Advertisement
ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ವಿಷನ್ ಗ್ರೂಪ್‌ನ ಮುಖ್ಯಸ್ಥ ಉಲ್ಲಾಸ್ ಕಾಮತ ಅವರು ಎಫ್‌ಎಂಸಿಜಿ ಕ್ಲಸ್ಟರ್ ಸ್ಥಾಪನೆ ಕುರಿತ “ಟ್ರಾನ್ಸ್‌ಫಾರ್ಮ್ ಹುಬ್ಬಳ್ಳಿ-ಧಾರವಾಡ ವಿಷನ್ ಗ್ರೂಪ್ 2020-2025′ ವರದಿಯನ್ನು ಹಸ್ತಾಂತರಿಸಿದರು.ವರದಿ ಸ್ವೀಕರಿಸಿ ಮಾತನಾಡಿದ ಸಚಿವ ಜಗದೀಶ ಶೆಟ್ಟರ, ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಬದ್ಧವಾಗಿ ಉತ್ತರ-ಕರ್ನಾಟಕದ ಅಭಿವೃದ್ಧಿಗಾಗಿ “ಟ್ರಾನ್ಸ್‌ಫಾರ್ಮ್ ಹುಬ್ಬಳ್ಳಿ-ಧಾರವಾಡ’ ರೂಪುರೇಷೆಯ ದಾಖಲೆ ಸಿದ್ಧವಾಗಿದೆ. 2025ರ ವೇಳೆಗೆ ಶೇ.35 ಆರ್ಥಿಕ ಬೆಳವಣಿಗೆಯೊಂದಿಗೆ 5 ಲಕ್ಷ ಉದ್ಯೋಗಾವಕಾಶ ಸೃಷ್ಟಿಸುವ ಗುರಿ ಇದೆ. ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್ ಸ್ಥಾಪನೆ ಮೂಲಕ ಈ ಕ್ಷೇತ್ರದ ಹೂಡಿಕೆದಾರನ್ನು ಸೆಳೆಯಲಾಗುವುದು ಎಂದು ಹೇಳಿದರು.
ಪ್ರದೇಶದಲ್ಲಿ 12-15 ಸಾವಿರ ಕೋಟಿ ರೂ. ಸಾಮಾಜಿಕ ಆರ್ಥಿಕ ವಹಿವಾಟು ನಡೆಯುವ ಅಂದಾಜಿದೆ. ಪ್ರಸ್ತಾವಿತ ಎಫ್‌ಎಂಸಿಜಿ ಕ್ಲಸ್ಟರ್ ಮೂರು ಹಂತದಲ್ಲಿ ಅಭಿವೃದ್ಧಿಯಾಗಲಿದ್ದು, ಪ್ರತಿ ಹಂತದಲ್ಲೂ 50 ಎಫ್‌ಎಂಸಿಜಿ ಕಂಪನಿಗಳು ಅಂದಾಜು 2500 ಕೋಟಿ ರೂ. ಹೂಡಿಕೆ ಮಾಡುವ ನಿರೀಕ್ಷೆ ಇದೆ. ಅದೇ ರೀತಿ ಪ್ರತಿ ಹಂತದಲ್ಲೂ 50,000 ಉದ್ಯೋಗ ಸೃಷ್ಟಿ ಸಾಧ್ಯತೆ ಇದ್ದು, ಪ್ರತಿ ಹಂತದಲ್ಲೂ 500 ಎಕರೆ ಪ್ರದೇಶ ಬಳಕೆಯಾಗಲಿದೆ. ರಾಜ್ಯದ ಮುಂದಿನ ಕೈಗಾರಿಕಾ ಕ್ರಾಂತಿಗೆ ಈ ಯೋಜನೆ ನಾಂದಿ ಹಾಡಲಿದೆ.
ಮುಂದಿನ 4-5 ವರ್ಷಗಳಲ್ಲಿ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕೂಡ ಇದು ನೆರವಾಗಲಿದೆ ಎಂದರು.
Related Articles
ಅದರ ಫಲವಾಗಿ ಹಲವಾರು ಯೋಜನೆಗಳು ಸಾಕಾರ ರೂಪ ತಾಳುತ್ತಿವೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತ ಅಧ್ಯಯನಕ್ಕೆ ವಿಷನ್ ಗ್ರೂಪ್ ರಚಿಸಲಾಗಿತ್ತು. ರಾಜ್ಯ ಸರ್ಕಾರ ಹಾಗೂ ಕೈಗಾರಿಕೆ ಇಲಾಖೆಯ ಪ್ರಯತ್ನದಿಂದಾಗಿ ಈ
ವರದಿ ಸಿದ್ಧಗೊಂಡಿದೆ ಎಂದರು. ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತ, ಕೆಐಡಿಬಿ ಸಿಇಒ ಡಾ| ಶಿವಶಂಕರ, ಎಫ್‌ಎಂಸಿಜಿ ಕ್ಲಸ್ಟರ್ ನೋಡಲ್ ಬಿ.ಕೆ ಶಿವಕುಮಾರ ಇನ್ನಿತರರಿದ್ದರು.
Advertisement