Advertisement

ಜಾನಪದ ಕಲೆ ಉಳಿವಿಗೆ ಶ್ರಮಿಸಿ: ದತ್ತಾ

06:26 PM Feb 06, 2018 | Team Udayavani |

ಕಡೂರು(ಬೀರೂರು): ದೇಶೀಯ ಕಲೆ, ಸಾಂಸ್ಕೃತಿಕ ವೈಭವ ಉಳಿಸಿ ಬೆಳೆಸುವುದು ನಾಗರಿಕರ ಕರ್ತವ್ಯ ಎಂದು ಶಾಸಕ ವೈ.ಎಸ್‌.ವಿ ದತ್ತ ಹೇಳಿದರು.

Advertisement

ಪಟ್ಟಣದ ಕೆ.ಎಲ್‌.ಕೆ. ಮೈದಾನದಲ್ಲಿ ಹಮ್ಮಿಕೊಂಡಿದ್ದ ಆಳ್ವಾಸ್‌ ನುಡಿಸಿರಿ ಮತ್ತು ವಿರಾಸತ್‌ ವೈಭವ ಘಟಕದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ
ಅವರು ಮಾತನಾಡಿದರು. ಜಗತ್ತಿನ ಯಾವ ದೇಶದಲ್ಲೂ ಇರದಷ್ಟು ಕಲಾ ಪ್ರಕಾರಗಳು ನಮ್ಮಲ್ಲಿವೆ. ಈ ಆಧುನಿಕ ಯುಗದಲ್ಲೂ ಇಂತಹ
ಸಾಂಸ್ಕೃತಿಕ, ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವಂತ ಕಾರ್ಯವನ್ನು ಆಳ್ವಾಸ್‌ ಸಂಸ್ಥೆ ಮಾಡುತ್ತಿದೆ ಎಂದರು. 25 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ
ಶಿಕ್ಷಣ ವ್ಯವಸ್ಥೆ ಕಲ್ಪಿಸಿರುವ ಡಾ| ಮೋಹನ್‌ ಆಳ್ವಾಸ್‌ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಬಹುದಿತ್ತು. ಆದರೆ, ಹಾಗೆ ಮಾಡದೆ ಶಿಕ್ಷಣವನ್ನು
ಮತ್ತಷ್ಟು ಗುಣಾತ್ಮಕವಾಗಿಸಲು ಶ್ರಮಿಸುತ್ತಿದ್ದಾರೆ ಎಂದರು. 

ಜೋ ಮೇರಿ ಲೋಬೋ ಸ್ವಾಮೀಜಿ , ವೈದ್ಯಕೀಯ ಶಿಕ್ಷಣ ಪಡೆದವರು ಜನರ ರೋಗ ನಿವಾರಿಸುವ ಕಾಯಕದಲ್ಲಿ ತೊಡಗಿದ್ದರೆ ಡಾ| ಮೋಹನ್‌ ಆಳ್ವಾ
ಅವರು ಜ್ಞಾನ ಪ್ರಸರಣದ ಮೂಲಕ ಜನರಿಗೆ ರೋಗವೇ ಬಾರದಂತೆ ಜಾಗೃತಿ ಮೂಡಿಸುವ ಉತ್ತಮ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ಅದರಲ್ಲೇ ತೃಪ್ತಿ ಕಂಡುಕೊಂಡಿದ್ದಾರೆ ಎಂದರು. ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ| ಮೋಹನ್‌ ಆಳ್ವಾ ಮಾತನಾಡಿ,  ವಿದ್ಯಾರ್ಥಿಯೆಂದರೆ ಕೇವಲ ಶಿಕ್ಷಣ ಪಡೆಯುವುದಷ್ಟೇ ಅಲ್ಲ. ತನ್ನಲ್ಲಿರುವ ಆಸಕ್ತಿಗೆ ಅನುಗುಣವಾಗಿ ಸುಸಂಸ್ಕೃತ ಜೀವನ ರೂಪಿಸಿಕೊಳ್ಳಲು ಕಲಾ ಆರಾಧಕನಾಗುವುದು ಅಗತ್ಯ. ನಮ್ಮ ಸಂಸ್ಥೆಯು ಮಕ್ಕಳ ಆಸಕ್ತಿ ಮತ್ತು ಬದುಕಿಗೆ ಪೂರಕವಾಗಬಲ್ಲ ಕಲಾ ಪ್ರಕಾರಗಳಿಗೆ ಪೋತ್ಸಾಹ ನೀಡಲಾಗುತ್ತಿದೆ. ಸೂಕ್ತ ತರಬೇತಿ ನೀಡಿ ದೇಶೀಯ ಕಲೆಗಳನ್ನು ಅವರಲ್ಲಿ ಬಿತ್ತಬೇಕು ಎಂದರು. 

ನೂರಾರು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಬದುಕಿನ ಜೊತೆಗೆ ವಿವಿಧ ಕಲಾ ಪ್ರಕಾರಗಳಲ್ಲಿ ಪ್ರಾವಿಣ್ಯತೆ ಹೊಂದಿ ದೇಶ ವಿದೇಶಗಳ ವೇದಿಕೆಗಳಲ್ಲಿ ಪ್ರದರ್ಶಿಸುವ ಮಟ್ಟಿಗೆ ಬೆಳೆದು ನಿಂತಿದ್ದಾರೆ. ದೇಶದ ಕಲೆ ಮತ್ತು ಸಂಸ್ಕೃತಿ ಉಳಿಸಲು ಆಳ್ವಾಸ್‌ ನುಡಿಸಿರಿ, ವಿರಾಸತ್‌ ಘಟಕಗಳು ಕೆಲಸ
ಮಾಡುತ್ತಿವೆ ಎಂದರು. ಕೇರಳದ ಮೋಹಿನಿಯಾಟ್ಟಂ, ಬಡಗು ತಿಟ್ಟಿನ ಶ್ರೀರಾಮ ಪಟ್ಟಾಭಿಷೇಕ, ಆಂಧ್ರದ ಬಂಜಾರ ನೃತ್ಯ, ಮಣಿಪುರದ
ಸ್ಟಿಕ್‌ ಡ್ಯಾನ್ಸ್‌, ಒಡಿಶಾದ ಗೋಟಿಪುವ. ಮಹಾರಾಷ್ಟ್ರದ ಲಾವಣಿ ನೃತ್ಯ, ದಕ್ಷಿಣ ಭಾರತದ ಭರತನಾಟ್ಯಂ, ಒಡಿಸ್ಸಾದ ಕಥಕ್‌, ಶ್ರೀಲಂಕಾದ ಕ್ಯಾಂಡಿಯನ್‌, ಮಣಿಪುರದ ಡೋಲ್‌ಚಲಂ, ಪುರುಲಿಯಾ ಸಿಂಹನೃತ್ಯ, ತೆಂಕುತಿಟ್ಟಿನ ಯಕ್ಷಗಾನ ಅಗ್ರಪೂಜೆ ಕಥಾನಕ, ಗುಜರಾತಿನ ದಾಂಡಿಯಾ, ಮಲ್ಲಕಂಬ ಕಸರತ್ತು, ರೋಪ್‌ ಕಸರತ್ತು, ನೃತ್ಯ ಪ್ರಕಾರಗಳು ಹಾಗೂ ಅಂತಿಮವಾಗಿ ವಂದೇ ಮಾತರಂ ನೃತ್ಯ ಸಾವಿರಾರು ಪ್ರೇಕ್ಷಕರ ಮನಸೂರೆಗೊಂಡವು.

Advertisement

Udayavani is now on Telegram. Click here to join our channel and stay updated with the latest news.

Next