Advertisement
ಇತಿಹಾಸದಲ್ಲಿ ಈ ಹಿಂದೆ ಎಂದೂ ಕಂಡರಿಯದ ಜಲ ಪ್ರಳಯ ದುರಂತದಿಂದ ಮಳೆ ಕಡಿಮೆಯಾಗಿರುವುದರಿಂದ ಕೇರಳ ದಡ ಸೇರುತ್ತಿದ್ದು, ಸಂತ್ರಸ್ತರಲ್ಲಿ ಹೊಸ ಆಶಾಕಿರಣ ಮೂಡತೊಡಗಿದೆ.
Related Articles
Advertisement
ಪ್ರಳಯ ಪೀಡಿತ ಪ್ರದೇಶಗಳಲ್ಲಿ ನೀರಿನ ಮಟ್ಟ ಕುಸಿದು ಸಂತ್ರಸ್ತರು ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದರೂ ನೀರಿನಲ್ಲಿ ಮುಳುಗಿದ್ದ ಮನೆ, ರಸ್ತೆ, ಪರಿಸರ ಪ್ರದೇಶಗಳು ತ್ಯಾಜ್ಯದಿಂದ ತುಂಬಿಕೊಂಡಿದೆ. ಇದರಿಂದಾಗಿ ಶುಚೀಕರಣ ಸಮಸ್ಯೆ ತಲೆದೋರಿದೆ. ಪ್ರವಾಹದಲ್ಲಿ ಸಹಸ್ರಾರು ಜಾನುವಾರುಗಳು ಮತ್ತು ಸಾಕುಪ್ರಾಣಿಗಳು ಸಿಲುಕಿ ಸಾವಿಗೀಡಾಗಿವೆ. ನೆರೆ ಇಳಿದಂತೆ ಅವುಗಳ ಮೃತದೇಹಗಳು ಕಂಡು ಬರುತ್ತಿದ್ದು ಕೊಳೆಯುತ್ತಿವೆ. ಕೊಳೆತ ಪ್ರಾಣಿಗಳನ್ನು ಸಾಗಿಸುವುದು, ರಸ್ತೆ ಚರಂಡಿ, ಪರಿಸರದ ಪ್ರದೇಶಗಳನ್ನು ಶುಚೀಕರಿಸುವ ಕೆಲಸಗಳು ಸಮಸ್ಯೆಯಾಗಲಿವೆ.
ಕನ್ನಡ ಬಳಗದ ಸೇವೆ ಕಾಸರಗೋಡಿನ ಸಿರಿಚಂದನ ಕನ್ನಡ ಯುವ ಬಳಗದ 12 ಮಂದಿ ನೆರೆ ಪೀಡಿತ ವಯನಾಡಿಗೆ ತೆರಳಿ ಆ ಬಳಿಕ ಕೊಡಗಿಗೆ ಹೋಗಲಿದ್ದು, ಒಂದು ದಿನ ಪೂರ್ತಿ ಅಲ್ಲಿ ಸೇವೆ ಸಲ್ಲಿಸಲಿದೆ. ಇದರ ನೇತೃತ್ವವನ್ನು ಡಾ| ರತ್ನಾಕರ ಮಲ್ಲಮೂಲೆ ಅವರು ವಹಿಸಿದ್ದಾರೆ. ಶುಚಿಗೆ ಕಾಸರಗೋಡಿನ ತಂಡಗಳು
ಪ್ರಳಯದಿಂದ ತತ್ತರಿಸಿರುವ ವಿವಿಧ ಜಿಲ್ಲೆಗಳ ಪ್ರದೇಶಗಳಲ್ಲಿ ಶುಚೀಕರಣಕ್ಕಾಗಿ ಕಾಸರಗೋಡು ಜಿಲ್ಲೆಯ ಹಲವು ರಾಜಕೀಯ ಪಕ್ಷಗಳೂ ಪ್ರತ್ಯೇಕ ತಂಡಗಳನ್ನು ಕಳುಹಿಸಲಿವೆೆ. ಕಾಂಗ್ರೆಸ್‌ನ ಒಂದು ತಂಡ ಶುಚೀಕರಣಕ್ಕಾಗಿ ಈಗಾಗಲೇ ವಯ ನಾಡಿಗೆ ತೆರಳಿದೆ. ಇನ್ನೊಂದು ತಂಡ ಎರ್ನಾಕುಳಂಗೆ ತೆರಳಲು ಸಜ್ಜಾಗಿದೆ. ಅದೇ ರೀತಿ ಡಿವೈಎಫ್‌ಐ 12 ಬ್ಲಾಕ್‌ಗಳ ಪ್ರತಿಯೊಂದು ಬ್ಲಾಕ್‌ನಿಂದ 50 ಮಂದಿಯ ತಂಡವನ್ನು ಶುಚೀಕರಣಕ್ಕೆ ಕಳುಹಿಸಲಿದೆ. ಈ ಪೈಕಿ ಉದುಮ ಬ್ಲಾಕ್ ತಂಡ ಸೋಮವಾರ ಪ್ರಯಾಣ ಆರಂಭಿಸಿದೆ. ಇದೇ ರೀತಿ ಆರ್‌ಎಸ್‌ಎಸ್‌ನ ಹಲವು ತಂಡಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈಗಾಗಲೆ ಶುಚೀಕರಣ ಪ್ರಕ್ರಿಯೆಯನ್ನು ಆರಂಭಿಸಿದೆ. ಮುಸ್ಲಿಂ ಲೀಗ್‌ನ ವೈಟ್ ಗಾರ್ಡ್ ಎಂಬ ತಂಡ ರೂಪಿಸಲಾಗಿದ್ದು, ಪ್ರತಿ ಪಂಚಾಯತ್‌ನಿಂದ ತಲಾ 30 ಮಂದಿಯ ತಂಡ ತೆರಳಲಿದೆ. ನಕಲಿ ಸಂಘಟನೆಗಳ ಬಗ್ಗೆ ಜಾಗ್ರತೆ
ರಾಜ್ಯ ಪ್ರಳಯದಲ್ಲಿ ಸಿಲುಕಿರುವಾಗ ಅವರಿಗೆ ಆರ್ಥಿಕ ಸಹಾಯ ಒದಗಿಸುವ ಹೆಸರಿನಲ್ಲಿ ಜನರಿಂದ ದೇಣಿಗೆ ಪಡೆದು ಜೇಬಿಗಿಳಿಸುವ ನಕಲಿ ಸಂಘಟನೆಗಳು ಕಾರ್ಯವೆಸಗುತ್ತಿವೆ ಎಂದೂ ಆ ಬಗ್ಗೆ ಜನರು ಜಾಗ್ರತೆ ವಹಿಸಬೇಕೆಂದು ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದಾರೆ. ಹೀಗೆ ನಕಲಿ ಸಂಘಟನೆಗಳು ಮತ್ತು ಕೇವಲ ಕಾಗದದಲ್ಲಿ ಮಾತ್ರವೇ ಸೀಮಿತವಾಗಿರುವ ಸಂಘಟನೆಗಳು ಹಣ ಸಂಗ್ರಹ ನಡೆಸುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠಿನ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದೂ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.