ಮೈಸೂರು: ಸಿಎಫ್ಟಿಆರ್‌ಐನ ಸಂಶೋಧನಾ ಪ್ರಕ್ರಿಯೆ ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿದ್ದು, ಆಹಾರ ತಂತ್ರಜ್ಞಾನವನ್ನು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವಲ್ಲಿ ಯಶಸ್ವಿಯಾಗಿದೆ ಎಂದು ಸಿಎಸ್‌ಐಆರ್-ಸಿಎಫ್‌ಟಿಆರ್‌ಐ ಪ್ರಧಾನ ವಿಜ್ಞಾನಿ ಡಾ.ಆರ್.ಸುಬ್ರಮಣ್ಯನ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಸಿಎಫ್‌ಟಿಆರ್‌ಐನ ಐಎಫ್‌ಟಿಟಿಸಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಿಎಸ್‌ಐಆರ್-ಸಿಎಫ್‌ಟಿಆರ್‌ಐ ಸ್ಥಾಪನಾ ದಿನಾಚರಣೆ ಹಾಗೂ ಮುಕ್ತ ದಿನಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ “ಕೌಶಲ್ಯ ಭಾರತ’ ಯೋಜನೆಯನ್ನು ಸಿಎಫ್‌ಟಿಆರ್‌ಐ ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ಸಾವಿರಾರು ಯುವಕರು, ರೈತರಿಗೆ ತರಬೇತಿ ಕಾರ್ಯಕ್ರಮಗಳನ್ನು ನೀಡುತ್ತಿದೆ.
ಅಲ್ಲದೆ 15 ಇನೂRéಬುಷನ್ ಕೇಂದ್ರಗಳನ್ನು ತೆರೆಯಲು ಮುಂದಾಗಿದ್ದು, ಆ ಮೂಲಕ ಯುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ. ಜತೆಗೆ ಆಹಾರ ತಂತ್ರಜ್ಞಾನವನ್ನು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗುತ್ತಿದ್ದು, ಇದಕ್ಕಾಗಿ ಈಗಾಗಲೇ ಒಂಭತ್ತು ವಿದೇಶಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ಇತ್ತೀಚೆಗೆ ನೆರೆ ಹಾವಳಿಯಿಂದ ತತ್ತರಿಸಿದ ಕೇರಳ, ಕೊಡಗಿನ ಸಂತ್ರಸ್ತರ ನೆರವಿಗೆ ಸಿಎಫ್‌ಟಿಆರ್‌ಐ ಶ್ರಮಿಸಿದೆ. ಆರು ದಿನಗಳ ಕಾಲ ಕೊಡಗು, ವೈನಾಡು, ತ್ರಿಶೂರ್ ಹಾಗೂ ಕೊಚ್ಚಿನ್‌ಗೆ 15.6 ಟನ್ ಆಹಾರವನ್ನು ಪೂರೈಸಲಾಗಿತ್ತು. ಒಟ್ಟು 55.700 ಆಹಾರ ಪೊಟ್ಟಣಗಳನ್ನು ನೆರೆ ಪೀಡಿತ ಪ್ರದೇಶಗಳಿಗೆ ಕಳುಹಿಸಿಕೊಡಲಾಗಿತ್ತು.
ಅಲ್ಲದೇ ಸಿಎಫ್‌ಟಿಆರ್‌ಐನಿಂದ ಈಗಾಗಲೇ ಪೌಷ್ಟಿಕ ಉಪಾಹಾರ ಯೋಜನೆ ಯಶಸ್ವಿಯಾಗಿ ನಡೆಯುತ್ತಿದ್ದು, ಸಂರಕ್ಷಿತ ಉಪಾಹಾರ ಎಲ್ಲರಿಂದಲೂ ಮೆಚ್ಚುಗೆ ಪಡೆದಿದೆ. ಹೀಗಾಗಿ 7 ರಿಂದ 15 ವರ್ಷದ ಮಕ್ಕಳು ಇದರ ಪ್ರಯೋಜನ ಪಡೆಯಬೇಕಿದೆ ಎಂದ ಅವರು, ರಾಗಿ ಮುದ್ದೆ ಮಾಡುವ ಯಂತ್ರ, ಪೂರಿ ಹಾಗೂ ಮಕ್ಕಳಿಗಾಗಿ ಹಾಲಿನ ಪೌಡರ್ ತಯಾರಿಕೆ ಯೋಜನೆಯಿಂದ ಸಿಎಫ್‌ಟಿಆರ್‌ಐ ಗಮನ ಸೆಳೆದಿದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಸಿಎಫ್‌ಟಿಆರ್‌ಐನ ಸಿಬ್ಬಂದಿ ಮಕ್ಕಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಒಂದನೇ ತರಗತಿಯಿಂದ ಪಿಯುಸಿ ವರೆಗಿನ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಇದೇ ವೇಳೆ ನಿವೃತ್ತರಿಗೆ ಹಾಗೂ ಸಿಬ್ಬಂದಿಗೆ ಸ್ಮರಣಿಕೆಗಳನ್ನು ಹಾಗೂ ಸಂಸ್ಥೆಯ ವಾರ್ಷಿಕ ಪ್ರಶಸ್ತಿ ವಿತರಿಸಲಾಯಿತು.
ಸಮಾರಂಭದಲ್ಲಿ ಡಿಆರ್‌ಡಿಒ-ಡಿಎಫ್‌ಆರ್‌ಎಲ್ ನಿರ್ದೇಶಕ ಡಾ.ಅನಿಲ್ ಡಿ.ಸೆಮಾÌಲ್, ಸಿಎಸ್‌ಐಆರ್-ಸಿಎಫ್‌ಟಿಆರ್‌ಐ ನಿರ್ದೇಶಕ ಡಾ.ಕೆ.ಎಸ್.ಎಂ.ಎಸ್. ರಾಘವರಾವ್, ಆಡಳಿತಾಧಿಕಾರಿ ಡಿಜೆಎನ್ ಪ್ರಸಾದ್, ಪ್ರಧಾನ ವಿಜ್ಞಾನಿ ಡಾ.ಕೆ.ವೆಂಕಟೇಶಮೂರ್ತಿ, ವಿಜ್ಞಾನಿ ಡಾ.ಜಿ. ವೆಂಕಟೇಶ್ವರನ್ ಇತರರಿದ್ದರು.