬೈಕ್ ಮೂಲಕ ಬಂದ ಸಾಹಸಿ ಈತ.

ಶ್ರೀಕೃಷ್ಣನ ವಿಶೇಷ ಭಕ್ತನಾಗಿ ಒಳ್ಳೆಯ ಸಂಸ್ಕಾರ ಪಡೆದ ಅಭಿಘ್ಯಾ ಪೂಜ್ಯ ಶ್ರೀಪಾದರ ಕೋಟಿ ಗೀತಾ ಲೇಖನ ಯಜ್ಞದ ಮಾಹಿತಿಯನ್ನು ಸಾಮಾಜಿಕ ಜಾಲತಾಣದಿಂದ ಪಡೆದು ಉಡುಪಿಗೆ ಆಗಮಿಸಿದ್ದು ವಿಶೇಷವಾಗಿದೆ.

ಪೂಜ್ಯ ಪರ್ಯಾಯ ಪುತ್ತಿಗೆ ಶ್ರೀಪಾದರು ಈತನಿಗೆ ಇನ್ನಷ್ಟು ಸಮಾಜ ಸೇವೆ ಮಾಡುವಂತಾಗಲಿ ಎಂದು ಹರಸಿ ಭಗವದ್ಗೀತಾ ಲೇಖನ ದೀಕ್ಷೆ ಯನ್ನಿತ್ತು ಹರಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next