Advertisement
ವೆಜ್ ಆಗ್ಲಿ ನಾನ್ವೆಜ್ ಆಗ್ಲಿ ಹೊಟ್ಟೆ ಪೂಜೆ ಅಷ್ಟೇ ಮೈನ್ ಇಂಟೆನ್ಶನ್. ಹೀಗಿರುವಾಗ ಇನ್ನು ಕೆಲವರಿಗೆ ನಾನು ಈ ಜನ್ಮದಲ್ಲಿ ಬ್ರಾಹ್ಮಣ ಕುಲದಲ್ಲಿ ಹುಟ್ಟಿದ್ದೇನೆ ಹಾಗಾಗಿ ವೆಜ್ ನ್ನೇ ಪಾಲಿಸುತ್ತೇನೆ ಎಂದು ಹೇಳುವುದುಂಟು.
Related Articles
Advertisement
ಊಟಕ್ಕೇನು ಇಲ್ಲವೆಂದಾಗ ತಂಬುಳಿ ಊಟಕ್ಕೂ ನಾವು ರೆಡಿ. ತಂಬುಳಿ ಎಂದರೆ ಆಹಾರಕ್ಕೆ ಬಳಸುವ ಎಲೆ, ಸೊಪ್ಪು ಅಥವಾ ಕಾಳುಗಳನ್ನು ಜೀರಿಗೆ ಅಥವಾ ಒಣಮೆಣಸಿನ ಜೊತೆಗೆ ಹುರಿದು ಒಂದು ಸ್ವಲ್ಪ ತೆಂಗಿನಕಾಯಿ ಸೇರಿಸಿ ಅರೆದು ಮಜ್ಜಿಗೆ ಸೇರಿಸಿದ ಒಂದು ಬಗೆ. ತಂಬುಳಿ ತಿನ್ನಲೂ ರುಚಿ, ದೇಹಕ್ಕೂ ತಂಪು. ಹಬ್ಬ ಹರಿದಿನಗಳಲ್ಲಿ, ಮದುವೆ ಸಮಾರಂಭಗಳಲ್ಲಿ ವೆರೈಟಿ ವೆಜ್ ಅಡುಗೆಯನ್ನು ಸವಿಯಬಹುದು. ಬಾಳೆಎಳೆಯಲ್ಲಿ ಇಂತಿಂತ ಭಕ್ಷ್ಯಗಳು ಅಲ್ಲಲ್ಲೇ ಹಾಕಿಕೊಳ್ಳಬೇಕೆಂಬ ರೂಢಿಯು ಇದೆ. ಎಲೆಯ ತುದಿಯಲ್ಲಿ ಬಡಿಸಿದ ಸ್ವಲ್ಪ ಪಾಯಸ ತಿಂದು ಊಟ ಆರಂಭವಾಗುತ್ತದೆ. ಅನ್ನದ ಮೇಲೆ ತುಪ್ಪ ಹಾಕಿ ಎರಡು ಬಗೆಯ ಪಲ್ಯದಲ್ಲಿ ಉಂಡ ಬಳಿಕ ತಂಬುಳಿ ನಂತರ ತೋವೆ ಅದರ ಹಿಂದೆಯೇ ಕಟಕ್ ಸಾರು ಬರುತ್ತದೆ. ಆ ಸಾರಿನ ಘಮ…
ಜೊತೆ ಜೊತೆಯಲ್ಲಿ ಅನ್ನವೂ ಬರುತ್ತದೆ. ಸಾರಿನ ನಂತರ ಅನನಾಸು, ಮಾವು ಮುಂತಾದ ಹಣ್ಣುಗಳಿಂದ ಮಾಡುವ ಸಿಹಿ ಖಾರ ಮಿಶ್ರಿತ ಮೆಣಸ್ಕಾಯಿ ರೆಡಿ. ಅದಾದ ಮೇಲೆ ವಿವಿಧ ತರಕಾರಿಗಳ ಸಾಂಬಾರಿನ ಆಗಮನ. ಇಷ್ಟೆಲ್ಲ ತಿಂದು ಖಾರ ಖಾರ ಎಂದೆನಿಸುವಾಗ ವಿವಿಧ ಬಗೆಯ ಸ್ವೀಟ್ ಗಳು, ಪಾಯಸ, ಹೋಳಿಗೆ, ಲಾಡು, ಜಿಲೇಬಿ ಮುಂತಾದವು. ಅದರ ಜೊತೆಗೆ ಖಾರ ಬೂನ್ದಿ, ಮೆಣಸಿನ ಪೋಡಿ, ಚಟ್ಟಂಬಡೆ ಮುಂತಾದ ಖಾರ ಖಾದ್ಯಗಳು ಇರುತ್ತವೆ. ಕೆಲವು ಕಡೆಗಳಲ್ಲಿ ಪೂರಿ, ಗೀ ರೈಸ್, ಚಪಾತಿ, ಕೂರ್ಮ, ಗಸಿ, ಪುಲಾವ್ ಕೂಡ ಇರುತ್ತದೆ. ಇದೆಲ್ಲ ಹೊಟ್ಟೆಯೊಳಗೆ ಇಳಿಸಿದ ಕೂಡಲೇ ಕಾಯಿಹುಳಿಯ ಸರದಿ.
ಬ್ರಾಹ್ಮಣರಿಗೆ ಪ್ರಿಯವಾದ ಪದಾರ್ಥವೆಂದರೆ ಕಾಯಿಹುಳಿ ಅರ್ಥಾತ್ ಮಜ್ಜಿಗೆಹುಳಿ. ಇದಕ್ಕೆ ಏನೋ ಕೆಲವರು ಪುಳ್ಚರ್ ಎಂದು ಗೋಳು ಹೋಯ್ದುಕೊಳ್ಳುತ್ತಾರೆ.
ಇಷ್ಟೆಲ್ಲಾ ಬಗ್ಗೆ ಬಗೆಯ ಅಉಗೆಗಳು ಎಲೆಯನ್ನಪ್ಪಿ, ಆಮೇಲೆ ನನ್ನನ್ನಪ್ಪಿ ಹೊಟ್ಟೆ ಧಿಮ್ಮೆನಿಸಿದಾಗ ಒಂದು ಸ್ವಲ್ಪ ಮಜ್ಜಿಗೆಯಲ್ಲಿ ಉಣ್ಣದಿದ್ದರೆ ನಮ್ಮ ಊಟ ಸಂಪೂರ್ಣವಾಗುವುದೇ ಇಲ್ಲ. ದರ್ ಬುರ್ ಎಂದು ಮಜ್ಜಿಗೆಯನ್ನ ತಿಂದು ಕೈತೊಳೆದರೆ ಹೊಟ್ಟೆ ಪೂಜೆಗೆ ಪೂರ್ಣ ಫಲ ಸಿಗುವುದು ಗ್ಯಾರಂಟಿ.
ಸಸ್ಯಾಹಾರ ಮಾತ್ರವೇ ತಿನ್ನಬೇಕೆಂಬುವುದು ನನ್ನ ವಾದವಲ್ಲ. ನಾ ನೋಡಿದಂತೆ ಸಸ್ಯಾಹಾರ ಸಾತ್ವಿಕ ಗುಣಗಳನ್ನು ಬೆಳೆಸುತ್ತದೆ. ಆರೋಗ್ಯವೂ ಸುಸ್ಥಿತಿಯಲ್ಲಿರುತ್ತದೆ. ಪ್ರಕೃತಿ ದತ್ತವಾದ ಆಹಾರಗಳಿಂದ ದೇಹದಲ್ಲಿ ಉಷ್ಣ ಶೀತಗಳನ್ನು ಕ್ರಮವಾಗಿ ಬ್ಯಾಲೆನ್ಸ್ ಮಾಡಬಹುದು. ಕಾಲಕ್ಕೆ ತಕ್ಕಂತ ಸಾಂಪ್ರಾದಾಯಿಕ ಅಡುಗೆಗಳು ಸಸ್ಯಾಹಾರದಲ್ಲಿ ಸಾಕಷ್ಟಿವೆ. ಆರೋಗ್ಯವಾಗಿರಲು, ಹೃದಯ ಸ್ವಾಸ್ಥ್ಯಕ್ಕೆ, ಶಕ್ತಿಯುತವಾಗಿರಲು, ನಮ್ಮ ಮನಸ್ಸು, ದೇಹ ಸಮತೋಲನದಲ್ಲಿಟ್ಟುಕೊಳ್ಳಲು ದಿ ಬೆಸ್ಟ್ ಸಸ್ಯಹಾರ.