Advertisement
ಅಮೆರಿಕಕ್ಕೆ ಅಮೆರಿಕವನ್ನೇ ನಾಶ ಮಾಡುವ ಸಾಮರ್ಥ್ಯ ಇದೆ ಎಂದು ಹೇಳಲಾಗಿರುವ ಈ ಚಂಡಮಾರುತದ ಪ್ರಭಾವದಿಂದಾಗಿ ಫ್ಲೋರಿಡಾದ ನೈಋತ್ಯ ಭಾಗದ ಕರಾವಳಿಯಲ್ಲಿ ಹತ್ತು ಲಕ್ಷಕ್ಕೂ ಅಧಿಕ ಮಂದಿ ನಿವಾಸಿಗಳಿಗೆ ವಿದ್ಯುತ್ ಸಂಪರ್ಕ ವ್ಯತ್ಯಯವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿ, ಹವಾಮಾನ ಇಲಾಖೆ ನೀಡುವ ಎಚ್ಚರಿಕೆಯ ಸೂಚನೆಗಳನ್ನು ಪಾಲಿಸಿ. ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಬರೆದುಕೊಂಡಿದ್ದಾರೆ.ಮಳೆ ಮತ್ತು ಗಾಳಿಯ ಪ್ರಭಾವ ದಿಂದಾಗಿ ಮಿಯಾಮಿಯಲ್ಲಿ 5-10 ಅಡಿ ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ. ಬಹು ಮಹಡಿ ಕಟ್ಟಡಗಳು ಇರು ವಲ್ಲೆಡೆ ಬೃಹತ್ ಗಾತ್ರದ ಕ್ರೇನ್‌ಗಳನ್ನು ಮತ್ತು ಸಿಬಂದಿಯನ್ನು ನಿಯೋಜಿಸಲಾಗಿದೆ.
ಮ್ಯಾರಥಾನ್ ನಗರ ಭಾರೀ ತೊಂದರೆ ಗೀಡಾಗಿದ್ದು, ಮಳೆಯ ಪ್ರಭಾವ ದಿಂದಾಗಿ ವಿದ್ಯುತ್, ದೂರವಾಣಿ ಸಂಪರ್ಕ ಸ್ಥಗಿತಗೊಂಡಿದೆ. ಶಾಲೆಗಳು ಮತ್ತು ಇತರ ಸಾರ್ವಜನಿಕ ಕಚೇರಿಗಳ ಕಟ್ಟಡಗಳು ನೀರಿನಲ್ಲಿ ಮುಳುಗಿವೆ. ರಸ್ತೆಗಳಲ್ಲಿ ಆಳೆತ್ತರದ ನೀರು ಹರಿದು ಬಂದಿದೆ. 60 ಮಂದಿ ಭಾರತೀಯರ ರಕ್ಷಣೆ
ಚಂಡಮಾರುತ ಇರ್ಮಾ ಅಮೆರಿಕದ ಫ್ಲೋರಿಡಾಕ್ಕೆ ಅಪ್ಪಳಿಸಿರುವಂತೆಯೇ ಸೈಂಟ್ ಮಾರ್ಟಿನ್‌ನಿಂದ 60 ಮಂದಿ ಭಾರತೀಯರನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯಲಾಗಿದೆ. ಈ ಪೈಕಿ ಹೆಚ್ಚಿನವರು ತಾತ್ಕಾಲಿಕ ವೀಸಾದಡಿ ಅಮೆರಿಕಕ್ಕೆ ಆಗಮಿಸಿದವರಾಗಿದ್ದಾರೆ. ತಾತ್ಕಾಲಿಕ ವೀಸಾ ಇಲ್ಲದವರಿಗೆ ಅದನ್ನು ಒದಗಿಸುವ ನಿಟ್ಟಿನಲ್ಲಿ ಭಾರತೀಯ ರಾಯಭಾರ ಕಚೇರಿ ಅಮೆರಿಕದ ವಿದೇಶಾಂಗ ಸಚಿವಾಲಯದ ಜತೆ ನಿಕಟ ಸಂಪರ್ಕ ಇರಿಸಿಕೊಂಡಿದೆ. ಕೆರೆಬಿಯನ್ ದ್ವೀಪ ಪ್ರದೇಶವಾಗಿರುವ ಸೈಂಟ್ ಮಾರ್ಟಿನ್‌ನಿಂದ 1,200 ಮಂದಿಯನ್ನು ಶನಿವಾರ ಪಾರು ಮಾಡಲಾಗಿದೆ. ಇನ್ನೂ 5 ಸಾವಿರ ಮಂದಿ ಸಿಕ್ಕಿ ಹಾಕಿಕೊಂಡಿದ್ದಾರೆ.