Advertisement

Kota ಸರಣಿ ಸುಸೈ*ಡ್‌ ಬೆನ್ನಲ್ಲೇ ಐಐಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಆತ್ಮಹ*ತ್ಯೆ!

12:45 AM Jan 14, 2025 | Team Udayavani |

ಕೋಲ್ಕತಾ: ಐಐಟಿ ಖರಗ್‌ಪುರದಲ್ಲಿ ವ್ಯಾಸಂಗ ಮಾಡು­ತ್ತಿದ್ದ ವಿದ್ಯಾರ್ಥಿಯೊಬ್ಬನ ಶವ ನೇಣು ಬಿಗಿದ ಸ್ಥಿತಿಯಲ್ಲಿ ರವಿವಾರ ಪತ್ತೆಯಾಗಿದೆ. ಮೃತನನ್ನು ಎಂಜಿನಿಯರಿಂಗ್‌ ವಿದ್ಯಾರ್ಥಿ ಶಾನ್‌ ಮಲಿಕ್‌(21) ಎಂದು ಗುರುತಿಸಲಾಗಿದೆ. ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಪ್ರಕರಣಗಳು ಭೀತಿ ಹುಟ್ಟಿಸಿರುವಂತೆಯೇ ಕೋಲ್ಕತಾದಲ್ಲಿ ಈ ಘಟನೆ ನಡೆದಿದೆ. ತಮ್ಮ ಪುತ್ರನನ್ನು ಭೇಟಿ ಮಾಡಲು ವಿದ್ಯಾರ್ಥಿ ನಿಲಯಕ್ಕೆ ಆಗಮಿಸಿದ್ದ ಪೋಷ­ಕರು, ಎಷ್ಟೇ ಕರೆದರೂ ಮಗ ಪ್ರತಿಕ್ರಿಯಿಸದ ಕಾರಣ, ಬಾಗಿಲು ಒಡೆದು ಒಳಪ್ರವೇಶಿಸಿದ್ದರು. ಈ ವೇಳೆ ಶಾನ್‌ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.