Advertisement

ಅಬ್ಬಾ…ಉ.ಕೊರಿಯಾದಲ್ಲಿ ಆಹಾರ ಬಿಕ್ಕಟ್ಟು: ಒಂದು ಕೆಜಿ ಬಾಳೆಹಣ್ಣು ಬೆಲೆ 3,300 ರೂಪಾಯಿ!

01:50 PM Jun 21, 2021 | Team Udayavani |

ಪ್ಯೊಂಗ್ಯಾಂಗ್: ಕೋವಿಡ್ 19 ಲಾಕ್ ಡೌನ್, ನಿರ್ಬಂಧಗಳ ಹೇರಿಕೆಯಿಂದ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಜತೆಗೆ ದೈನಂದಿನ ಬಳಕೆ ವಸ್ತುಗಳ ಬೆಲೆಯೂ ಹೆಚ್ಚಳವಾಗುತ್ತಿದೆ. ಏತನ್ಮಧ್ಯೆ ಉತ್ತರಕೊರಿಯಾದಲ್ಲಿ ತೀವ್ರ ಆಹಾರ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಅಗತ್ಯ ವಸ್ತುಗಳ ಆಹಾರ, ಪದಾರ್ಥಗಳ ಬೆಲೆ ಗಗನಕ್ಕೇರಿದೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ತಿಳಿಸಿದೆ.

Advertisement

ಇದನ್ನೂ ಓದಿ:ಫೈನಲ್ ಟೆಸ್ಟ್: ವಿರಾಟ್ ವಿಕೆಟ್ ನಮಗೆ ದೊಡ್ಡ ತಿರುವು ನೀಡಿತು ಎಂದ ಜ್ಯಾಮಿಸನ್

ದೇಶದಲ್ಲಿನ ತೀವ್ರವಾದ ಆಹಾರದ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಇದೊಂದು ಉದ್ವಿಗ್ನ ಪರಿಸ್ಥಿತಿ ಎಂದು ಉತ್ತರಕೊರಿಯಾ ಸರ್ವೋಚ್ಛ ನಾಯಕ ಕಿಮ್ ಜಾಂಗ್ ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ.

ಕಳೆದ ವರ್ಷದ ಚಂಡಮಾರುತದ ಹೊಡೆತದಿಂದಾಗಿ ಸಂಭವಿಸಿದ ಹಾನಿಯಿಂದಾಗಿ ಕೃಷಿ ಕ್ಷೇತ್ರ ತನ್ನ ಧಾನ್ಯ ಉತ್ಪಾದನೆಯ ಯೋಜನೆಯನ್ನು ಪೂರೈಕೆ ಮಾಡಲು ವಿಫಲವಾದ ಪರಿಣಾಮ ಆಹಾರ ಕೊರತೆಗೆ ಕಾರಣವಾಗುವ ಮೂಲಕ ಜನರು ಉದ್ವಿಗ್ನಗೊಳ್ಳುವಂತಾಗಿದೆ ಎಂದು ಕಿಮ್ ಜಾಂಗ್ ಉನ್ ತಿಳಿಸಿದ್ದಾರೆ.

ಅಬ್ಬಾ ಹುಬ್ಬೇರಿಸಬೇಡಿ…ಒಂದು ಕೇಜಿ ಬಾಳೆಹಣ್ಣಿಗೆ…
ಹೌದು ಬೆಲೆ ಏರಿಕೆ ಬಿಸಿ ಹೇಗೆ ಜನಸಾಮಾನ್ಯರಿಂದ ಹಿಡಿದು ಮಧ್ಯಮವರ್ಗದವರಿಗೆ ತಟ್ಟಬಹುದು ಎಂಬುದಕ್ಕೆ ಉತ್ತರಕೊರಿಯಾದ ಪರಿಸ್ಥಿತಿಯೇ ಸಾಕ್ಷಿಯಾಗಿದೆ. ವರದಿಗಳ ಪ್ರಕಾರ, ಉತ್ತರಕೊರಿಯಾದಲ್ಲಿ ಆಹಾರ, ಪದಾರ್ಥಗಳ ಬೆಲೆ ಗಗನಕ್ಕೇರತೊಡಗಿದೆ.

Advertisement

ರಾಜಧಾನಿ ಪೊಂಗ್ಯಾಂಗ್ ನಲ್ಲಿ ಒಂದು ಕೆಜಿ ಬಾಳೆ ಹಣ್ಣನ್ನು 45 ಡಾಲರ್ (3,335 ರೂಪಾಯಿ) ಗೆ ಮಾರಾಟ ಮಾಡಲಾಗುತ್ತಿದೆ. ಬ್ಲ್ಯಾಕ್ ಟೀ ಪ್ಯಾಕೆಟ್ ಗೆ 5,190 ರೂಪಾಯಿ, ಕಾಫಿ ಪುಡಿ ಒಂದು ಕೆಜಿ ಪ್ಯಾಕೇಟ್ ಗೆ 7,414 ರೂಪಾಯಿ ಎಂದು ವರದಿ ತಿಳಿಸಿದೆ. ದೇಶದಲ್ಲಿ ತಲೆದೋರಿರುವ ಆಹಾರ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವಂತೆ ಕೇಂದ್ರ ಸಮಿತಿ ಸಭೆಯಲ್ಲಿ ಕಿಮ್ ಪಕ್ಷದ ಮುಖಂಡರಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next