Advertisement

ಗ್ರಾಮೀಣ ಕ್ರೀಡೆಗಳತ್ತ ಗಮನ ಹರಿಸಿ

05:47 PM Apr 21, 2018 | |

ಅಡಹಳ್ಳಿ: ಗ್ರಾಮೀಣ ಕ್ರೀಡೆ ಉಳಿಸಿ-ಬೆಳೆಸುವಲ್ಲಿ ಯುವಕರು ಹೆಚ್ಚಿನ ಗಮನ ಹರಿಸಿಬೇಕು ಎಂದು ಅಡಹಳಟ್ಟಿಯ ಮಲ್ಲಿಕಾರ್ಜುನ ಕೇರಿ ಶರಣರು ಹೇಳಿದರು.

Advertisement

ಸಮೀಪದ ಅಡಹಳಟ್ಟಿ ಗ್ರಾಮದ ಬಸವಣ್ಣ ಜಾತ್ರಾ ಮಹೋತ್ಸವದಲ್ಲಿ ವಿವಿಧ ಸಾಹಸಮಯ ಕ್ರೀಡೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿ, ಪ್ರಾಚೀನ ಕಾಲದಲ್ಲಿ ರಾಜ ಮಹಾರಾಜರು ತಮ್ಮ ಆಸ್ಥಾನದಲ್ಲಿ ಮಲ್ಲಯುದ್ಧ, ಕುಸ್ತಿ, ಬಾರ ಎತ್ತುವ ಕ್ರೀಡಾ ಪಟುಗಳನ್ನು ಉತ್ತೇಜಿಸುವ ಸಲುವಾಗಿ ಗ್ರಾಮೀಣ ಕ್ರೀಡೆಗಳಿಗೆ ಸಹಾಯ-ಸಹಕಾರ ನೀಡುತ್ತಿದ್ದರು. ಆದರೆ ಇಂದು ಸಂಗ್ರಾಮ ಕಲ್ಲು, ಹಾಗೂ ಚೀಲ ಭಾರ ಎತ್ತುವ ಸಾಹಸಮಯ ಕಸರತ್ತುಗಳು ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದರು.

ಈ ವೇಳೆ ಘಟಿವಾಳಪ್ಪ ಗುಡ್ಡಾಪುರ, ಶ್ರೀಶೈಲ ತಾಂವಶಿ, ಜೆ.ಡಿ. ಕೇರಿ, ವಿಜಯ ಕಲಮಡಿ, ಚಿದಾನಂದ ಮಠಪತಿ, ಗಂಗಪ್ಪ ಖೋತ, ನಿಂಗಯ್ಯ ಮಠಪತಿ, ಸಂಗಯ್ಯ ಮಠ, ಕಲ್ಮೇಶ ಕಲಮಡಿ, ಡಾ| ಅಣ್ಣಪ್ಪ ಚಿಕ್ಕಟ್ಟಿ, ರಮೇಶ ಕೋಟ್ಯಾಳ, ಬಸವರಾಜ ಗುಡದಿನ್ನಿ, ಅಪ್ಪಾಸಾಬ ಕಲಮಡಿ, ಮಹಾದೇವ ಹಿಪ್ಪರಗಿ, ಚಿದಾನಂದ ಗುಡ್ಡಾಪುರ, ಶ್ರೀಶೈಲ ಕೋತ ಸೇರಿದಂತೆ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next