ಬಂಗಾರಪೇಟೆ: ಕಟ್ಟಡ ಕಾರ್ಮಿಕರಿಗೆವಿತರಿಸಲು ರಾಜ್ಯ ಬಿಜೆಪಿ ಸರ್ಕಾರ ನೀಡಿದ್ದಆಹಾರದಕಿಟ್‌ಗಳನ್ನು ಸ್ಥಳೀಯ ಶಾಸಕರುತಮ್ಮ ರೆಸಾರ್ಟ್‌ನಲ್ಲಿ ದಾಸ್ತಾನು ಮಾಡಿಕೊಂಡು, ತಮ್ಮ ಬೆಂಬಲಿಗರಿಗೆ ಮಾತ್ರಹಂಚುತ್ತಿದ್ದಾರೆ. ಅದರಲ್ಲೂ ರಾಜಕೀಯಮಾಡುತ್ತಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ವಾಗ್ಧಾಳಿ ನಡೆಸಿದರು.
ತಾಲೂಕಿನ ಬೂದಿಕೋಟೆ, ಕಾಮ ಸಮುದ್ರ ಗ್ರಾಮದಲ್ಲಿ ಕಟ್ಟಡ, ಇತರೆನಿರ್ಮಾಣ ಕಾರ್ಮಿಕರಿಗೆ ಸರ್ಕಾರದಿಂದನೀಡಿದ್ದ ಆಹಾರದ ಕಿಟ್ ವಿತರಿಸಿಮಾತನಾಡಿ, ಸರ್ಕಾರ ಕೋಲಾರ ಜಿಲ್ಲೆಗೆ70 ಸಾವಿರ ಕಿಟ್ ಪೂರೈಕೆ ಮಾಡಿದ್ದು,ಸಂಸದರು, ಶಾಸಕರು ಒಟ್ಟಾಗಿ ಸೇರಿಅರ್ಹರಿಗೆ ವಿತರಿಸಬೇಕು. ಆದರೆ,ಸ್ಥಳೀಯ ಶಾಸಕರು ಪûಾತೀತವಾಗಿ ಕಿಟ್‌ವಿತರಿಸದೇ ತಾರತಮ್ಯ ಮಾಡುತ್ತಿದ್ದಾರೆಎಂದು ಹೇಳಿದರು.
ಕಿಟ್ಗೆ ಶಾಸಕರ ಫೋಟೋ: ಕ್ಷೇತ್ರಕ್ಕೆಬಂದಿದ್ದ 4 ಸಾವಿರ ಕಿಟ್‌ಗಳನ್ನು ತಮ್ಮರೆಸಾರ್ಟ್‌ನಲ್ಲಿ ಇರಿಸಿಕೊಂಡು, ಕಾಂಗ್ರೆಸ್‌ಗೆ ಮತ ನೀಡಿದವರಿಗೆ ಮಾತ್ರ ಹಂಚುತ್ತಿದ್ದಾರೆ. ಅದು ಅವರ ಭಾವಚಿತ್ರ ಹಾಕಿಕೊಂಡು ಕೊಡುತ್ತಿದ್ದಾರೆ. ರಾಜ್ಯ ಸರ್ಕಾರಬಡವರಿಗೆ ಪûಾತೀತವಾಗಿ ಆಹಾರ ಕಿಟ್‌ಕೊಟ್ಟರೆ, ಶಾಸಕರು ಅದರಲ್ಲಿಯೂರಾಜಕಾರಣ ಮಾಡುತ್ತಿರುವುದು ಕಂಡುನಾನೇ ಖುದ್ದಾಗಿ ಬಂದು ಅರ್ಹರಿಗೆಹಂಚುತ್ತಿದ್ದೇನೆ. ಇದರಲ್ಲಿ ಯಾರಭಾವಚಿತ್ರವನ್ನೂ ಅಳವಡಿಸಿಲ್ಲ.
ನಮಗೆಪ್ರಚಾರ ಮುಖ್ಯವಲ್ಲ, ಜನರ ಹಿತ ಮುಖ್ಯಎಂದು ಹೇಳಿದರು.ಕೊರೊನಾ ಲಾಕ್‌ಡೌನ್ ವೇಳೆ ಬಿಜೆಪಿಸರ್ಕಾರವು ಏನೂ ಮಾಡಿಲ್ಲ ಎಂದುಆರೋಪಿಸುವ ಶಾಸಕರು, ಕಿಟ್‌ಗಳನ್ನುತಮ್ಮ ಹಿಂಬಾಲಕರಿಗೆ ಮಾತ್ರ ಏಕೆ ವಿತರಣೆಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.ಬಂಗಾರಪೇಟೆಕ್ಷೇತ್ರ ಯಾರಪ್ಪನ ಸ್ವತ್ತಲ್ಲ,ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದರೆರಾಜಕಾರಣದಲ್ಲಿ ಮುಂದುವರಿಸುವರು.ಇಲ್ಲದಿದ್ದರೆ ಗೇಟ್ ಪಾಸ್ ಕೊಡುವರು.
ಸ್ಥಳೀಯ ಶಾಸಕರು ಅಧಿಕಾರ ದುರ್ಬಳಕೆಮಾಡಿಕೊಂಡು ಪತ್ನಿ, ತಾಯಿ ಹೆಸರಲ್ಲಿಅಕ್ರಮ ಸರ್ಕಾರಿ ಜಮೀನು ಮಂಜೂರುಮಾಡಿಕೊಂಡಿರುವ ರೀತಿ, ನಾನು ಆಸ್ತಿಮಾಡಿಲ್ಲ ಎಂದು ಗಂಭೀರ ಆರೋಪಿಮಾಡಿದರು. ನಾನು ಸಂಸದನಾಗಿರುವುದುಕೇವಲ ಲೇಔಟ್ ಮಾಡಿ ದುಡ್ಡುಸಂಪಾದನೆ ಮಾಡುವುದಕ್ಕೆ ಅಲ್ಲ ಎಂದುಹೇಳಿದರು.ಸಭೆಯಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷಬಿ.ವಿ.ಮಹೇಶ್, ಬಿ.ಹೊಸರಾಯಪ್ಪ, ತಾ.ಅಧ್ಯಕ್ಷ ನಾಗೇಶ್, ಕಾಮಸಮುದ್ರ ಜಿಪಂಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಬತ್ತಲಹಳ್ಳಿಪದ್ಮಾವತಿ ಮಂಜುನಾಥ್, ಕೃಷ್ಣಪ್ಪ,ಟಿಎಪಿಸಿಎಂಎಸ್ ಅಧ್ಯಕ್ಷ ಜಿ.ರಾಜಾರೆಡ್ಡಿ,ಸೀತಾರಾಮಪ್ಪ, ಬೂದಿಕೋಟೆ ಮುತ್ತು,ಅನುಚಂದ್ರಶೇಖರ್, ರಮೇಶ್,ಕಾಮಸಮುದ್ರ ತಿಪ್ಪಾರೆಡ್ಡಿ, ಬೋಡಗುರಿRಪಾರ್ಥಸಾರಥಿ, ಜೆಸಿಬಿ ನಾರಾಯಣಪ್ಪ,ದೋಣಿಮಡಗು ಗ್ರಾಪಂ ಅಧ್ಯಕ್ಷ ಮಹಾದೇವ್, ಮಾಜಿ ಅಧ್ಯಕ್ಷ ಮಂಜುನಾಥ್,ಕಾಮಸಮುದ್ರ ವೆಂಕಟೇಶ್ ಮುಂತಾದವರು ಹಾಜರಿದ್ದರು.