Advertisement

ಭೂಮಿ ಫ‌ಲವತ್ತತೆಗೆ ಸಾವಯವ ಕೃಷಿ ಅನುಸರಿಸಿ

09:33 PM Oct 26, 2019 | Lakshmi GovindaRaju |

ಚಾಮರಾಜನಗರ: ಸಾವಯವ ಕೃಷಿ ಅನುಸರಿಸುವುದರಿಂದ ಆರೋಗ್ಯಕರ ಹಾಗೂ ಉತ್ತಮವಾದ ಆಹಾರವನ್ನು ಬೆಳೆಯಬಹುದು ಎಂದು ನವ ಭಾರತ್‌ ಕಂಪೆನಿಯ ಮ್ಯಾನೇಜರ್‌ ಎಂ.ಇ. ಮಂಜುನಾಥ್‌ ತಿಳಿಸಿದರು.

Advertisement

ತಾಲೂಕಿನ ಕಿಲಗೆರೆ ಗ್ರಾಮದಲ್ಲಿ ಪ್ರಗತಿಪರ ರೈತ ಷಡಕ್ಷರಪ್ಪ ಅವರ ತೋಟದಲ್ಲಿ ನವಭರತ್‌ ಕಂಪನಿಯಿಂದ ನಡೆದ ಅರಿಶಿನ, ಕೋಸು ಹಾಗೂ ಟೊಮೆಟೋ, ಬಾಳೆ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರಾಸಾಯಿನಿಕ ಗೊಬ್ಬರ ಹಾಗೂ ಕ್ರಿಮಿ ನಾಶಕಗಳನ್ನು ಹೆಚ್ಚಾಗಿ ಬಳಕೆ ಮಾಡಿ, ವಿಷಯುಕ್ತ ಆಹಾರ ಉತ್ಪಾದನೆ ಮಾಡುವ ಜೊತೆಗೆ ಭೂಮಿಯ ಫ‌ಲವತ್ತತೆಯನ್ನು ಕಳೆದು ಕೊಂಡಿದ್ದೇವೆ. ಹೀಗಾಗಿ ಪರಿಸರಕ್ಕೆ ಪೂರಕವಾದ ಸಾವಯವ ಗೊಬ್ಬರವನ್ನು ಬಳಸಿ, ಆರೋಗ್ಯಕರ ಬೆಳೆ ಬೆಳೆಯಬೇಕೆಂದು ಸಲಹೆ ನೀಡಿದರು.

ರೈತರು ಸಾವಯವ ಕೃಷಿ ಮಾಡಿ: ಕೃಷಿ ಅಧಿಕಾರಿ ಶ್ರೀಧರ್‌ ಮಾತನಾಡಿ, ಈ ಹಿಂದೆ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಸಲುವಾಗಿ ವಿಜ್ಞಾನಿಗಳು ಹಾಗೂ ಕೃಷಿ ತಜ್ಞರು ರಾಸಾಯನಿಕಯುಕ್ತ ಕೃಷಿ ಪದ್ಧತಿಯನ್ನು ಪರಿಚಯ ಮಾಡಿದರು. ಇದು ಕ್ರಮೇಣ ವಿಷಯುಕ್ತವಾಗುತ್ತ ಮನುಷ್ಯ ಹಾಗೂ ಸಾಕು ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರ ಕೊಡುಗೆಯಾಗಿ ಇಲ್ಲದ ಖಾಯಿಲೆಗಳನ್ನು ಎಲ್ಲಾ ಜನರಲ್ಲೂ ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ರೈತರು ಸಾವಯವ ಕೃಷಿ ಪದ್ದತಿ ಅನುಸರಿಸಬೇಕೆಂದು ತಿಳಿಸಿದರು.

ಸಾವಯವ ಬೇಸಾಯದಿಂದ ನೆಮ್ಮದಿ: ಪ್ರಗತಿ ಪರ ರೈತ ಷಡಕ್ಷರಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಸಾವಯವ ಕೃಷಿ ಬೇಸಾಯವನ್ನು ಅಳವಡಿಸಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದೇನೆ. ನಮ್ಮ ಸುತ್ತ ಮುತ್ತಲಿನ ರೈತರು ಸಹ ಇದೇ ಪದ್ಧತಿಯನ್ನು ಅನುಸರಿಸುವಂತೆ ತಿಳಿಸಿದರು. ಕ್ಷೇತ್ರೋತ್ಸವದಲ್ಲಿ ಕಂಪನಿಯ ಅಧಿಕಾರಿಗಳಾದ ದರ್ಶನ್‌, ಹರೀಶ್‌, ಮಹೇಶ್‌ ಎಚ್‌.ಎಸ್‌, ನಾಗರಾಜ್‌, ಬಿ. ಲೋಕೇಶ್‌, ಹಾಗೂ ಕಿಲಗೆರೆ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next