ಮೈಸೂರು: ಜಿಲ್ಲೆಯಬನ್ನೂರು, ತಿ.ನರಸೀಪುರ, ನಂಜನಗೂಡು, ಎಚ್.ಡಿ.ಕೋಟೆರಸ್ತೆಗಳು ಸೇರಿದಂತೆ ವರ್ತುಲ ರಸ್ತೆಯಲ್ಲಿರುವ 7 ಜಂಕ್ಷನ್‌ಗಳಿಗೆ ನಗರದ ರಸ್ತೆಗಳುಸೇರುವಕಾರಣ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು ಇಲ್ಲೆಲ್ಲಾ ಫ್ಲೈಓವರ್ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದು ಮೈಸೂರು-ಕೊಡಗುಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್‌ಸಿಂಹ ತಿಳಿಸಿದರು.
ನಗರದ ಕೆಆರ್‌ಎಸ್ ರಸ್ತೆಯಲ್ಲಿರುವರಾಯಲ್ ಇನ್ ಹೋಟೆಲ್ ಜಂಕ್ಷನ್ ಬಳಿಮೇಲ್ಸೇತುವೆ ನಿರ್ಮಾಣಕ್ಕೆ ಶುಕ್ರವಾರ ಸ್ಥಳಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಕೆಆರ್‌ಎಸ್ ರಸ್ತೆಯ ರಾಯಲ್ ಇನ್‌ಹೋಟೆಲ್ ಜಂಕ್ಷನ್ ಬಳಿ ಫ್ಲೈಓವರ್‌ನಿರ್ಮಾಣ ಮಾಡಲಾಗುತ್ತಿದೆ. ಇನ್ನು 6ಸ್ಥಳಗಳಲ್ಲಿಯೂ ಫ್ಲೈಓವರ್ ನಿರ್ಮಾಣಕ್ಕೆಶೀಘ್ರ ಕ್ರಮ ಕೈಗೊಳ್ಳಲಾಗುತ್ತದೆ. ಕೇಂದ್ರಸರ್ಕಾರಕ್ಕೆ ಈ ಸಂಬಂಧ ಪ್ರಸ್ತಾವನೆಸಲ್ಲಿಸಲಾಗುವುದು ಎಂದು ತಿಳಿಸಿದರು.
50 ಕೋಟಿ ವೆಚ್ಚದ ಕಾಮಗಾರಿ:ಲೋಕೋಪಯೋಗಿ ಇಲಾಖೆ, ಮೈಸೂರುನಗರ ಅಭಿವೃದ್ಧಿ ಪ್ರಾಧಿಕಾರ(ಮುಡಾ),ಎನ್‌ಎಚ್‌ಎಐ ಹಾಗೂ ರೈಲ್ವೆ ಇಲಾಖೆಸೇರಿ 50ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಸಲಾಗುತ್ತಿದೆ. ಇದಕ್ಕೆ ಟೆಂಡರ್‌ನಡೆಸಿ ನಂತರ ನಕ್ಷೆಗೆ ಅನುಮೋದನೆಪಡೆಯಲಾಗುತ್ತದೆ.
2022ರ ಸೆಪ್ಟೆಂಬರ್‌ವೇಳೆಗೆ ದಶಪಥ ರಸ್ತೆ ಕಾಮಗಾರಿ ಪೂರ್ಣವಾಗುತ್ತದೆ. ರಿಂಗ್ ರಸ್ತೆ ಹಸಿರೀಕರಣಕ್ಕೆಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.ವಿದ್ಯುತ್ ದೀಪದ ಕಂಬಗಳ ವೈರ್‌ಗಳನ್ನುಇಲಿಗಳು ತಿಂದುಹಾಕಿ ವಿದ್ಯುತ್ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ. ಇದಕ್ಕಾಗಿಮುಂದಿನ ದಿನಗಳಲ್ಲಿ ಆ ವೈರ್‌ಗಳನ್ನುಎಚ್‌ಡಿಪಿಇ ಅಥವಾ ಜಿಐ ಪೈಪ್‌ನೊಳಗೆಹಾಕಲಾಗುತ್ತದೆ ಎಂದು ಅವರುತಿಳಿಸಿದರು.
ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷಎಚ್.ವಿ.ರಾಜೀವ್, ನಗರಪಾಲಿಕೆಆಯುಕ್ತ ಲಕ್ಷಿ ¾àಕಾಂತ ರೆಡ್ಡಿ, ರಾಷ್ಟ್ರೀಯಹೆದ್ದಾರಿ ಪ್ರಾಧಿಕಾರದ ಚೀಫ್ ಎಂಜಿನಿಯರ್ ವಿಜಯಕುಮಾರ್ ಮತ್ತಿತರಅಧಿಕಾರಿಗಳು ಹಾಜರಿದ್ದರು.