ದಕ್ಷಿಣ ಭಾರತೀಯ, ಉತ್ತರ ಭಾರತೀಯ, ಚೈನೀಸ್ ಆಹಾರ ತಿನ್ನುವ ನಿಮ್ಮ ನಾಲಿಗೆ ಹೊಸದನ್ನೇನಾದರೂ ಬಯಸುತ್ತಾ ಇದೆಯಾ? ಹೌದು ಅಂತಾದರೆ, ಬ್ರ್ಯುಆ್ಯಂಡ್ ಬಾರ್ಬೆಕ್ಯುನ “ಅರೇಬಿಕ್ ಫುಡ್ ಫೆಸ್ಟಿವಲ್’ಗೆ ಬನ್ನಿ. ಅರೇಬಿಯನ್ನರದ್ದು ಆದರಾತಿಥ್ಯದಲ್ಲಿ ಮಾತ್ರವಲ್ಲ, ಪಾಕಶಾಸ್ತ್ರದಲ್ಲೂ ಎತ್ತಿದ ಕೈ. ಮಧ್ಯಪೂರ್ವ, ಭಾರತೀಯ ಹಾಗೂ ಮೆಡಿಟರೇನಿಯನ್ ಶೈಲಿಯ ಅಂಶಗಳನ್ನು ಒಳಗೊಂಡ ಅರೇಬಿಯನ್ ಖಾದ್ಯಗಳು ನಿಮಗೆ ಇಷ್ಟವಾಗಬಹುದು. ಫತಾಯರ್ ಬಿ ಸಬನಿಖ್, ಮನ್‌ಕಿಶ್ ಝತರ್, ಬಾತಿಂಜನ್ ಮೆಕ್ಲಿ, ಫಲಾಫೆಲ್ ಮುಂತಾದ ಸಸ್ಯಾಹಾರಿ ಖಾದ್ಯಗಳು, ಸ್ಯಾಂಬೌಸೆಕ್ ಲಾಹೆ¾, ಕೆಬೆ ಅಲೆರಾಸ್, ಜವಾನ್Ø ಮುಂತಾದ ಮಾಂಸಾಹಾರಿ ಖಾದ್ಯಗಳ ರುಚಿ ನೋಡಿ.
ಎಲ್ಲಿ?: ಬ್ರ್ಯು ಆ್ಯಂಡ್ ಬಾರ್ಬೆಕ್ಯು, ಮೈಕ್ರೋಬ್ಯುವರಿ ಪಬ್, 4ನೇ ಮಹಡಿ, ಸೋಲ್ ಸ್ಪೇಸ್ ಅರೇನ ಮಾಲ್, ಔಟರ್ ರಿಂಗ್ ರಸ್ತೆ, ಮಹದೇವಪುರ
ಯಾವಾಗ?: ಆಗಸ್ಟ್ 4-11