ರಾಮನಗರ: ಆರ್ಯವೈಶ್ಯ ಸಮುದಾಯ ದಲ್ಲಿ ಅನೇಕರು ಆಹಾರ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಸ್ವಾವಲಂಬಿ ಜೀವನ ಸಾಗಿಸಲು ನಿಗಮದಿಂದ ಫುಡ್‌ಟ್ರಕ್ ವಿತರಿಸಲು ಉದ್ದೇಶಿಸಲಾಗಿದೆ ಎಂದು ಕರ್ನಾಟಕ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ ತಿಳಿಸಿದರು. ನಗರದ ನಿಗಮದ ಕಚೇರಿಯಲ್ಲಿ ಅರ್ಹ ಫಲಾನುಭವಿಗಳಿಗೆ ಉದ್ಯೋಗ ಸಾಲದ ಪ್ರಮಾಣ ಪತ್ರ ವಿತರಿಸಿದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಫುಡ್ ಟ್ರಕ್ ಮೂಲಕ ಗುಣಮಟ್ಟದ, ಶುಚಿ, ರುಚಿ ಯಾದ ಆಹಾರ ಮಾರಾಟದ ಸಲುವಾಗಿ ನಿಗಮ ನೆರವು ನೀಡಲು ಬಯಸಿದೆ. ಪ್ರತಿ ಟ್ರಕ್‌ಗೆ ಅಂದಾಜು 5 ಲಕ್ಷ ರೂ. ವೆಚ್ಚವಾಗಲಿ ದೆ. ಮೊದಲ ಹಂತದಲ್ಲಿ 100 ಟ್ರಕ್‌ಗಳನ್ನು ರಾಜ್ಯಾದ್ಯಂತ ಸಮುದಾಯದ ಅರ್ಹರಿಗೆ ವಿತರಿಸಲು ಉದ್ದೇಶಿಸಲಾಗಿದೆ. ಅದಕ್ಕೆ ಬೇಕಾದ 5 ಕೋಟಿ ರೂ. ಅನುದಾನ ನೀಡುವಂತೆ ತಾವು ನಿಗಮದ ಮೂಲಕ ಸಿಎಂಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದರು.
ಸಾಲ ಮರುಪಾವತಿಗೆ ಕರೆ: ನಿಗಮದಿಂದ ಸಾಲ ಪಡೆದ ಫಲಾನುಭವಿಗಳು ಪ್ರಾಮಾಣಿಕ ವಾಗಿ ಮರುಪಾವತಿ ಮಾಡಿದರೆ ಸಮು ದಾಯದ ಇನ್ನಷ್ಟು ಬಡವರಿಗೆ ಅನುಕೂಲ ಮಾಡಿಕೊಡಬಹುದು. ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ ಸಮಾಜ ಕಟ್ಟುವ ಕೆಲಸ ಮಾಡುವಂತೆ ಫಲಾನುಭವಿಗಳಿಗೆ ಸಲಹೆ ನೀಡಲಾಗಿದೆ ಎಂದರು. ನಿಗಮದ ಸವಲತ್ತುಗಳ ಬಗ್ಗೆ ಮಾತನಾಡಿ, ರಾಜ್ಯದಲ್ಲಿ ಸಮುದಾಯದ ಜನಸಂಖ್ಯೆ 10 ಲಕ್ಷ ಇದೆ.
ಈ ಪೈಕಿ ಶೇ.20ರಷ್ಟು ಮಂದಿ ತೀರಾ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ನಿಗಮದ ಮೂಲಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಸೌಲಭ್ಯ ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಲು ನೇರಸಾಲ ಯೋಜನೆ ಆರಂಭಿಸಲಾಗಿದೆ ಎಂದರು. ಸ್ವಯಂ ಉದ್ಯೋಗ ನೇರಸಾಲ ಯೋಜನೆ ಅಡಿಯಲ್ಲಿ ಆರ್ಯವೈಶ್ಯ ಸಮುದಾಯಕ್ಕೆ ಸೇರಿದ ಅರ್ಜಿದಾರರು ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಠ 1 ಲಕ್ಷ ರೂ. ಆರ್ಥಿಕ ನೆರವು ಒದಗಿಸಲಾಗುವುದು. ಈ ಪೈಕಿ ಶೇ.20 ಸಬ್ಸಿಡಿ ಇರಲಿದೆ. ಬಡ್ಡಿ ದರ ವಾರ್ಷಿಕ ಕೇವಲ ಶೇ.4. ಈ ಯೋಜನೆಯಡಿಯಲ್ಲಿ ಜಿಲ್ಲೆಯಿಂದ 16 ಫಲಾನುಭವಿಗಳಿಗೆ ತಲಾ ರೂ.1 ಲಕ್ಷ ಸಾಲ ನೀಡಲಾಗುತ್ತಿದೆ.
ಆರ್ಯವೈಶ್ಯ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆಯಿಂದ ಶೈಕ್ಷನಿಕ ಸಾಲ ಪಡೆಯಬಹು ದು ಎಂದರು. ನಿಗಮದ ಜಿಲ್ಲಾ ವ್ಯವಸ್ಥಾಪಕ ಪ್ರಕಾಶ್, ಆರ್ಯ ವೈಶ್ಯ ಸಭೆ ಅಧ್ಯಕ್ಷ ಕೆ.ಎಲ್. ರತ್ನಶೇಖರ್, ಕಾರ್ಯದರ್ಶಿ ಕೆ.ವಿ. ಉಮೇಶ್, ವಾಸವಿ ಟ್ರಸ್ಟ್ ಕಾರ್ಯ ದರ್ಶಿ ಕೆ.ಆರ್.ನಾಗೇಶ್, ಕರ್ನಾಟಕ ಆರ್ಯ ವೈಶ್ಯ ಮಹಾಸಭಾದ (ಕೆಎವಿಎಂಎಸ್) ಜಿಲ್ಲಾಧ್ಯಕ್ಷ ಬಿ.ಕೆ.ರಾಮನಾಥ್, ಕೆಎವಿ ಎಂಎಸ್ ನಿರ್ದೇಶಕ ಕೆ.ವಿ. ಪ್ರಸನ್ನ ಕುಮಾರ್, ಆರ್ಯ ವೈಶ್ಯ ಮಹಿಳಾ ಮಂಡಳಿ ಮತ್ತು ವಾಸವಿ ಯೂತ್ಸ್ ಫೋರಂ ಪದಾಧಿಕಾರಿಗಳು ಇದ್ದರು.
ಸೀಡ್ ಪೇಪರ್! ಓದಿ, ಮಣ್ಣಿನಲ್ಲಿ ಹೂಳಿ, ಗಿಡ ಬೆಳೆಸಿ!: ಬಹುಶಃ ರಾಜ್ಯ ಸರ್ಕಾರದಡಿಯಲ್ಲಿರುವ ಅಭಿವೃದ್ಧಿ ನಿಗಮಗಳ ಪೈಕಿ ಕರ್ನಾಟ ಕ ಆರ್ಯವೈಶ್ಯ ಅಭಿವೃದ್ಧಿ ನಿಗಮ ಪರಿಸರ ವಿಚಾರದಲ್ಲೂ ಕಾಳಜಿವಹಿಸಿದೆ. ನಿಗಮ ದಿಂದ ದೊರೆಯುವ ಸವಲತ್ತುಗಳು, ನಿಗಮದ ಉದ್ದೇಶ ಮುದ್ರಿಸಿರುವ ಕರಪತ್ರ ತುಳಸಿ ಸೇರಿದಂತೆ ಬಗೆಬಗೆ ಹೂಗಳ ಬೀಜ ಒಳಗೊಂಡಿದೆ. ಕರಪತ್ರ ಓದಿದ ನಂತರ ಅದನ್ನು ಮಣ್ಣಿನಲ್ಲಿ ಹೂಳಿದರೆ ಗಿಡ ಬೆಳೆಸಬಹುದು. ಪರಿಸರ ಉಳಿಸಿ, ಸಸಿ ಬೆಳೆಸುವ ಅತ್ಯುನ್ನತ ಆಲೋಚನೆ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ ಅವರದ್ದಾಗಿದೆ.