ರಾಮನಗರ: ಮಾಗಡಿಯಲ್ಲಿ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಮಾಗಡಿ ಯೋಜನಾ ಪ್ರಾಧಿ ಕಾರದಿಂದ 3 ಕೋಟಿ ರೂ ಬಳಕೆಗೆ ಅನುಮತಿಗಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ರಂಗಧಾಮಯ್ಯ ಹೇಳಿದರು.
ತಾಲೂಕಿನ ಬಿಡದಿ ಪಟ್ಟಣದಲ್ಲಿ ಬಿಡದಿ ಹೋಬಳಿಯ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ಗಳನ್ನು ಮತ್ತು ಪುರಸಭೆಯ ನೌಕರರಿಗೆ ಹಣ್ಣುಗಳ ಕಿಟ್ಗಳನ್ನು ವಿತರಿಸಿ ಮಾತನಾಡಿದರು.
ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅನುಕೂಲವಾಗುವಂತೆ ವೈದ್ಯಕೀಯ ಉಪಕರಣಗಳ ಖರೀದಿ, ಸೋಂಕಿತರಿಗೆ ಆರೈಕೆಗೆ ಅಗತ್ಯವಸ್ತುಗಳ ಖರೀದಿ, ಕೋವಿಡ್ ಕರ್ಫ್ಯೂ ನಿಂದಾಗಿ ಆರ್ಥಿಕವಾಗಿ ಸಂಕಷ್ಟಕ್ಕೆ ಗುರಿಯಾಗಿರುವ ಕುಟುಂಬಗಳಿಗೆ ನೆರವು ಹೀಗೆ ವಿವಿಧ ವಿಚಾರಗಳಲ್ಲಿ ಸ್ಪಂದಿಸಲು 3 ಕೋಟಿ ರೂ. ಧನವನ್ನು ವಿನಿಯೋಗಿಸಲು ಅನುಮತಿಗಾಗಿ ಈಗಾಗಲೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
80 ಆಶಾ ಕಾರ್ಯಕರ್ತರಿಗೆ ನೆರವು: ಕೋವಿಡ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರ, ಪೌರಕಾರ್ಮಿಕರ ಸೇವೆಯನ್ನು ಶ್ಲಾ ಸಿದ ಅವರು, ಇಂದು ಸೋಂಕು ತಹಬದಿಗೆ ಬರಲು ಈ ಕಾರ್ಯಕರ್ತರ ಸೇವೆಯೇ ಮುಖ್ಯ ಎಂದರು. ಮಾಗಡಿ ಪಟ್ಟಣ ಸೇರಿದಂತೆ ಕೆಲೆವೆಡೆ ಆಶಾ ಕಾರ್ಯಕರ್ತೆಯರಿಗೆ ಆಹಾರದ ಕಿಟ್ಗಳನ್ನು ವಿತರಿಸಿರುವುದಾಗಿ ಇಂದು ಬಿಡದಿ ಹೋಬಳಿಯ ಸುಮಾರು 80 ಆಶಾ ಕಾರ್ಯಕರ್ತರಿಗೆ ಅಕ್ಕಿ,ರವೆ, ಬೇಳೆ, ಬೆಲ್ಲ, ಅಡುಗೆ ಎಣ್ಣೆ, ಗೋದಿ ಹಿಟ್ಟು, ಉಪ್ಪು, ಈರುಳಿ ಮುಂತಾದ ಆಹಾರ ಪದಾರ್ಥಗಳು ಉಳ್ಳ ಕಿಟ್ ವಿತರಿಸಲಾಗಿದೆ.
ಪುರಸಭೆಯ 40ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಮಾವಿನ ಹಣ್ಣು, ಬಾಳೆಹಣ್ಣು, ಅನಾನಸ್, ಕಿತ್ತಳೆ ಹಣ್ಣು, ದಾಳಿಂಬೆ ಮುಂತಾಗಿ 7 ವಿವಿಧ ಬಗೆಯ ಹಣ್ಣುಗಳನ್ನು ವಿತರಿಸಿರುವುದಾಗಿ ತಿಳಿಸಿದರು. ಮಾಗಡಿಯಲ್ಲಿ ಆಕ್ಸಿಜನ್ ಘಟಕ: ಕೆಆರ್ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ಅವರು ಮಾಗಡಿಯಲ್ಲಿ ಆಕ್ಸಿ ಜನ್ ಉತ್ಪಾದಕ ಘಟಕವನ್ನು ಸ್ಥಾಪಿಸಲು ಮುಂದಾಗಿ ದ್ದಾರೆ ಎಂದರು. ಮಾಗಡಿ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಸಂದೀಪ್ ರೆಡ್ಡಿ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ನಾರಾಯಣ ರೆಡ್ಡಿ, ಬಿಜೆಪಿ ಬಿಡದಿ ಹೋಬಳಿ ಮಂಡಲ ಅಧ್ಯಕ್ಷ ರವಿ, ಪ್ರಮುಖರಾದ ಶರತ್, ರಾಜೇಶ್, ಧನಂಜಯ, ನಗರ ಬಿಜೆಪಿ ಮಂಡಲದ ಅಧ್ಯಕ್ಷ ಪಿ.ಶಿವಾನಂದ ಇತರರಿದ್ದರು.