Advertisement

ಕೋವಿಡ್ ಸಂಕಷ್ಟದಲ್ಲಿನ ಆದಿವಾಸಿಗಳಿಗೆ ನೆರವು ನೀಡಿದ ಐಟಿಫಾರ್ ಚೇಂಜ್‌ನ ಶ್ರೀಜಾ

03:48 PM Jul 11, 2021 | Team Udayavani |

ಹುಣಸೂರು: ಕೋವಿಡ್-19 ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ  ಹನಗೋಡು ಹೋಬಳಿಯ ಆದಿವಾಸಿ ಹಾಗೂ ಕೂಲಿ ಕಾರ್ಮಿಕ 500 ಕುಟುಂಬಗಳಿಗೆ ಐಟಿ ಫಾರ್ ಚೇಂಜ್ ಸಂಸ್ಥೆಯು ಟೆಕ್ ಮಹೇಂದ್ರ ಕಂಪನಿ ಸಹಯೋಗದಲ್ಲಿ ಆಹಾರ ಪದಾರ್ಥಗಳ ಕಿಟ್‌ನ್ನು ವಿತರಿಸಿದರು.

Advertisement

ನಾಗರಹೊಳೆ ಉದ್ಯಾನದಂಚಿನ ಭರತವಾಡಿ ಮಾಸ್ತಮ್ಮನ ಹಾಡಿ, ವಿಜಯಗಿರಿ, ಶಂಕರಪುರ, ಮಾದಳ್ಳಿ, ತಟ್ಟೆಕೆರೆ, ಗಿರಿಜನ ಹಾಡಿಗಳ ಕಾಡುಕುಡಿಗಳು ಹಾಗೂ ಕೂಲಿಕಾರ್ಮಿಕ ಕುಟುಂಬಗಳಿಗೆ  ಅಗತ್ಯವಾದ  ಅಕ್ಕಿ, ಬೇಳೆ, ಗೋದಿಹಿಟ್ಟು, ರವೆ, ಅಡಿಗೆಎಣ್ಣೆ, ಉಪ್ಪು, ಸಾಂಬಾರ್ ಪುಡಿ, ಸೇರಿದಂತೆ ಇತರೆ 17 ಪದಾರ್ಥಗಳನ್ನೊಳಗೊಂಡ ಕಿಟ್‌ನ್ನು ವಿತರಿಸಿ ಮಾತನಾಡಿದ ಸಂಸ್ಥೆಯ ಶ್ರೀಜಾ  ಉದ್ಯಾನವನದಂಚಿನ ಹಾಡಿಗಳಲ್ಲಿ ವಾಸಿಸುವ ಆದಿವಾಸಿ ಕುಟುಂಬಗಳು ಕೊಡಗು, ಕೇರಳದ ಎಸ್ಟೇಟ್ ಮತ್ತಿತರ ಕಡೆಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಲಾಕ್‌ಡೌನ್‌ನಿಂದಾಗಿ ಕೂಲಿಗೂ ಹೋಗಲಾಗದ ಪರಿಸ್ಥಿತಿ ಇರುವುದನ್ನು ಮನಗಂಡ ನಮ್ಮ ಸಂಸ್ಥೆಯ ಮುಖ್ಯಸ್ಥೆ ಅನುಪಮಸುರೇಶ್‌ರ ಮಾರ್ಗದರ್ಶನದಲ್ಲಿ ಕಳೆದ ವರ್ಷದ ಕೋವಿಡ್ ಸಂದರ್ಭದಲ್ಲೂ ನೂರಾರು ಬಡ ಗಿರಿಜನ ಕುಟುಂಬಗಳಿಗೆ ಸಂಸ್ಥೆವತಿಯಿಂದ ಪಡಿತರ ಕಿಟ್‌ಗಳನ್ನು ವಿತರಿಸಲಾಗಿತ್ತೆಂದರು.

ಇದನ್ನೂ ಓದಿ: ಮಾದಹಳ್ಳಿಕಲ್ಲೂರಪ್ಪನ ಬೆಟ್ಟದ ತಪ್ಪಲಿನ ಸರ್ಕಾರಿ ಕೆರೆ ಒತ್ತುವರಿ ಬಿಡಿಸಿ

ಗುತ್ತಿಗೆ ಶಿಕ್ಷಕರು, ಆಶಾ ಕಾರ್ಯಕರ್ತೆಯರಿಗೂ ಕಿಟ್;

ಲಾಕ್‌ಡೌನ್ ಹಿನ್ನಲೆಯಲ್ಲಿ ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿರುವ ತಾಲೊಕಿನ 7 ಆಶ್ರಮಶಾಲೆಗಳ 28 ಮಂದಿ ಹೊರಗುತ್ತಿಗೆ  ಶಿಕ್ಷಕರಿಗೆ ಹಾಗೂ ಹಾಡಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೂ ಸಹ ಪಡಿತರ ಕಿಟ್ ವಿತರಿಸಿದರು.

Advertisement

ಈ ವೇಳೆ  ಸಂಸ್ಥೆಯ ಶಬರೀಶ್, ಹರೀಶ್, ಮುಖಂಡರಾದ  ದಾ.ರಾ.ಮಹೇಶ್ ನೇರಳಕುಪ್ಪೆಮಹದೇವ್, ರಾಜು, ಕೆ.ಕೆ.ಸ್ವಾಮಿ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next